ಉಡುಪಿ: ವಿಎಚ್’ಪಿ ನೂತನ ಅಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ ಆಯ್ಕೆ
ಉಡುಪಿ (ಉಡುಪಿ ಟೈಮ್ಸ್ ವರದಿ): ವಿಶ್ವಹಿಂದೂ ಪರಿಷದ್ ಉಡುಪಿ ಜಿಲ್ಲೆಯ ಸಭೆಯು ನೀಲಾವರ ಗೋ ಶಾಲೆಯಲ್ಲಿ ಪೂಜ್ಯ ಪೇಜಾವರ ಮಠಾಧೀಶರಾದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮಿಜೀಯವರ ಉಪಸ್ಥಿತಿಯಲ್ಲಿ ನಡೆಯಿತು.
ಪ್ರಾಂತ ಕಾರ್ಯಾಧ್ಯಕ್ಷರಾದ ಪ್ರೊ! ಎಂ.ಬಿ. ಪುರಾಣಿಕ್ ನೂತನ ಜಿಲ್ಲಾ ಪದಾಧಿಕಾರಿಗಳನ್ನು ನಿಯುಕ್ತಿಗೊಳಿಸಿದರು. ನೂತನ ಅಧ್ಯಕ್ಷರಾಗಿ ವಿಷ್ಣುಮೂರ್ತಿ ಆಚಾರ್ಯ, ಉಪಾಧ್ಯಕ್ಷ- ಶ್ರೀಧರ್ ಬಿಜೂರ್, ಕಾರ್ಯದರ್ಶಿ- ದಿನೇಶ್ ಮೆಂಡನ್, ಕೋಶಾಧ್ಯಕ್ಷರು – ಸುಧಾಕರ್ ಆಚಾರ್ಯ, ಮಾತೃಶಕ್ತಿ ಪ್ರಮುಖ್- ಪೂರ್ಣಿಮಾ ಸುರೇಶ್, ಸಹಕಾರ್ಯದರ್ಶಿ – ಜಗದೀಶ್ ಕೊಲ್ಲೂರು, ಧರ್ಮಪ್ರಸಾರ ಪ್ರಮುಖ್- ಗುರುಪ್ರಸಾದ್, ಸಂಪರ್ಕ ಪ್ರಮುಖ್ – ಗಿರೀಶ್ ಕುಂದಾಪುರ, ಸೇವಾ ಪ್ರಮುಖ್ – ರವಿ ಕೋಟೇಶ್ವರ, ಮಠಮಂದಿರ ಸಂಪರ್ಕ ಪ್ರಮುಖ್ – ಕುಶಾಲ್ ನಾಯಕ್, ಗೋರಕ್ಷ ಪ್ರಮುಖ್ – ಶ್ರೀಧರ್ ಕಾಮತ್, ಬಜರಂಗದಳ ಸಂಯೋಜಕರು – ಸುರೇಂದ್ರ ಕೋಟೇಶ್ವರ, ಸಹ ಸಂಯೋಜಕರು – ಅನಿಲ್ ಅಂಬಾಗಿಲು, ಸುರಕ್ಷಾ ಪ್ರಮುಖ್ – ರಾಜೇಶ್ ಪಡುಬಿದ್ರೆ, ಗೋರಕ್ಷಾ ಪ್ರಮುಖ್ – ನಾಗರಾಜ್ ಕೋಟೇಶ್ವರ, ಅಖಾಡ ಪ್ರಮುಖ್ – ಮನೋಜ್ ಮಲ್ಪೆ, ವಿದ್ಯಾರ್ಥಿ ಪ್ರಮುಖ್ – ಪ್ರವೀಣ್ ಹಿರಿಯಡ್ಕ, ಜಿಲ್ಲಾ ಪದಾಧಿಕಾರಿಗಳಾಗಿ ಆಯ್ಕೆಯಾದರು.
ವಿಶ್ವಹಿಂದೂ ಪರಿಷದ್ ಪ್ರಾಂತ ಸಹಕಾರ್ಯದರ್ಶಿ ಕೃಷ್ಣಮೂರ್ತಿ, ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್, ಬಜರಂಗದಳ ಪ್ರಾಂತ ಸಂಯೋಜಕ್ ಸುನಿಲ್ ಕೆ ಆರ್, ವಿಭಾಗ ಸಂಯೋಜಕ್ ಭುಜಂಗ ಕುಲಾಲ್ ಈ ಕಾರ್ಯಕ್ರಮದಲ್ಲಿ ಉಪಸ್ಥಿತಿ ಇದ್ದರು.