ಮಣಿಪಾಲ: ಮತ್ತೊಂದು ಕರ್ಮಕಾಂಡ ಬಯಲು, ಆಸ್ಪತ್ರೆಯಲ್ಲಿ ಮೃತ ದೇಹ ಗಾಯಬ್

ಉಡುಪಿ (ಉಡುಪಿ ಟೈಮ್ಸ್ ವರದಿ) (ಆ 24 ): ಕುಂದಾಪುರದಲ್ಲಿ ಮೃತದೇಹ ಅದಲು ಬದಲಾದ ಬೆನ್ನಲೇ ಜಿಲ್ಲೆಯಲ್ಲಿ ಇನ್ನೊಂದು ಬೇಜವಾಬ್ದಾರಿ ಪ್ರಕರಣ ನಡೆದಿದೆ. ಉಡುಪಿ ಜಿಲ್ಲೆಯ ಪ್ರತಿಷ್ಠಿತ ಆಸ್ಪತ್ರೆಯಾದ ಮಣಿಪಾಲದಲ್ಲಿ ನಿನ್ನೆ ರಾತ್ರಿ ಮೃತರಾದ ವ್ಯಕ್ತಿಯ ಮೃತದೇಹ ಇಂದು ಮದ್ಯಾಹ್ನ ಕಾಣೆಯಾಗಿದೆ.

ಮಣಿಪಾಲ ಆಸ್ಪತ್ರೆಗೆ ನಿನ್ನೆಯಷ್ಟೇ ಕಫದ ಸಮಸ್ಯೆಯಿಂದ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ಕಾರ್ಕಳದ ಅಜೆಕಾರಿನ ವಿಜಯ ಬ್ಯಾಂಕಿನ ನಿವೃತ ಡಿ ಜಿ ಎಂ ಬಾಲಕೃಷ್ಣ ಶೆಟ್ಟಿಯವರು ಭಾನುವಾರ ರಾತ್ರಿ ಕೊರೋನಾ ಸೋಂಕಿನಿಂದ ಮೃತರಾಗಿರುವುದಾಗಿ ಆಸ್ಪತ್ರೆ ಮೂಲ ಮನೆಯವರಿಗೆ ತಿಳಿಸಿದ್ದು.

ಸೋಮವಾರ ಬೆಳಿಗ್ಗೆ ಮನೆಯವರು ಆಸ್ಪತ್ರೆಯ ಬಿಲ್ಲು ಸುಮಾರು 1.50 ಲಕ್ಷ ರೂಪಾಯಿಯಷ್ಟು ಇನ್ಶೂರೆನ್ಸ್ ಕ್ಲೈಮ್ ಮಾಡಿಸಿ ಕೊಟ್ಟು ಮೃತ ದೇಹ ಪಡೆದುಕೊಳ್ಲಲು ತೆರಳಿದಾಗ ಅಲ್ಲಿ ಮೃತ ದೇಹವೇ ಇಲ್ಲದಿರುವುದು ಮನೆಯವರಿಗೆ ಬಿಗ್ ಶಾಕ್ ನೀಡಿದೆ. ಇದರ ಬಗ್ಗೆ ವಿಚಾರಿಸಿದಾಗ ಅನಾಥ ಶವವೆಂದು ಮನೆಯವರಿಗೆ ಕಾಯದೆ ಅಂತ್ಯಕ್ರಿಯೆ ಮುಗಿಸಿದ್ದೇವೆ ಎಂಬುದಾಗಿ ಆಸ್ಪತ್ರೆ ಸಿಬ್ಬಂದಿಗಳು ಉಡಾಫೆಯ ಉತ್ತರ ನೀಡಿದ್ದಾರೆ.

ಇದಕ್ಕೆ ಪೂರಕವಾಗಿ ಸ್ಥಳಕ್ಕೆ ಆಗಮಿಸಿದ ಮಣಿಪಾಲ ಪೊಲೀಸರು ಆಸ್ಪತ್ರೆಯ ಸಿಬ್ಬಂದಿಗಳು ಶವ ಸಂಸ್ಕಾರ ನಡೆಸಿದ್ದಾರೆ ಎಂಬುದಾಗಿ ಮನೆಯವರಿಗೆ ತಿಳಿಸಿದ್ದಾರೆ, ಮೃತರ ಸಹೋದರರ ಪುತ್ರ ಪ್ರೀತೇಶ್ ಶೆಟ್ಟಿ ಉಡುಪಿ ಟೈಮ್ಸ್ ಗೆ ತಿಳಿಸಿದ್ದಾರೆ .

Leave a Reply

Your email address will not be published. Required fields are marked *

error: Content is protected !!