ಮಾವಿನ ಎಲೆ ಜ್ಯೂಸ್
ಮಾವಿನ ಕಾಯಿಯಿಂದ ವಿವಿಧ ಖಾದ್ಯಗಳನ್ನು ಸವಿದ್ದಿದೇವೆ ಆದರೆ ಮಾವಿನ ಎಲೆಯಿಂದ ರುಚಿಯಾದ ಪಾನೀಯ ಮಾಡುವ ವಿಧಾನ ಇವತ್ತಿನ ಪಾಕ ಟೈಮ್ಸ್ ಲಿ ನಿಮಗಾಗಿ
ಮಾವಿನ ಎಲೆಯ ಜ್ಯೂಸ್ ಮಾಡಲು ಬೇಕಾದ ಸಾಮಾಗ್ರಿಗಳು :
ಮಾವಿನ ಎಲೆ – 3 ರಿಂದ 4
ಶುಂಠಿ -1 ತುಂಡು
ನಿಂಬೆರಸ – ಸ್ವಲ್ಪ
ಸಕ್ಕರೆ
ನೀರು
ಮಾಡುವ ವಿಧಾನ :
ಸ್ವಚ್ಛವಾಗಿ ತೊಳೆದುಕೊಂಡಿರುವ ಮಾವಿನ ಎಲೆಗಳನ್ನು ಶುಂಠಿ ಹಾಗೂ ಸ್ವಲ್ಪ ನೀರಿನ ಜೊತೆ ಮಿಕ್ಸಿಯಲ್ಲಿ ನುಣ್ಣನೆ ರುಬ್ಬಿಕೊಳ್ಳಬೇಕು. ನಂತರ ಬೇಕಾದಷ್ಟು ನೀರು ಸೇರಿಸಿ ಇನ್ನೊಂದು ಸುತ್ತು ತಿರುಗಿಸಿ. ಮಿಶ್ರಣವನ್ನು ಸೋಸಿಕೊಂಡು ಅದಕ್ಕೆ ನಿಂಬೆರಸ, ಸಕ್ಕರೆ ಸೇರಿಸಿ ಚೆನ್ನಾಗಿ ಕಲಸಿ .ಸಕ್ಕರೆ ಬದಲು ಬೆಲ್ಲ6ದ ಪುಡಿ ಅಥವಾ ಜೇನು ಕೂಡ ಉಪಯೋಗಿಸಬಹುದು. ಇದನ್ನು ಗ್ಲಾಸಿಗೆ ವರ್ಗಾಯಿಸಿ ಐಸ್ ಕ್ಯೂಬ್ ಹಾಕಿದರೆ ಟೇಸ್ಟಿ ಮಾವಿನ ಎಲೆ ಜ್ಯೂಸ್ ರೆಡಿ .