ಮಣಿಪಾಲ ಕೆಎಂಸಿ ಆಸ್ಪತ್ರೆ: ವಾರದಲ್ಲಿ ಐದು ದಿನ ಹೊರರೋಗಿ ವಿಭಾಗ ಸೇವೆ

ಮಣಿಪಾಲ (ಉಡುಪಿ ಟೈಮ್ಸ್ ವರದಿ ): ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಹೊರರೋಗಿ ವಿಭಾಗ ಸೇವೆಯು 13ನೇ ಜುಲೈಯಿಂದ ವಾರದಲ್ಲಿ ಐದು ದಿನ ಬೆಳಿಗ್ಗೆ ಗಂಟೆ 8.00ರಿಂದ ಅಪರಾಹ್ನ 1.00 ರವರೆಗೆ ಸೇವೆಗೆ ಲಭ್ಯವಾಗಲಿದೆ.

ಶನಿವಾರ ಮತ್ತು ಭಾನುವಾರ ಹೊರರೋಗಿ ಸೇವೆ ಲಭ್ಯವಿರುವುದಿಲ್ಲ. ಈ ಬದಲಾವಣೆಯು 31 ಜುಲೈ 2020ರ ತನಕ ಮುಂದುವರಿಯಲಿದೆ, ತುರ್ತುಚಿಕಿತ್ಸಾ ವಿಭಾಗವು ಶನಿವಾರ, ಭಾನುವಾರ ಮತ್ತು ಎಂದಿನಂತೆ ದಿನದ 24 ಗಂಟೆ ಕಾರ್ಯನಿರ್ವಹಿಸಲಿದೆ, ಎಂದು ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!