ಕಾಪು: ಕೊರೋನಾ ವಾರಿಯರ್ಸ್ ಗೆ ಗೌರವಾರ್ಪಣೆ

ಕಾಪು- ಭಾರತದ ಲೊಕ್ಡೌನ್ ಸಮಯದಲ್ಲಿ ಕೊರೋನಾ ಮಹಾಮಾರಿ ರೋಗದಿಂದ ತತ್ತರಿಸಿದ ಈ ಸಂದರ್ಭದಲ್ಲಿ ತಮ್ಮ ಜೀವದ ಹಂಗನ್ನು ಬಿಟ್ಟು ಶಿಸ್ತುಬದ್ದವಾಗಿ ತಮ್ಮ ಕರ್ತವ್ಯವನ್ನು ಸಾರ್ವಜನಿಕರಿಗೆ ತೊಂದರೆ ಆಗದಂತೆ ಕೆಲಸ ನಿರ್ವಹಿಸಿದ ಕಾಪು ವಿಜಯಬ್ಯಾಂಕ್ ನ ಪ್ರಬಂಧಕ ಪ್ರಕಾಶ್ ಅಮೀನ್ ಮತ್ತು ಅವರ ಸಿಬ್ಬಂದಿ ವರ್ಗದವರನ್ನ ಕಾಪು ಸಮಾಜ ಸೇವಾ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.

ಎಲ್ಲಾ ಖಾತೆದಾರರ ಪರವಾಗಿ ಕಾಪು ವಿಜಯ ಬ್ಯಾಂಕ್ ಗೆ ತೆರಳಿ ಕರ್ತವ್ಯ ನಿರತರಾಗಿರುವ ಸಮಯದಲ್ಲಿ ಅವರನ್ನು ಸಮಾಜ ಸೇವಾ ವೇದಿಕೆ ಅಧ್ಯಕ್ಷರಾದ ಮೊಹಮ್ಮದ್ ಫಾರೂಕ್ ಚಂದ್ರನಗರ ನೇತೃತ್ವದಲ್ಲಿ ಗೌರವಿಸಲಾಯಿತು.

ನಂತರ ಮಾತನಾಡಿದ ಅವರು ನಾವು ವಿಜಯ ಬ್ಯಾಂಕ್(ಬ್ಯಾಂಕ್ ಆಫ್ ಬರೋಡ)ನೌಕರರ ಕರ್ತವ್ಯ ಮತ್ತು ಅವರ ಸಮಯ ಪಾಲನೆ ಶಿಸ್ತು ಬದ್ದ ಈ ಕೊರೋನಾ ಕಷ್ಟ ಕಾಲದಲ್ಲಿ ಬ್ಯಾಂಕ್ ನ ಎಲ್ಲಾ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸಿದಕ್ಕೆ ಶ್ಲ್ಯಾಘನೀಯ ಅವರನ್ನು ಗೌರವಿಸುವುದು ಗ್ರಾಹಕರಾದ ನಮ್ಮ ಕರ್ತವ್ಯವಾಗಿದೆ ಅದಲ್ಲದೆ ಎಲ್ಲಾ ಸರಕಾರಿ ಕಚೇರಿ ಸಿಬ್ಬಂದಿಗಳಂತೆ ಕೊರೋನಾ ವಾರಿಯರ್ಸ್ ಗ್ರೂಪ್ ಗೆ ಸೇರ್ಪಡೆಯಾಗುವುದಕ್ಕೆ ಯಾವುದೇ ಸಂಶಯವಿಲ್ಲ ಎಂದರು.

ಈ ಸಂದರ್ಭದಲ್ಲಿ ಸಮಾಜ ಸೇವಾ ವೇದಿಕೆ ಗೌರವ ಅಧ್ಯಕ್ಷ ರಾದ ದಿವಾಕರ ಬಿ ಶೆಟ್ಟಿ ಕಳತ್ತೂರು ಸಂಚಾಲಕರಾದ ದಿವಾಕರ ಡಿ ಶೆಟ್ಟಿ ಕಳತ್ತೂರು ಉಪಾಧ್ಯಕ್ಷರಾದ ರಾಜೇಶ್ ಕುಲಾಲ್ ಕುತ್ಯಾರು ಗೌರವ ಸಲಹೆಗಾರರಾದ ದಯಾನಂದ ಕೆ. ಶೆಟ್ಟಿ ದೆಂದೂರು, ಸಮಾಜ ಸೇವಕಿ ಜೆನೆಟಾ ಬರ್ಬೋಜ ಮುದರಂಗಡಿ,ಉದ್ಯಮಿ ವಿನಯ ಬಲ್ಲಾಳ್ ಕಟಪಾಡಿ, ಪುರಷೋತ್ತಮ್ ಕಾಪು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!