ಕೊರಂಟೈನ್ ಗೆ ಒಳಗಾಗದೆ ಎಸ್ಕೇಪ್ ಪ್ರಕರಣ – ಪ್ರಯಾಣಿಕರಿಂದ ಸ್ಪಷ್ಟನೆ
ಮಂಗಳೂರು -ದುಬೈಯಿಂದ ಬಂದು ಕೊರಂಟೈನ್ ಗೆ ಒಳಗಾಗದೆ ಎಸ್ಕೇಪ್ ಆಗಿದ್ದರೆ ಎಂಬ ವರದಿ ಮುಂಜಾನೆಯಿಂದ ಹರಿದಾಡುತ್ತಿದ್ದು ಇದೀಗ ಪ್ರಯಾಣಿಕರೊರಬ್ಬರು ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.
ದುಬೈ ನಿಂದ ಕಣ್ಣೂರು ವಿಮಾನ ನಿಲ್ಲ್ದಾಣಕ್ಕೆ ಬಂದ ಕೆಲವರು ಕೊರಂಟೈನ್ ಗೆ ಒಳಗಾಗದೆ ಎಸ್ಕೇಪ್ ಆಗಿದ್ದರೆ ಎಂಬ ವರದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದುಅದರ ಬಗ್ಗೆ ಇದೀಗ ಪ್ರಯಾಣಿಕರೊಬ್ಬರು ಸ್ಪಷ್ಟನೆ ನೀಡಿದ್ದು ಇಂತಹ ಘಟನೆ ನಡೆದಿಲ್ಲವೆಂಬುದಾಗಿ ತಿಳಿಸಿದ್ದಾರೆ.
ಈ ಬಗೆ ಸ್ಪಷ್ಟನೆ ನೀಡಿದ ಪ್ರಯಾಣಿಕ ದುಬೈನಿಂದ ಬಂದು ಕ್ವಾರಂಟೈನ್‌ಗೆ ಒಳಗಾಗಿರುವ, ”ನಾವು ಶನಿವಾರ ಕಣ್ಣೂರಿಗೆ ಬಂದಿದ್ದು ಮಂಗಳೂರಿಗೆ ಬಸ್ ಹಾಗೂ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಆದರೆ ಕಣ್ಣೂರಿಗೆ ತಲುಪಿದಾಗ ಬಸ್ ವ್ಯವಸ್ಥೆ ಇರಲಿಲ್ಲ. ಕಣ್ಣೂರಿನ ಮೂರು ಹೊಟೇಲ್‌ಗಳಲ್ಲಿ ನಾವು ಕ್ವಾರಂಟೈನ್‌ಗೆ ಒಳಗಾದೆವು. ಅಲ್ಲಿಂದ ಮಂಗಳೂರಿಗೆ ಹೋಗಲು ಹೇಳಿದ ಕಾರಣ ಬಳಿಕ ನಿನ್ನೆ ಸಂಜೆ ಸೇವಾ ಸಿಂಧೂ ಆಪ್ ಮೂಲಕ ನೊಂದಾಯಿಸಿ ಮಂಗಳೂರಿಗೆ ಹೊರಟಿದ್ದೇವೆ. ತಲಪಾಡಿ ಟೋಲ್‌ಗೇಟ್ ನಲ್ಲಿ ಎಲ್ಲಾ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡಲಾಗಿದೆ. ಅರ್ಜಿಯಲ್ಲಿ ಎಲ್ಲಾ ಮಾಹಿತಿಯನ್ನು ನಮೂದಿಸಿ ಮಂಗಳೂರಿನ ಹೊಟೇಲ್‌ನಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದೇವೆ ಎಂದು ಸ್ಪಷ್ಟ ಪಡಿಸಿದ್ದಾರೆ.
ನಮ್ಮ ಗಂಟಲ ದ್ರವದ ಮಾದರಿ ಸಂಗ್ರಹಕ್ಕಾಗಿ ಸಿಬ್ಬಂದಿಗಳು ಬಂದು ನಮ್ಮನ್ನು ಕರೆದುಕೊಂಡು ಹೋಗುವುದಾಗಿ ಹೊಟೇಲ್‌ನವರು ನಮಗೆ ತಿಳಿಸಿದ್ದಾರೆ ಆದರೆ ಯಾವುದೇ ಅಧಿಕಾರಿಯು ನಮ್ಮನ್ನು ಭೇಟಿಯಾಗಿಲ್ಲ . ದುಬೈನಲ್ಲಿ ಇರುವಾಗ ನಮಗೆ ಮಂಗಳೂರಿಗೆ ಬರುವ ವಿಮಾನದ ವ್ಯವಸ್ಥೆ ಮಾಡಲಾಗುವುದಿಲ್ಲ. ಕಣ್ಣೂರಿಗೆ ನೀವು ಹೋಗುವುದಾದರೆ ಅಲ್ಲಿಂದ ಮಂಗಳೂರಿಗೆ ಹೋಗಲು ಬಸ್ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದ್ದರು. ಬಳಿಕ ಯಾವ ವ್ಯವಸ್ಥೆಯೂ ಇರಲಿಲ್ಲ. ಅಷ್ಟೇ ಅಲ್ಲದೇ ಕಣ್ಣೂರಿನಲ್ಲಿ 7 ದಿನ ಬಳಿಕ ಮಂಗಳೂರಿನಲ್ಲಿ 7 ದಿನ ಕ್ವಾರಂಟೈನ್ ಒಳಗಾಗುವಂತೆ ಸೂಚಿಸಿದ್ದರು ಎಂದು ತಿಳಿಸಿದ್ದಾರೆ.