ಕುಡ್ಲದವರಿಗೆ ತುಳುವಲ್ಲಿ ಸೊಲ್ಮೆಲ್ಲು ಎಂದ ಮಂಗಳೂರು ಪೊಲೀಸ್ ಕಮಿಷನರ್
ಮಂಗಳೂರು: ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ಇದೀಗ ವರ್ಗಾವಣೆಯಾಗಿದ್ದು, ಟ್ವಿಟರ್‌ನಲ್ಲಿ ತುಳುವಿನಲ್ಲಿಯೇ ಮಂಗಳೂರಿನ ಜನರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ‘ಕುಡ್ಲದ ಮಾತ ಮೋಕೆದ ಬಂಧುಲೇ, 11 ತಿಂಗೊಳುರ್ದ್ ಕುಡ್ಲದ ಪೊಲೀಸ್ ಆಯುಕ್ತೆಯಾದ್ ಸೇವೆ ಮಂದಿನ ಎಂಕ ಇತ್ತೆ ವರ್ಗಾವಣೆ ಅವೋಂದುಂಡು. ಇಲಾಖೆದ ಸಂಪೂರ್ಣ ಸಹಕಾರದೊಟ್ಟಿಗೆ ಮಸ್ತ್ ಪ್ರಾಮಾಣಿಕ ಬೊಕ್ಕ ಜನಪರವಾದು ಎನ್ನ ಕರ್ತವ್ಯ ಮಲ್ತೊಂದು ಬೈದೆ. ಎಂಕ್ ಸಹಕಾರ ಬೆಂಬಲ ಕೊರ್ನ ಮಾತೆರೆಗ್ಲಾ ಉಡಲ್ ದಿಂಜಿನ ಸೊಲ್ಮೆಲು’ (ಕುಡ್ಲದ ಬಂಧುಗಳೇ, 11 ತಿಂಗಳಿಂದ ಮಂಗಳೂರು ನಗರ ಪೊಲೀಸ್ ಆಯುಕ್ತನಾಗಿ ಸೇವೆ ಸಲ್ಲಿಸಿ, ಇದೀಗ ವರ್ಗಾವಣೆ ಆಗಿದ್ದೇನೆ. ಇಲಾಖೆಯ ಸಹಕಾರದೊಂದಿಗೆ ಪ್ರಾಮಾಣಿಕ ಹಾಗೂ ಜನಪರವಾದ ಕರ್ತವ್ಯ ನಿರ್ವಹಿಸಿದ್ದೇನೆ. ನನಗೆ ಸಹಕಾರ, ಬೆಂಬಲ ಕೊಟ್ಟ ಎಲ್ಲರಿಗೂ ಹೃದಯಾಂತರಾಳದ ಧನ್ಯವಾದಗಳು) ಎಂದು ತಿಳಿಸಿದ್ದಾರೆ.
ಡಾ.ಪಿ.ಎಸ್. ಹರ್ಷ ಅವರ ಟ್ವೀಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿ ಅನೇಕ ಜನ , ‘ನಿಮ್ಮ ಸೇವೆಯನ್ನು ಮರೆಯಲು ಸಾಧ್ಯವಿಲ್ಲ. ಕುಡ್ಲದ ಹೆಸರು ಹಾಳಾಗದಂತೆ ನೋಡಿಕೊಂಡಿದ್ದೀರಿ. ಆದಷ್ಟು ಬೇಗ ಮತ್ತೆ ಮಂಗಳೂರಿಗೆ ಬನ್ನಿ’ ಎಂದು ಆಶಿಸಿದ್ದಾರೆ.