ಪಿಯುಸಿ ಫಲಿತಾಂಶ ಉಡುಪಿಯ ಅಭಿಜ್ಞಾರಾವ್ ರಾಜ್ಯಕೆ ಪ್ರಥಮ
ಉಡುಪಿ (ಉಡುಪಿ ಟೈಮ್ಸ್ ವರದಿ ): ದ್ವಿತೀಯ ಪಿಯುಸಿ ಪರೀಕ್ಷೆ ವಿಜ್ಞಾನ ವಿಭಾಗದಲ್ಲಿ ಉಡುಪಿ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ, ಉಡುಪಿ ನಿವಾಸಿ ಅಭಿಜ್ಞಾ ರಾವ್ 596 (ಶೇ.99.33) ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಅವರು ಆಶಾ ರಾವ್ ಹಾಗೂ ದಿವಂಗತ ವಿಠಲ್ ರಾವ್ ದಂಪತಿ ಪುತ್ರಿ. ಈಕೆಯ ಅಕ್ಕ ರಕ್ಷಾ ರಾವ್ ಸುರತ್ಕಲ್ ಏನ್ ಐ ಟಿ ಕೆ ಯಲ್ಲಿ ಎಂಜಿನಿಯರಿಂಗ್ ಮುಗಿಸಿದ್ದಾರೆ.
ಅಭಿಜ್ಞಾ ಭೌತಶಾಸ್ತ್ರ, ಗಣಿತ, ರಸಾಯನಶಾಸ್ತ್ರ, ಸಂಸ್ಕೃತ, ಕಂಪ್ಯೂಟರ್ ಸೈನ್ಸ್‌ನಲ್ಲಿ ತಲಾ 100 ಮತ್ತು ಇಂಗ್ಲಿಷ್‌ನಲ್ಲಿ 96 ಅಂಕ ಗಳಿಸಿದ್ದಾರೆ. ಅಭಿಜ್ಞಾ ರಾವ್ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.99.8 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದರು.
“ತುಂಬಾ ಖುಷಿಯಾಯಿತು. ಎಲ್ಲರ ಪ್ರೋತ್ಸಾಹ ಹಾಗೂ ಕಾಲೇಜಿನ ಪರಿಸರ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಕೊರೋನ ಲಾಕ್‌ಡೌನ್ ನಿಂದಾಗಿ ನನಗೆ ಇಂಗ್ಲಿಷ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಾಕಷ್ಟು ಸಮಯ ದೊರೆಯಿತು. ಅದನ್ನು ನಾನು ಸದುಪಯೋಗಪಡಿಸಿಕೊಂಡು. ತುಂಬಾ ಓದಿದ್ದೇನೆ. ಇದರಿಂದ ಕೊರೋನ ಲಾಕ್‌ಡೌನ್ ನಂತರ ನಡೆದ ಪರೀಕ್ಷೆ ನನಗೆ ಸುಲಭವಾಯಿತು’ ಎಂದು ಅಭಿಜ್ಞಾ ರಾವ್ ಹೇಳಿದ್ದಾರೆ.
Good luck to Abhijna Rao, Udupi for scoring first place in the State. God bless her and family for bright future.
Congratulations !!
ನಮ್ಮ ಉಡುಪಿಯ ವಿದ್ಯಾರ್ಥಿನಿ…. ,ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ನಿಮಗೆ ನನ್ನ ಅಭಿನಂದನೆಗಳು…. , ನಿಮ್ಮ ಮುಂದಿನ ಭವಿಷ್ಯ ಉಜ್ವವಾಗಿರಲಿ….
Congratulations
Congratulations Abhijna Keep it up in your throughout the future . God bless you always
Super
Super
Hearty Congratulations to Kumari Abhijna Rao Udupi. You have added glory to Udupi district. Wish you all the best.
congratulate
Congratulation abhijna
Congratulations
Congratulations abhijna
Super congratulations abhijna god bless you