ವಿದೇಶಗಳಿಗೆ ತೆರಳುವವರಿಗೆ ಎದುರಾಗಿದೆ ಗಡಿ ಸೀಲ್ ಡೌನ್ ಸಂಕಟ!
ಉಡುಪಿ: (ಉಡುಪಿ ಟೈಮ್ಸ್ ವರದಿ ) ವಿದೇಶಗಳಿಗೆ ಪ್ರಯಾಣಿಸುವವರು 96 ಗಂಟೆಗಳ ಮೊದಲು ತಾವು ಕೋವಿಡ್ ಪರೀಕ್ಷೆಗೆ ಒಳಪಟ್ಟು ವರದಿ ನೆಗೆಟಿವ್ ಬಂದಲ್ಲಿ ಮಾತ್ರ ಪ್ರಯಾಣಿಸುವ ಅನುಮತಿ ಇದ್ದು, ಗಡಿ ಸೀಲ್ ಡೌನ್ ನಿಂದಾಗಿ ಮಂಗಳೂರಿನಲ್ಲಿ ಮಾಡಬೇಕಾದ ಪರೀಕ್ಷೆಗಳಿಗೆ ತೆರಳಲು ವಿದೇಶಿ ಪ್ರಯಾಣಿಕರಿಗೆ ಸಾಧ್ಯವಾಗುತ್ತಿಲ್ಲ.
ಈ ಕುರಿತು ಪ್ರಯಾಣಿಸಲು ಬೇಕಾದ ಪಾಸ್ ಗಳನ್ನೂ ತಾಲೂಕು ಕಚೇರಿ ಸಿಬ್ಬಂದಿಯಲ್ಲಿ ಕೇಳಿದಾಗ ಜಿಲ್ಲಾಧಿಕಾರಿಯವರಿಂದ ಅನುಮತಿ ದೊರೆತಿಲ್ಲ, ಕಚೇರಿಯ ಸರ್ವರ್ ಸಮಸ್ಯೆ ಇದೆ ಎಂದೆಲ್ಲ ಸಬೂಬು ನೀಡುತ್ತಾ ಇರುವುದು ತಿಳಿದುಬಂದಿದೆ.
ಇದರಿಂದ ಸುಮಾರು 30 ಸಾವಿರ ರೂಪಾಯಿ ನೀಡಿ ಟಿಕೆಟ್ ಖರೀದಿಸಿ ಪರೀಕ್ಷಾ ವರದಿಗಳಿಗಾಗಿ ಪರದಾಡುವ ಪರಿಸ್ಥಿತಿ ಪ್ರಯಾಣಿಕರಿಗೆ ಎದುರಾಗಿದೆಂದು ವಿದೇಶಕ್ಕೆ ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರೊಬ್ಬರು ಉಡುಪಿ ಟೈಮ್ಸ್ ಜೊತೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇವಿಷ್ಟೇ ಅಲ್ಲದೆ ತಾಲೂಕು ಆಫೀಸ್ ಹಾಗು ಮಿನಿ ವಿಧಾನ ಸೌದ ಜುಲೈ 15 ರಿಂದ 16 ರವರೆಗೆ ಸೀಲ್ ಡೌನ್ ಆಗಿದ್ದು, ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಎತ್ತ ಸಾಗಬೇಕೆಂದು ತಿಳಿಯದೆ ಅಲೆದಾಡುವಂತಾಗಿದೆ. ಜಿಲ್ಲಾಧಿಕಾರಿಯವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Please help them
The question is getting only District level orders r coming and not implementing in the Taluk level for going abroad person. He has to get medical report as well as to get permission for Driver up to airport and return to Udupi District.In the long run nobody is lifting phone and telling no msg from DC office. In the previous lockdown period i am having bad experience that i never got pass. This has to be looked into properly and implementation part should be taken on groud reality to help public.