ಯಶ್-ರಾಧಿಕಾ ಲಿಟಲ್ ಪ್ರಿನ್ಸ್ಸ್ ಹೆಸರು “ಐರಾ”
ನಟ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯ ಆರು ತಿಂಗಳ ಮುದ್ದು ಮಗಳ ನಾಮಕರಣವನ್ನು ಸರಳವಾಗಿ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ನೇರವೇರಿಸಲಾಗಿದೆ.
ಕುಟುಂಬದವರು ಮತ್ತು ಚಿತ್ರರಂಗದ ಆಪ್ತರೊಂದಿಗಷ್ಟೇ ನಡೆದ ನಾಮಕರಣ ಸಮಾರಂಭದಲ್ಲಿ ಪುತ್ರಿಗೆ “ಐರಾ” ಎನ್ನುವ ಮುದ್ದಾದ ಹೆಸರನ್ನಿಟ್ಟು ಅಭಿಮಾನಿಗಳ ಕುತೂಹಲಕ್ಕೆ ಕೊನೆಗೂ ತೆರೆ ಎಳೆದಿದ್ದಾರೆ. ಯಶ್ ಮತ್ತು ರಾಧಿಕಾ ಇಬ್ಬರ ಹೆಸರನ್ನು ಸೇರಿಸಿ ಐರಾ ಎಂದು ನಾಮಕರಣ ಮಾಡಲಾಗಿದೆ. ಐರಾ ಇದರ ಅರ್ಥ ಗೌರವಾನ್ವಿತ.
ಯಶ್- ರಾಧಿಕಾ ಜೋಡಿಯ ಮುದ್ದಿನ ಮಗುವನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದರು.
ಕಳೆದ ಅಕ್ಷಯ ತೃತೀಯದಂದು ತಮ್ಮ ಮಗಳು ಬೇಬಿ ವೈಆರ್ ಫೋಟೋವನ್ನು ರಾಧಿಕಾ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು.
ಇದೀಗ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬವರ್ಗದವರ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಮಗುವಿಗೆ ಐರಾ ಯಶ್ ಎಂದು ನಾಮಕರಣ ಮಾಡಿದ್ದಾರೆ.