ಉಡುಪಿ: ಹೆಚ್ಚಿದ ಕೋವಿಡ್ ಪ್ರಕರಣ,ಅನ್ ಲಾಕ್ -2.0 ಪ್ರಕಟಿಸಿದ ಜಿಲ್ಲಾಧಿಕಾರಿ

ಉಡುಪಿ-(ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಕೋವಿಡ್- 19 ಸೋಂಕು ಹರಡುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಕಂಟೈನ್ ಮೆಂಟ್ ವಲಯಗಳಲ್ಲಿ ಕೆಲವೊಂದು ನಿರ್ಬಂಧನೆಗಳನ್ನು ಹೇರುವುದು ಮತ್ತು ಕಂಟೈನ್ ಮೆಂಟ್ ಹೊರವಲಯಗಳಲ್ಲಿ ನಿರ್ಬಂಧಗಳನ್ನು ಸಡಿಲಗೊಳಿಸಿ ಉಡುಪಿ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.

ಜುಲೈ 22 ರಿಂದ ಹೊರಡಿಸಿದ ಹೊಸ ಆದೇಶದಲ್ಲಿ ಕಂಟೈನ್ಮೆಂಟ್ ವಲಯದಲ್ಲಿ ಸಂಪೂರ್ಣ ಲಾಕ್ ಡೌನ್ ಇರುತ್ತದೆ. ವೈದ್ಯಕೀಯ ತುರ್ತು ಸೇವೆಗಳು ಮತ್ತು ಅಗತ್ಯ ವಸ್ತುಗಳು ಹಾಗೂ ಮತ್ತು ಸೇವೆಗಳ ಪೂರೈಕೆಗಳನ್ನು ಕಾಪಾಡಿಕೊಳ್ಳಲು ಅನುಮತಿಯನ್ನು ನೀಡಲಾಗಿದೆ. ಇವುಗಳ ಹೊರತು ಕಂಟೈನ್ ಮೆಂಟ್ ವಲಯ ಒಳಗೆ ಹಾಗೂ ಹೊರಗೆ ಜನರ ಚಲನ ವಲನಗಳನ್ನು ನಿಷೇಧಿಸಲಾಗಿದೆ.


ಕಂಟೈನ್ಮೆಂಟ್ ವಲಯಗಳ ಹೊರಗಿನ ಪ್ರದೇಶದಲ್ಲಿ ಈ ಕೆಳಗಿನ ಚಟುವಟಿಕೆಗಳನ್ನು ಹೊರತು ಪಡಿಸಿ ಎಲ್ಲಾ ಚಟುವಟಿಕೆಗಳನ್ನು, ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕಾಲಕಾಲಕ್ಕೆ ಹೊರಡಿಸಿದ , ಸೂಚನೆಗಳನ್ನು ಮತ್ತು ಕಾರ್ಯಾಚರಣೆಯ ಕಾರ್ಯವಿಧಾನಗಳ ಷರತ್ತುಗಳೊಂದಿಗೆ ನಡೆಸಲು ಅನುಮತಿಸಲಾಗಿದೆ.

ಜುಲಾಯಿ 31 ವರೆಗಿನ ಪ್ರತಿ ಭಾನುವಾರಗಳಂದು ಪೂರ್ಣ ದಿನದ ಲಾಕ್ ಡೌನ್ ಇರುತ್ತದೆ
ಆದರೆ ದಿನನಿತ್ಯದ ಅಗತ್ಯ ಸರಕುಗಳ ಸಾಗಾಣಿಕೆಗೆ ಅವಕಾಶವಿರುವುದು.
ಪೆಟ್ರೋಲ್ ಬಂಕ್, ಮೆಡಿಕಲ್, ಕ್ಲಿನಿಕಲ್ ಲ್ಯಾಬ್, ಆಸ್ಪತ್ರೆ ಹಾಲು, ದಿನಪತ್ರಿಕೆ ಮಾರಾಟಕ್ಕೆ ನಿರ್ಬಂಧವಿಲ್ಲ, ಹೋಟೆಲ್ ಗಳಲ್ಲಿ ಪಾರ್ಸೆಲ್ ಗೆ ಹಾಗು ಹೋಂ ಡೆಲಿವರಿಗೆ ಅವಕಾಶವಿದೆ

ಜುಲಾಯಿ 22 ರಿಂದ ಗಡಿ ಸೀಲ್ ಡೌನ್ ತೆರವು ಗೊಳಿಸಲಾಗಿದೆ, ಚೆಕ್ ಪೋಸ್ಟ್ ಮುಂದುವರಿಯಲಿದೆ.ಅನಗತ್ಯವಾಗಿ ಜಿಲ್ಲೆಯನ್ನ ಪ್ರವೇಶಿಸುವ ಅವಕಾಶವನ್ನು ತಡೆಹಿಡಿಯಲಾಗಿದೆ.

ಅಗತ್ಯ ಕೆಲಸಗಳಿಗೆ ಜಿಲ್ಲೆಗೆ ಆಗಮಿಸುವವರು ಈ ಬಗ್ಗೆ ಅಗತ್ಯದಾಖಲೆಗಳನ್ನು ಇರಿಸಿಕೊಂಡು ಅದನ್ನು ಚೆಕ್ ಪೋಸ್ಟ್ ಗಳಲ್ಲಿ ಪರಿಶೀಲನೆಗೆ ಒದಗಿಸಬೇಕು. ಸಾರ್ವಜನಿಕ ಬಸ್ ‌ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಅನ್ಲಾಕ್ 2 ಮಾರ್ಗಸೂಚಿ2 ರಂತೆ ಜಿಲ್ಲೆಯಲ್ಲಿ ರಾತ್ರಿ ಕರ್ಫ್ಯೂ ರಾತ್ರಿ 9 .00 ಗಂಟೆಯಿಂದ ಬೆಳಗ್ಗೆ 5.00 ಗಂಟೆಯವರೆಗೆ ಜಾರಿಯಲ್ಲಿರುತ್ತದೆ, ಹಾಗೂ ಭಾನುವಾರದ ಲಾಕ್ ಡೌನ್ ಮುಂದುವರೆಯುತ್ತದೆ

1 thought on “ಉಡುಪಿ: ಹೆಚ್ಚಿದ ಕೋವಿಡ್ ಪ್ರಕರಣ,ಅನ್ ಲಾಕ್ -2.0 ಪ್ರಕಟಿಸಿದ ಜಿಲ್ಲಾಧಿಕಾರಿ

  1. Bus service from Siddapura to Udupi, via Haalaadi, Bidkalkatte, Shiriyara, Saibarkatte, Barkur, Brahmavara should start. People facing problem with out bus conveyance.

Leave a Reply

Your email address will not be published. Required fields are marked *

error: Content is protected !!