ಕೋಟ ಮೂರುಕೈ- ಬಸ್ ತಂಗುದಾಣ ಉದ್ಘಾಟನೆ

ಸಾಲಿಗ್ರಾಮ -(ಉಡುಪಿ ಟೈಮ್ಸ್ ವರದಿ) : ಶ್ರೀ ಅಘೋರೇಶ್ವರ ಕಲಾ ರಂಗ ಚಿತ್ರಪಾಡಿ ಯವರ ವತಿಯಿಂದ ಕೋಟ ಮೂರುಕೈಯಲ್ಲಿ ಸುಮಾರು ಅರವತ್ತು ಸಾವಿರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲ್ಪಟ್ಟ ಸುಸಜ್ಜಿತ ಪ್ರಯಾಣಿಕರ ಬಸ್ ತಂಗುದಾಣವನ್ನು ನಿನ್ನೆ ನಡೆದ ಸರಳ ಸಮಾರಂಭದಲ್ಲಿ ಸಾರ್ವಜನಿಕ ಉಪಯೋಗಕ್ಕೆ ಬಿಟ್ಟುಕೊಡಲಾಯಿತು.

ಬಸ್ಸು ತಂಗುದಾಣದ ಉದ್ಘಾಟನೆಯನ್ನು ಹಿರಿಯ ಮುತ್ಸದಿ ಬೇಳೂರು ರಾಘವ ಶೆಟ್ಟಿ ಯವರು ನೇರವೇರಿಸಿದರು. ಅಘೋರೇಶ್ವರ ದೇವಸ್ಥಾನದ ಆಡಳಿತ ಮುಕ್ತೇಸರ ಚಂದ್ರ ಶೇಖರ ಕಾರಂತ, ಐಶ್ವರ್ಯ ಕಾಂಪ್ಲೆಕ್ಸ್ ನ ಮಾಲಕರಾದ ಸತೀಶ್ ಶೆಟ್ಟಿ, ರೋಟರಿ ಕ್ಲಬ್ ಕೋಟ ಸಿಟಿ ಯ ಅಧ್ಯಕ್ಷ ರೋ. ವಿಷ್ಣುಮೂರ್ತಿ ಉರಾಳ, ಕಲಾರಂಗದ ಅಧ್ಯಕ್ಷ ರಾಘವೇಂದ್ರ ನಾಯರಿ, ಸದಸ್ಯರಾದ ಶ್ಯಾಮ ಸುಂದರ್ ನಾಯರಿ, ಸ್ಥಳಿಯ ಸಂಘ ಸಂಸ್ಥೆಗಳ ಪಧಾದಿಕಾರಿಗಳು,ಕಲಾರಂಗದ ಸದಸ್ಯರು ಉಪಸ್ಠಿತರಿದ್ದರು

Leave a Reply

Your email address will not be published. Required fields are marked *

error: Content is protected !!