ಉಡುಪಿಯ ಸ್ವಾದಿಷ್ಟ್ ಹೋಟೆಲ್ ಸೀಲ್ ಡೌನ್

ಉಡುಪಿ (ಉಡುಪಿ ಟೈಮ್ಸ್ ವರದಿ) – ಬನ್ನಂಜೆಯಲ್ಲಿರುವ ಸ್ವಾದಿಷ್ಟ್ ಹೋಟೆಲ್ ಬಾಣಸಿಗನಿಗೆ ಕೊರೋನಾ ಸೋಂಕು ದೃಡವಾಗಿದ್ದು, ಇದೀಗ ಹೋಟೆಲ್ ಸೀಲ್ ಡೌನ್ ಆಗಿದೆ.


ಉಡುಪಿಯಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ಪಾರ್ಸೆಲ್ ವ್ಯವಸ್ಥೆ ಮಾಡಿದ್ದ ಕೆಲವೇ ಕೆಲವು ಹೋಟೆಲ್ ಗಳಲ್ಲಿ ಸ್ವಾದಿಷ್ಟ ಕೂಡ ಒಂದು. ಉಡುಪಿಯ ಹೃದಯ ಭಾಗದಲ್ಲಿ ಇರುವ ಈ ಹೋಟೆಲ್ ಉತ್ತಮ ವ್ಯಾಪಾರ ವಹಿವಾಟು ನಡೆಸುತ್ತಿತ್ತು. ಇದೀಗ ಈ ಹೋಟೆಲ್ ಸೀಲ್ ಡೌನ್ ಮಾಡಲಾಗಿದ್ದು, ಈ ಹೋಟೆಲ್ ನ ಬಾಣಸಿಗನಿಗೆ ಸೋಂಕು ದೃಡವಾದ ಬೆನ್ನಲ್ಲೇ ಈ ಹೋಟೆಲ್ ಸೀಲ್ ಡೌನ್ ಆದ ನಂತರ ಅಲ್ಲಿ ಹೋದ ಗ್ರಾಹಕರಿಗೆ ಮತ್ತು ಪಾರ್ಸೆಲ್ ತೆಗೆದುಕೊಂಡು ಹೋದವರಿಗೆ ಆತಂಕ ಶುರುವಾಗಿದೆ.

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯ ಏರಿಕೆ ಕಾಣುತ್ತಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಕಳೆದ ಒಂದೇ ದಿನದಲ್ಲಿ ಸೋಂಕಿತರ ಸಂಖ್ಯೆ 1 ಸಾವಿರದ ಗಡಿ ದಾಟಿದೆ. ಬೆಂಗಳೂರು ನಗರವೊಂದರಲ್ಲೇ 783 ಪ್ರಕರಣಗಳು ದೃಢಪಟ್ಟಿದೆ.

ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 1267 ಪ್ರಕರಣಗಳು ವರದಿಯಾಗಿದ್ದು, 16 ಮಂದಿ ಮೃತಪಟ್ಟಿದ್ದಾರೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 13190ಕ್ಕೇರಿಕೆಯಾಗಿದ್ದು, ಮೃತರ ಸಂಖ್ಯೆ 211 ತಲುಪಿದೆ.

ರಾಜ್ಯದಲ್ಲಿ ಒಟ್ಟು 7507 ಮಂದಿ ಗುಣಮುಖರಾಗಿದ್ದು, 5472 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 243 ಮಂದಿ ಗಂಭೀರ ಸ್ಥಿತಿಯಲ್ಲಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರು ನಗರದಲ್ಲಿ 783, ದಕ್ಷಿಣ ಕನ್ನಡದಲ್ಲಿ 97, ಬಳ್ಳಾರಿಯಲ್ಲಿ 71, ಉಡುಪಿಯಲ್ಲಿ 40, ಕಲಬುರಗಿಯಲ್ಲಿ 34, ಹಾಸನದಲ್ಲಿ 31, ಗದಗದಲ್ಲಿ 30, ಬೆಂಗಳೂರು ಗ್ರಾಮಾಂತರದಲ್ಲಿ 27, ಧಾರವಾಡದಲ್ಲಿ 18, ಮೈಸೂರಿನಲ್ಲಿ 18, ಬಾಗಲಕೋಟೆಯಲ್ಲಿ 17, ಉತ್ತರ ಕನ್ನಡದಲ್ಲಿ 14, ಹಾವೇರಿಯಲ್ಲಿ 12, ಕೋಲಾರದಲ್ಲಿ 11, ಬೆಳಗಾವಿಯಲ್ಲಿ 8, ಬೀದರ್, ಚಿತ್ರದುರ್ಗದಲ್ಲಿ ತಲಾ 7, ರಾಯಚೂರು, ಮಂಡ್ಯ, ದಾವಣಗೆರೆಯಲ್ಲಿ ತಲಾ 6, ವಿಜಯಪುರದಲ್ಲಿ ತಲಾ 5, ಶಿವಮೊಗ್ಗದಲ್ಲಿ 4, ಚಿಕ್ಕಬಳ್ಳಾಪುರ, ಕೊಪ್ಪಳ, ಚಿಕ್ಕಮಗಳೂರು, ಕೊಡಗಿನಲ್ಲಿ ತಲಾ 2, ತುಮಕೂರಿನಲ್ಲಿ 2, ಯಾದಗಿರಿಯಲ್ಲಿ 1 ಪ್ರಕರಣ ವರದಿಯಾಗಿವೆ.

ಧಾರವಾಡದಲ್ಲಿ 71 ವರ್ಷದ ಮಹಿಳೆ, ಹಾಸನದಲ್ಲಿ 60 ವರ್ಷದ ಮಹಿಳೆ, ಬೆಂಗಳೂರು  ನಗರದಲ್ಲಿ 66, 62,55 ವ್ಯಕ್ತಿಗಳು, ಬಾಗಲಕೋಟೆಯಲ್ಲಿ 55, ದಕ್ಷಿಣ ಕನ್ನಡದಲ್ಲಿ 48 ವರ್ಷದ ಮಹಿಳೆ, ಮೈಸೂರಿನಲ್ಲಿ 70, ತುಮಕೂರಿನಲ್ಲಿ 76 ವರ್ಷದ ಮಹಿಳೆ, 40 ವರ್ಷದ ವ್ಯಕ್ತಿ, ಬೆಂಗಳೂರು ನಗರದಲ್ಲಿ 65, ಬಾಗಲಕೋಟೆಯಲ್ಲಿ 50, ಬಳ್ಳಾರಿಯಲ್ಲಿ 57, ಕಲಬುರಗಿಯಲ್ಲಿ 65, ದಕ್ಷಿಣ ಕನ್ನಡದಲ್ಲಿ 31 ವರ್ಷದ ವ್ಯಕ್ತಿ 51 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. 

Leave a Reply

Your email address will not be published. Required fields are marked *

error: Content is protected !!