ಉಮೇಶ್ ಪೋಚಪ್ಪನ್ ಉಡುಪಿಗೆ : ಯಶ್‌ಪಾಲ್ ಸುವರ್ಣ ಭೇಟಿ, ಸಮಾಲೋಚನೆ

ಉಡುಪಿ : ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ನಿಗಮ (ಎನ್ ಎಫ್ ಡಿ ಬಿ) ಸದಸ್ಯರಾದ ಉಮೇಶ್ ಪೋಚಪ್ಪನ್ ರವರು ಉಡುಪಿಗೆ ಆಗಮಿಸಿದ್ದ ಸಂದರ್ಭದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷರಾದ ಯಶ್‌ಪಾಲ್ ಎ ಸುವರ್ಣ ನೇತೃತ್ವದಲ್ಲಿ ಮೀನುಗಾರರ ನಿಯೋಗ ಭೇಟಿಯಾಗಿ ಮೀನುಗಾರಿಕೆಯ ಸಮಗ್ರ ಅಭಿವೃದ್ಧಿ ಬಗ್ಗೆ ಸಮಾಲೋಚನೆ ನಡೆಸಿದರು.

ಮೀನುಗಾರಿಕೆಗೆ ಬಳಸುವ ಡಿಸೇಲ್ ಮೇಲಿನ ರಸ್ತೆ ತೆರಿಗೆ ವಿನಾಯಿತಿ, ಬೋಟ್ ಮರುನಿರ್ಮಾಣಕ್ಕೆ ಸಹಾಯಧನ, ನಾಡದೋಣಿಗಳಿಗೆ ನೀಡುವ ಸೀಮೆಎಣ್ಣೆ ಸಮರ್ಪಕ ಸರಬರಾಜು, ಕೃಷಿಕರಿಗೆ ನೀಡುವ ಎಲ್ಲಾ ಸೌಲಭ್ಯಗಳನ್ನು ಮೀನುಗಾರಿಕೆಗೂ ವಿಸ್ತರಣೆ, ಸಿ ಆರ್ ಝಡ್ ನಿಯಮ ಸಡಿಲೀಕರಣ, ಬಂದರು ಅಭಿವೃದ್ಧಿಗೆ ಕೇಂದ್ರ ಸರಕಾರದ 100 ಶೇಕಡ ನೇರ ಅನುದಾನ ಹಾಗೂ ಮೀನುಗಾರಿಕೆಯ ಅಭಿವೃದ್ಧಿಯ ದೃಷ್ಟಿಯಿಂದ ಪ್ರತ್ಯೇಕ ಮೀನುಗಾರಿಕಾ ಕೈಗಾರಿಕಾ ವಲಯ ಸ್ಥಾಪನೆ ಮುಂತಾದ ಮೀನುಗಾರರ ಹಲವು ಬೇಡಿಕೆಗಳನ್ನು ಶೀಘ್ರವಾಗಿ ಕೇಂದ್ರದ ಮೀನುಗಾರಿಕಾ ಸಚಿವಾಲಯದ ಮೂಲಕ ಈಡೇರಿಸುವಂತೆ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷರಾದ ಶ್ರೀ ಸತೀಶ್ ಕುಂದರ್, ಮೀನುಗಾರ ಮುಖಂಡರಾದ ಶ್ರೀ ಕಿಶೋರ್ ಡಿ ಸುವರ್ಣ, ಶ್ರೀ ದಯಾನಂದ ಸುವರ್ಣ, ಶ್ರೀ ಕರುಣಾಕರ ಸಾಲ್ಯಾನ್, ಆರ್ ಎಸ್ ಎಸ್ ಪ್ರಮುಖರಾದ ಶ್ರೀ ಅಶೋಕ್ ಮಂಜೇಶ್ವರ, ನಗರಸಭಾ ಸದಸ್ಯರಾದ ಶ್ರೀ ವಿಜಯ ಕೊಡವೂರು, ಶ್ರೀ ಸುಪ್ರಸಾದ್ ಶೆಟ್ಟಿ, ಶ್ರೀ ರಾಧಾಕೃಷ್ಣ ಮೆಂಡನ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!