ಉಡುಪಿ ಟೈಮ್ಸ್‌ನ “ರೋಡಿಗಿಳಿಯಲಿ ನರ್ಮ್ ಬಸ್ ಅಭಿಯಾನ”ದ ಫಲಶ್ರುತಿ ಜುಲೈ 23 ರಿಂದ ಬಸ್ ಸಂಚಾರ
ಉಡುಪಿ (ಉಡುಪಿ ಟೈಮ್ಸ್ ವಿಶೇಷ ವರದಿ) : ಉಡುಪಿ ಜಿಲ್ಲೆಯ ಸಾರ್ವಜನಿಕರ ಬಹು ಬೇಡಿಕೆಯ ನರ್ಮ್ ಬಸ್ ಮತ್ತು ಖಾಸಗಿ ಸಿಟಿ ಬಸ್ ನಾಳೆ (ಜುಲೈ 23) ನಗರ ಮತ್ತು ಗ್ರಾಮೀಣ ಭಾಗದಲ್ಲಿ ಸಂಚರಿಸಲಿದೆ.
ಬುಧವಾರ ಮಣಿಪಾಲ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜನಪ್ರತಿನಿಧಿಗಳ, ಆರ್ ಟಿ ಓ ಅಧಿಕಾರಿ ಮತ್ತು ಬಸ್ ಮಾಲಕರ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿ
ಜುಲೈ 14 ರಿಂದ ಜಿಲ್ಲೆಯ ಗಡಿ ಸೀಲ್ ಡೌನ್ ಘೋಷಿಸಿದ ಸಂದರ್ಭ ಜಿಲ್ಲೆಯಾದ್ಯಂತ ಖಾಸಗಿ ಬಸ್ ಸಂಚಾರ ಸ್ಥಗಿತಗೊಳಿಸಿ ಜಿಲ್ಲಾಧಿಕಾರಿ ಜಿ.ಜಗದೀಶ್ ಆದೇಶ ಹೊರಡಿಸಿದ್ದರು.
ನಗರದಲ್ಲಿ ಸರ್ಕಾರಿ ನಿಯಮ ಉಲ್ಲಂಘಿಸಿ ಸಿಟಿಬಸ್ ಸಂಚಾರ ಮಾಡಿದ್ದರ ಬಗ್ಗೆ ಜುಲೈ ೧೧ ರಂದು ‘ಉಡುಪಿ ಟೈಮ್ಸ್’ ವರದಿ ಮಾಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿಯವರು ೧೪ ರಿಂದ ಗಡಿ ಸೀಲ್ ಡೌನ್ ಸಂದರ್ಭ ಜಿಲ್ಲೆಯಲ್ಲಿ ಸಂಪೂರ್ಣ ಬಸ್ ಸಂಚಾರಕ್ಕೆ ನಿರ್ಬಂಧ ಹೇರಿದ್ದರು.
ಸಿಟಿಬಸ್ ಪ್ರಯಾಣಿಕರು ಹೆಚ್ಚಿರುವ ಸಮಯದಲ್ಲಿ, ಯಾವುದೇ ಸಾಮಾಜಿಕ ಅಂತರವಿಲ್ಲದೆ ಬಸ್ ಸಂಚಾರ ಮಾಡಿದ್ದ ಬಗ್ಗೆ ದಾಖಲೆ ಸಹಿತ ವರದಿ ‘ಉಡುಪಿ ಟೈಮ್ಸ್’ ಪ್ರಕಟಿಸಿತ್ತು.
ಜುಲೈ 15 ರಿಂದ ಪ್ರಯಾಣಿಕರು ಹೆಚ್ಚು ಸಂಚರಿಸುವ ಸಮಯವಾದ ಬೆಳಿಗ್ಗೆ ಮತ್ತು ಸಂಜೆ ನರ್ಮ್ ಬಸ್ ಸಂಚಾರ ಪ್ರಾರಂಭಿಸಬೇಕೆಂದು ಉಡುಪಿ ಟೈಮ್ಸ್ ಅಭಿಯಾನ ಆರಂಭಿಸಿತ್ತು. “ರೋಡಿಗಿಳಿಯಲಿ ನರ್ಮ್ ಬಸ್” ಎಂಬ ಅಭಿಯಾನಕ್ಕೆ ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಸಾಥ್ ನೀಡಿದ ಪರಿಣಾಮ, ಜಿಲ್ಲೆಯ ಜನಪ್ರತಿನಿಧಿಗಳ, ಅಧಿಕಾರಿಗಳ ಕಣ್ಣು ತೆರೆಸುವಲ್ಲಿ ನಮ್ಮ ಅಭಿಯಾನ ಯಶಸ್ವಿಯಾಯಿತು.
ಗುರುವಾರ 15 ಸರಕಾರಿ ನರ್ಮ್ ಬಸ್ ಮತ್ತು 20 ಖಾಸಗಿ ಸಿಟಿಬಸ್ ಉಡುಪಿ ಜಿಲ್ಲೆಯಲ್ಲಿ ಸಂಚರಿಸಲಿದೆ. ಖಾಸಗಿ ಬಸ್ ಮಾಲಕರ ಒತ್ತಡಕ್ಕೆ ಮಣಿಯದೆಕೂಲಿ ಕಾರ್ಮಿಕರ, ಬಡ, ಮಧ್ಯಮ ವರ್ಗದ ಜನತೆಯ ಪರವಾಗಿ ನಿಂತ ‘ಉಡುಪಿ ಟೈಮ್ಸ್’ ನ ಅಭಿಯಾನಕ್ಕೆ ಸಹಕರಿಸಿದ ಎಲ್ಲರಿಗೂ ‘ಉಡುಪಿ ಟೈಮ್ಸ್’ ಮಾಧ್ಯಮ ಕೃತಜ್ಞತೆ ಸಲ್ಲಿಸುತ್ತದೆ.