ಉಡುಪಿ: ನಗರದಲ್ಲಿ ಸೋಮವಾರದಿಂದ ಉಚಿತ ಬಸ್ ಸಂಚಾರ!

ಉಡುಪಿ: (ಉಡುಪಿ ಟೈಮ್ಸ್ ವರದಿ ) ಕರೋನಾದಿಂದ ಕಂಗೆಟ್ಟು ಹೋದ ಸಾರ್ವಜನಿಕರಿಗೆ ಸಾರಿಗೆ ಸೇವೆಯಿಂದ ಸಹಾಯವಾಗುವಂತೆ ಮಾಡಲು ,ಉಡುಪಿ ಶಾಸಕರಾದ ರಘುಪತಿ ಭಟ್ ಅವರ ಆಸರೆ ಚಾರಿಟಬಲ್ ಟ್ರಸ್ಟ್ ಸಹಯೋಗದೊಂದಿಗೆ ಕರ್ನಾಟಕದಲ್ಲೇ ವಿನೂತನ ಯೋಜನೆ ಮೇ 25 ಸೋಮವಾರದಿಂದ ಜಾರಿ ಬರಲಿದೆ .

ಉಡುಪಿ ಬಸ್ ಮಾಲಕರು ಇದಕ್ಕೆ ಗುಣಾತ್ಮಕವಾಗಿ ಸ್ಪಂದಿಸಿದ್ದು, ಸರಕಾರದ ನಿಯಮಗಳಾದ ಸ್ಯಾನಿಟೈಸರ್ ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ವಹಿಸಿಕೊಂಡು ಈ ಯೋಜನೆ ಜಾರಿಗೆ ಬರಲಿದೆ . ಪ್ರಾಯೋಗಿಕವಾಗಿ ಬಸ್ ಮಾಲಕರ ಸಂಘದಿಂದ ನೀಡುವ ಚಲೋ ಟ್ರಾವೆಲ್ ಕಾರ್ಡ್ ನ್ನು ಬಸ್ಸಿನಲ್ಲಿ ಪ್ರತೀ ಪ್ರಯಾಣಿಕರಿಗೆ ಉಚಿತವಾಗಿ ನೀಡಲಾಗಿತ್ತದೆ.

ಇದನ್ನು ಪ್ರಯಾಣಿಕರು ನಿರ್ವಾಹಕರಲ್ಲಿವ ಟಿಕೇಟಿಂಗ್ ಮಷಿನ್ ಮೇಲೆ ಇಟ್ಟು ತಾವು ಹೋಗುವ ಸ್ಥಳವನ್ನು ಹೇಳಿದರೆ ನಿರ್ವಾಹರು ಟಿಕೆಟ್ ನೀಡುತ್ತಾರೆ ಯಾವುದೇ ಹಣದ ವ್ಯವಹಾರ ನಿರ್ವಾಹಕನೊಂದಿಗೆ ಇರುವುದಿಲ್ಲ. ಎಲ್ಲವೂ ಡಿಜಿಟಲ್ ಆಗಿರುತ್ತದೆ ಮತ್ತು ಕಾರ್ಡ್ ಆಗಲಿ ಹಣ ಆಗಲಿ ನಿರ್ವಾಹಕ ಅಥವಾ ಪ್ರಯಾಣಿಕ ಮುಟ್ಟುವ ಅಗತ್ಯ ಇರುವುದಿಲ್ಲ ಆದುದರಿಂದ ಕರೋನ ಹರಡುವ ಭಯವಿಲ್ಲಾ .ಮಾಸ್ಕ್ ಹಾಕಿಕೊಂಡ ಪ್ರಯಾಣಿಕರಿಗೆ ಬಸ್ ಹತ್ತುವ ಅವಕಾಶ ಕಲ್ಪಿಸಲಾಗಿದೆ. ಸೋಮವಾರ ಬೆಳಿಗ್ಗೆ 7 ಘಂಟೆಯಿಂದ ಈ ಕೆಳಗಿನ ಮಾರ್ಗಗಳಲ್ಲಿ ಬಸ್ಸು ಸಂಚಾರ ಶುರುವಾಗುತ್ತದೆ ಮತ್ತು ಅದೇ ದಿನ ಬೆಳಿಗ್ಗೆ 9-00 ಘಂಟೆಗೆ ಸಿಟಿ ಬಸ್ ನಿಲ್ದಾಣದಲ್ಲಿ ಈ ಕಾರ್ಯಕ್ರಮಕ್ಕೆ ಮಾನ್ಯ ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಚಾಲನೆ ನೀಡಲಿದ್ದಾರೆ.
ಎಲ್ಲಾ ಮಾರ್ಗದಲ್ಲಿ 2 ಬಸ್ಸುಗಳು ವಿರುದ್ಧ ದಿಕ್ಕಿನಿಂದ ಚಲಿಸುತ್ತವೆ.

1 ) ಹೂಡೆ – ತೊಟ್ಟಂ -ಮಲ್ಪೆ -ಉಡುಪಿ -ಮಣಿಪಾಲ -ಪರ್ಕಳ
2) ಹೂಡೆ – ಕೆಮ್ಮಣ್ಣು -ಸಂತೆಕಟ್ಟೆ – ಅಂಬಾಗಿಲು – ಗುಂಡಿಬೈಲು – ಕಲ್ಸoಕ -ಉಡುಪಿ
3) ಸಂಪಿಗೆನಗರ -ಕಡೆಕಾರ್ -ಅಂಬಲಪಾಡಿ -ಉಡುಪಿ- ಮಣಿಪಾಲ -ಪರ್ಕಳ
4) ಅಲೆವೂರು -ಕೊರಂಗ್ರಪಾಡಿ – ಉಡುಪಿ ಮಣಿಪಾಲ -ರಜತಾದ್ರಿ
ಉಡುಪಿ ಡಯಾನಾ ಅಲೆವೂರು
5 ) ಪ್ರಗತಿನಗರ ಮಣಿಪಾಲ ಉಡುಪಿ ಕಲ್ಸoಕ ಗುಂಡಿಬೈಲ್ ದೊಡ್ಡಣಗುಡ್ಡೆ ಪೆರಂಪಳ್ಳಿ ಚರ್ಚ್

ಈ ಬಸ್ಸು ಗಳ ವೇಳಾಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಎಲ್ಲಾ ಬಸ್ ಗಳಲ್ಲಿ ಮತ್ತು ಸಿಟಿ ಬಸ್ ನಿಲ್ದಾಣದಲ್ಲಿ ಪ್ರದರ್ಶಿಸಲಾಗುವುದು . ಎಂದು ಉಡುಪಿ ಬಸ್ ಮಾಲಕರ ಸಂಘದ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

1 thought on “ಉಡುಪಿ: ನಗರದಲ್ಲಿ ಸೋಮವಾರದಿಂದ ಉಚಿತ ಬಸ್ ಸಂಚಾರ!

Leave a Reply

Your email address will not be published. Required fields are marked *

error: Content is protected !!