ಉಡುಪಿಯಲ್ಲಿ ಪ್ರಥಮ ಬಾರಿಗೆ ರೋಬೋಟ್ ನಿಂದ ಸೆನಿಟೈಸರಿಂಗ್
ಉಡುಪಿ – ಮಹಾಲಕ್ಷ್ಮಿ ನೇತ್ರ ಚಿಕಿತ್ಸ್ಯಾಲಯದ ಹಾಗು ಲೇಸರ್ ಕೇಂದ್ರದಲ್ಲಿ ಕರ್ನಾಟಕ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ವೆನೋರಾ ರೋಬೆಟ್ ಆಧುನಿಕ ತಂತ್ರ ಗಾರಿಕೆಯ ಸ್ವಯಂ ಚಾಲಿತ ಯು ವಿ ಸೆನಿಟೈಜರಿಂಗ್ ರೋಬೆಟ್ ಕಾರ್ಯ ಆರಂಭದ ಉದ್ಘಾಟನೆ ಯನ್ನು ಮುಖ್ಯ ಅತಿಥಿಯಾದ ಮಣಿಪಾಲ ಕೆ ಎಮ್ ಸಿ ಮೆಡಿಕಲ್ ಕಾಲೇಜಿನ ಡೀನ್ ಡಾ ಶರತ್ ರಾವ್ ದೀಪಾ ಬೆಳಗಿಸಿ ಚಾಲನೆ ನೀಡಿದರು.
ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ಕೊಠಡಿಯಲ್ಲಿ ವೈರಾಣು ವೈರಸ್ ಗಳನ್ನೂ ಕೇವಲ 5 ನಿಮಿಷದಲ್ಲಿ ಸುಮಾರು 140 ಚದರ ಅಡಿ ಜಾಗವನ್ನು ಸ್ವಯಂಚಾಲಿತವಾಗಿ ಬ್ಯಾಕ್ಟಿರಿಯಾ , ಫಂಗಸ್ ಹಾಗೂ ವೈರಸ್ ಗಳನ್ನೂ u v c ಕಿರಣ ಗಳ ಮೂಲಕ ಸ್ವಯo ಸ್ವಚ್ಛ ಗೊಳಿಸುವ ಈ ರೋಬೋರ್ಟ್ ರೀಮೋಟ್ ಕಂಟ್ರೋಲ್ ಸಹಾಯದಿಂದ ಆಸ್ಪತ್ರೆಯ ಹೊರ ರೋಗಿಗಳ ಪ್ರದೇಶವನ್ನು ಸ್ವಚ್ಛಗೊಳಿಸುತ್ತದೆ.
ಕಾರ್ಯಕ್ರಮದ ಮುಖ್ಯ ವೇದಿಕೆಯಲ್ಲಿ ಉಡುಪಿ ,ಐ ಎಮ್ ಎ ಉಡುಪಿ ಕರಾವಳಿ ಶಾಖೆ ಅಧ್ಯಕ್ಷರಾದ ಡಾ ಉಮೇಶ ಪ್ರಭು , ಮಹಾಲಕ್ಷ್ಮಿ ನೇತ್ರ ಚಿಕಿತ್ಸಾಲಯದಾ ಡಾ ಸಂದೀಪ್ ಶೆಣೈ ,ಡಾ ಅಜಿತ್ ,ಶೆಣೈ ,ಉಮೇಶ್ ನಾಯಕ್ ,ಡಾ. ವಿಜ್ಞಾ ಕಾಮತ್ ಆಸ್ಪತ್ರೆಯ ಹಿತೈಷಿಗಳು ಉಪಸ್ಥಿತರಿದ್ದರು.