ಬಂಟರ ಸೌಹಾರ್ದ ಸಹಕಾರಿ ನಿಯಮಿತ: ಅಧ್ಯಕ್ಷರಾಗಿ ಮುನಿಯಾಲು ಉದಯ ಶೆಟ್ಟಿ ಆಯ್ಕೆ
ಹೆಬ್ರಿ (ಉಡುಪಿ ಟೈಮ್ಸ್ ವರದಿ) : ಪ್ರತಿಷ್ಠಿತ ಹೆಬ್ರಿ ಅಜೆಕಾರು ವಲಯ ಬಂಟರ ಸಂಘದ ವತಿಯಿಂದ ಆರಂಭವಾಗುವ ಬಂಟರ ಸೌಹಾರ್ದ ಸಹಕಾರಿ ನಿಯಮಿತ ಇದರ ಅಧ್ಯಕ್ಷರಾಗಿ ಉದ್ಯಮಿ ಸಮಾಜ ಸೇವಕ ಮುನಿಯಾಲು ಉದಯ ಕುಮಾರ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಬಂಟರ ಸೌಹಾರ್ದ ಸಹಕಾರಿ ನಿಯಮಿತ ಇದರ ಉಪಾಧ್ಯಕ್ಷರಾಗಿ ಸಂಘದ ಪ್ರಧಾನ ಕಾರ್ಯದರ್ಶಿ ಸೀತಾನದಿ ವಿಠಲ ಶೆಟ್ಟಿ, ನಿರ್ದೇಶಕರಾಗಿ ಪ್ರವೀಣ್ ಬಲ್ಲಾಳ್, ಭೂತುಗುಂಡಿ ಕರುಣಾಕರ ಶೆಟ್ಟಿ, ಸುಧಾಕರ್ ಶೆಟ್ಟಿ ಶೇಡಿಮನೆ, ಹರ್ಷ ಶೆಟ್ಟಿ ಬೇಳಂಜೆ, ಸುಮಾ ಎನ್. ಅಡ್ಯಂತಾಯ, ಶುಭಾವತಿ, ವಾದಿರಾಜ್ ಶೆಟ್ಟಿ ಚಾರ, ಅಶೋಕ್ ಶೆಟ್ಟಿ ಪಡುಕುಡೂರು, ಸಂದೀಪ್ ಶೆಟ್ಟಿ ಎಣ್ಣೆಹೊಳೆ, ಶಂಕರ್ ಶೆಟ್ಟಿ ಮುನಿಯಾಲು, ಸುಕೇಶ್ ಶೆಟ್ಟಿ ಹೆಬ್ರಿ, ಸತೀಶ್ ಶೆಟ್ಟಿ ಬೇಳಂಜೆ, ಪ್ರಕಾಶ್ ಶೆಟ್ಟಿ ಕಲ್ಲಿಲ್ಲು, ಶುಭದರ ಶೆಟ್ಟಿ ಮುದ್ರಾಡಿ ಆಯ್ಕೆಯಾಗಿದ್ದಾರೆ.