ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ- ಕವನ

ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ

ವಿಶ್ವ ಕುಂದಾಪ್ರ ಕನ್ನಡ ದಿನ ಬರೀ ಆಚರಣೆ ಯಾಗಿ ಇಲ್ದೆ ಇರ್ಲಿ
ಎಲ್ರ ಮಾತಲ್ಲಿ ಭಾಷಿ ಮೆರಿಲಿ
ಭಾಷಿ ಅಲ್ ಬದ್ಕ ಅಂಬದನ್ ಎಲ್ರೂ ತೋರಸ್ಲಿ
ಕುಂದಾಪ್ರದ್ ಜನ್ರಲ್ ಎಷ್ಟ್ ಒಗ್ಗಟ್ಟಿತ್ ಎಮ್ದನ್ ಎಲ್ರೂ ಕಾಣ್ಲಿ..

ಕುಂದಾಪ್ರ ಕನ್ನಡ
ಕುಂದಾಪುರ ಕ್ಕೆ ಹೆಸರು ತಂದು ಕೊಟ್ಟಿದೆ ಕುಂದಾಪ್ರ ಕನ್ನಡ
ಕುಂದಾಪ್ರ ಭಾಷಿ ಮಾತಾಡುವ ಜನರ ಸಂಗಡ
ಎಲ್ರೂ ಮರುಳಾತ್ರ ಮಾತಾಡುವ ಸ್ಟೈಲಿಗೆ
ಪಟ್ ಪಟ್ ಅಂತ ಹೊಟ್ಟೊ ಪಟಾಕಿ ಸರದ ಶೈಲಿಗೆ

ಅಮ್ಮ ನ್ ಭಾಷಿ
ಊರ್ ಬಿಟ್ರು ಬಿಡುಕಾಗ ನಮ್ ಭಾಷಿ
ಬೇರೆ ಭಾಷಿ ಕಂಡ್ ಎಷ್ಟ್ಆದ್ರು ಆಸಿ
ಹುಟ್ಟಿ ಬೆಳ್ವತಿಗ್ ಅಮ್ಮ ಕಲ್ಸದ್
ಅಮ್ಮ ನಂಗೆ ಪ್ರೀತಿ ಮಾಡ್ಕ ಒಳ್ಳೆ ಮನ್ಸಿಂದ್..


ಗಾಯತ್ರಿ ಕಾರಂತ್

Leave a Reply

Your email address will not be published. Required fields are marked *

error: Content is protected !!