ಬಿಜೆಪಿ ಮುಖಂಡನ ಪತ್ನಿಯ ಸಂಶಯಾಸ್ಪದ ಸಾವಿನ ತನಿಖೆ ಸಿಓಡಿ ಗೆ
ಉಡುಪಿ (ಉಡುಪಿ ಟೈಮ್ಸ್ ವರದಿ): ಬಿಜೆಪಿ ಮುಖಂಡನ ಪತ್ನಿಯ ಸಂಶಯಾಸ್ಪದ ಸಾವಿನ ತನಿಖೆಯನ್ನ ಸಿ ಓ ಡಿ ಗೆ ಒಪ್ಪಿಸಲಾಗಿದೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕರು ಗೃಹ ಸಚಿವರು ಈ ಪ್ರಕರಣವನ್ನ ಸಿ ಓ ಡಿ ಗೆ ಒಪ್ಪಿಸಲು ಅನುಮತಿ ನೀಡಿದ್ದಾರೆ ಎಂದರು. ಉಡುಪಿ ಬಿಜೆಪಿ ಮುಖಂಡ ಶಿವಪ್ರಸಾದ್ ರವರ ಪತ್ನಿ ಶ್ರೀ ರಕ್ಷಾ ರವರು 2 ದಿನದ ಹಿಂದೆ ಸಂಶಯಾಸ್ಪದವಾಗಿ ಸಾವಿಗೀಡಾಗಿದ್ದು ಸಾವಿನ ನಂತರ ಕೋವಿಡ್ ಇರುವುದೆಂದು ಆಸ್ಪತ್ರೆ ಸಿಬ್ಬಂದಿಗಳು ತಿಳಿಸಿದರು. ಆದರೆ ಈ ಪ್ರಕರಣದಲ್ಲಿ ಅನೇಕ ಅನುಮಾನಗಳು ಎದ್ದಿದ್ದು ಇದರ ಕುರಿತಾಗಿ ಹೋರಾಟವು ನಡೆದು ಇದೀಗ ಈ ಪ್ರಕರಣವನ್ನು ಸಿ ಓ ಡಿ ತನಿಖೆಗೆ ಒಪ್ಪಿಸಿದ್ದು ಸುಮಾರು 7 ಮಂದಿ ವೈದ್ಯರ ತಂಡದಿಂದ ಮೆಡಿಕಲ್ ವರದಿ ಸಂಗ್ರಹಿಸಲು ತಿಳಿಸಲಾಗಿದೆ.