ಉಡುಪಿ: ಕೊರೋನಾ ಸೋಂಕಿಗೆ ಮತ್ತೊಂದು ಬಲಿ
ಉಡುಪಿ,ಜು 21 (ಉಡುಪಿ ಟೈಮ್ಸ್ ವರದಿ): ಕೊರೋನಾ ಸೋಂಕಿಗೆ ಉಡುಪಿಯಲ್ಲಿ ಮತ್ತೊಂದು ಬಲಿಯಾಗಿದೆ .
ಕೇರಳ ಕಣ್ಣೂರು ಮೂಲದ 35 ವರ್ಷದ ವ್ಯಕ್ತಿಯೊಬ್ಬರು ಕೆಲವು ದಿನಗಳ ಹಿಂದೆ ಕಿಡ್ನಿ ಸಮಸ್ಯೆಯಿಂದ ಮಣಿಪಾಲದ ಕೆಎಂಸಿ ಯಲ್ಲಿ ದಾಖಲಾಗಿದ್ದರು, ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ. ಇವರಿಗೆ ಕೊರೋನಾ ಸೋಂಕು ದೃಢವಾಗಿದೆ ಎಂದು ಆರೋಗ್ಯಾಧಿಕಾರಿ ಸುಧೀರ್ ಚಂದ್ರ ಸೂಡ ಮಾಹಿತಿ ನೀಡಿದ್ದಾರೆ.