ಆಯುಷ್ ವೈದ್ಯರ ವೇತನ ಹೆಚ್ಚಳ – ಶ್ರೀ ರಾಮುಲು ಭರವಸೆ
ಬೆಂಗಳೂರು – ಸರಕಾರಿ ಆಯುಷ್ ವೈದ್ಯರ ವೇತನ ಹೆಚ್ಚಿಸಲಾಗುವುದು ಎಂದು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀ ರಾಮುಲು ತಿಳಿಸಿದ್ದಾರೆ. ವಿವಿಧ ಬೇಡಿಕೆಗಳ ಸಂಬಂಧಿಸಿದಂತೆ ಪ್ರತಿಭಟನೆ ಮಾಡಿದ ಆಯುಷ್ ಇಲಾಖೆ ವೈದ್ಯರು ಹಾಗು ಸಿಬ್ಬಂದಿಗಳ ಜೊತೆ ಮಾತುಕತೆಯ ಬಳಿಕ ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು.
ಮಾತುಕತೆ ಯಶಸ್ವಿಯಾದ ಹಿನ್ನಲೆಯಲ್ಲಿ ಪ್ರತಿಭಟನೆ ಹಿಂದಕ್ಕೆ ಪಡೆದುಕೊಳ್ಳುವಂತೆ ಸಚಿವರು ಮನವಿ ಮಾಡಿದ್ದಾರೆ.
ಅಲೋಪಥಿ ಗುತ್ತಿಗೆ ವೈದ್ಯರಿಗೆ ಯಾವ ಆಧಾರದಲ್ಲಿ ವೇತನ ಹೆಚ್ಚಿಸಲಾಗಿದೆಯೋ ಅದೇ ಮಾನದಂಡದ ಆಧಾರದ ಮೇಲೆ ಆಯುಷ್ ವೈದ್ಯರ ವೇತನ ಹೆಚ್ಚಿಸಲಾಗುವುದು ಎಂದು ಅವರು ತಿಳಿಸಿದರು. ಈ ಬಗ್ಗೆ ಆರ್ಥಿಕ ಇಲಾಖೆಗೆ ತಕ್ಷಣವೇ ಕಡತ ಸಲ್ಲಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು’
ಆಯುಷ್ ಯುಜಿ ಮತ್ತು ಪಿಜಿ ವಿದ್ಯರ್ಥಿಗಳಿಗೆ ಶಿಷ್ಯ ವೇತನ ಹೆಚ್ಚಿಸಲು ಮತ್ತು ವಿಶೇಷ ನೇಮಕಾತಿ ಮೂಲಕ ಆಯುಷ್ ವೈದ್ಯರ ನೇಮಕ ಮಾಡಲಾಗುವುದು ಎಂಬುದಾಗಿ ಅವರು ಭರವಸೆ ನೀಡಿದರು.