“ತನುಶ್ರೀ ಪಿತ್ರೋಡಿ”ಗೆ ಯೋಗ ರತ್ನ ಪ್ರಶಸ್ತಿ ಪುರಸ್ಕಾರ

ಧರ್ಮಸ್ಥಳ : ಧರ್ಮಸ್ಥಳದಲ್ಲಿ “ಹೃದಯಕ್ಕಾಗಿ ಯೋಗ” ಎಂಬ ಧ್ಯೇಯದಲ್ಲಿ ಆಚರಿಸಲಾದ ೫ ನೇ ವಿಶ್ವ ಯೋಗ ಸಮಾರಂಭದಲ್ಲಿ ಖ್ಯಾತ ಬಾಲ ಪ್ರತಿಭೆ ವಿಶ್ವದಾಖಲೆಯ ಸರದಾರ್ತಿ ತನುಶ್ರೀ ಪಿತ್ರೋಡಿಯವರಿಗೆ “ಯೋಗ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಉಡುಪಿ ಜಿಲ್ಲೆಯ ಉದ್ಯಾವರ ಗ್ರಾಮದ ಪಿತ್ರೋಡಿಯ ತನುಶ್ರೀ ಹಲವಾರು ದಾಖಲೆಯ ಒಡತಿ. ಈಗಾಗಲೇ ಹಲವಾರು ದಾಖಲೆಗಳ ಸರಮಾಲೆಗಳೊಂದಿಗೆ, ಸನ್ಮಾನ ಮತ್ತು ವಿಶೇಷ ಗೌರವವನ್ನು ಪಡೆಯುತ್ತಿರುವ ಈಕೆ ಇನ್ನೂ ಆರನೇ ತರಗತಿಯ ವಿದ್ಯಾರ್ಥಿನಿ. ನೃತ್ಯದೊಂದಿಗೆ ಉಡುಪಿ ಜಿಲ್ಲೆಯಲ್ಲಿ ಎಲ್ಲರಿಗೂ ಚಿರಪರಿಚಿತರಾಗಿರುವ ಈ ಬಾಲ ಪ್ರತಿಭೆ, ನೂರಕ್ಕೂ ಅಧಿಕ ವೇದಿಕೆಗಳಲ್ಲಿ ತನ್ನ ಪ್ರತಿಭೆಯನ್ನು ತೋರ್ಪಡಿಸಿ ಜನರ ಮೆಚ್ಚುಗೆ ಗಳಿಸಿದ್ದಾರೆ. ಕಳೆದ ಕೆಲವು ಸಮಯಗಳಿಂದ ಯೋಗದಲ್ಲಿ ತನ್ನ ಪ್ರತಿಭೆಯನ್ನು ತೋರ್ಪಡಿಸಿರುವ ತನುಶ್ರೀ ಸಾಧನೆಯನ್ನು ಗುರುತಿಸಿ ಧರ್ಮಸ್ಥಳದ ಶಾಂತಿವನ ಟ್ರಸ್ಟ್, ಪ್ರಶಸ್ತಿ ನೀಡಿ ಗೌರವಿಸಿದೆ.

“ಹೃದಯಕ್ಕಾಗಿ ಯೋಗ” ಎಂಬ ಧ್ಯೇಯದಡಿ ಆಚರಿಸಲಾದ ೫ನೇ ವಿಶ್ವ ಯೋಗ ಸಮಾರಂಭವನ್ನು ಹೇಮಾವತಿ ವಿ ಹೆಗ್ಗಡೆಯವರು ಉದ್ಘಾಟಿಸಿದರು. ಯೋಗದಲ್ಲಿ ನಾಲ್ಕು ವಿಶ್ವ ದಾಖಲೆ ಹಾಗೂ ಗಿನ್ನೆಸ್ ದಾಖಲೆ ಮಾಡಿದ ಖ್ಯಾತ ಯೋಗಪಟು ತನುಶ್ರೀ ಪಿತ್ರೋಡಿ ಅವರಿಗೆ ಯೋಗ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Leave a Reply

Your email address will not be published. Required fields are marked *

error: Content is protected !!