ಕೊರಂಗ್ರಪಾಡಿ ವ್ಯವಸಾಯಿಕ ಸಂಘ: ಕೊರೋನಾ ವಾರಿಯರ್ಸ್ ಗೆ ಸನ್ಮಾನ

ಕುಕ್ಕಿಕಟ್ಟೆ: ಜಗತ್ತಿಗೆ ಹರಡಿರುವ ಕೋವಿಡ್-19 ಮಹಾಮಾರಿಯ ವಿರುದ್ದ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ, ಕೊರಂಗ್ರಪಾಡಿ ಸಹಕಾರಿ ವ್ಯವಸಾಯಿಕ ಸಂಘದ ಕಾರ್ಯವ್ಯಾಪ್ತಿಯ ಆಶಾ ಕಾರ್ಯಕರ್ತೆಯರನ್ನು ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ಉಡುಪಿ ಸಹಕಾರಿ ಯೂನಿಯನ್ ಅಧ್ಯಕ್ಷರಾದ, ಇಂದ್ರಾಳಿ ಜಯಕರ ಶೆಟ್ಟಿಯವರು ಮಾತನಾಡುತ್ತಾ, ಕೋವಿಡ್-19 ಕಾಯಿಲೆ ಬರುವುದಕ್ಕಿಂತ ಮೊದಲು ಆಶಾ ಕಾರ್ಯಕರ್ತೆಯರಿಗೆ ಇಷ್ಟೊಂದು ಜವಾಬ್ದಾರಿ ಇದೆ ಎಂದು ಗ್ರಾಮೀಣ ಪ್ರದೇಶದ ಜನರಿಗೆ ತಿಳಿದಿರಲಿಲ್ಲ. ಇವರು ಆರೋಗ್ಯ ಇಲಾಖೆ ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದರು. ಈ ಮಹಾಮಾರಿ ಕಾಯಿಲೆ ಬಂದ ಮೇಲೆ ಆಶಾ ಕಾರ್ಯಕರ್ತೆಯರು ಯಾರು ಇವರ ಜವಾಬ್ದಾರಿ ಏನೆಂಬುದು ನಮಗೆಲ್ಲಾ ತಿಳಿಯಿತು. ಹಾಗೆಯೇ ಈ ಆಶಾ ಕಾರ್ಯಕರ್ತೆಯರು, ದೇಶ ಕಾಯುವ ಸೈನಿಕರಂತೆ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಭಿನಂದಿಸಿ ಶ್ಲಾಘಿಸಿದರು.

ಸಂಘದ ಅಧ್ಯಕ್ಷರಾದ ಕೆ. ಪ್ರವೀಣ್ ಶೆಟ್ಟಿಯವರು ಅತಿಥಿಗಳನ್ನು ಸ್ವಾಗತಿಸಿ, ಮಾತಾಡುತ್ತಾ, ಆಶಾ ಕಾರ್ಯಕರ್ತೆಯರ ವೃತ್ತಿ ಹಾಗೂ ಸಮಾಜಕ್ಕೆ ನೀಡುವ ಕೊಡುಗೆ ಅಪಾರವಾದದ್ದು ಕೋವಿಡ್-19 ನಿಂದ ಇವರ ಅವಶ್ಯಕತೆ ಏನೆಂಬುದು ಎಲ್ಲರಿಗೂ ಅರ್ಥವಾಗಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಸತೀಶ ದೇವಾಡಿಗ, ನಿರ್ದೇಶಕರಾದ ಅಶೋಕ್ ಕುಮಾರ್ ಅಲೆವೂರು, ಹರೀಶ್ ಶೇರಿಗಾರ್, ಯತೀಶ್ ಕುಮಾರ್, ಎ .ದಿನೇಶ್ ಕಿಣಿ, ಹರೀಶ್ ದೇವಾಡಿಗ , ಅಲೆವೂರು ಶ್ರೀಧರ ಶೆಟ್ಟಿ , ವಿ . ಚಂದ್ರ ಹಾಸ ಶೆಟ್ಟಿ, ವಿಜಯ ಪಾಲನ್, ಎಂ . ಕಿಟ್ಟ ಮಾಸ್ತರ್ , ರಮಾದೇವಿ, ಶ್ರೀಧರ ದೇವಾಡಿಗ, ದಿನೇಶ್ ಸಿ. ನಾಯ್ಕ್ ಹಾಗು ಶ್ರೀಮತಿ ಲಕ್ಷ್ಮೀ ಚಂದ್ರಶೇಖರ್, ಹಿರಿಯ ವ್ಯವಸ್ಥಾಪಕರಾದ ವಿಜಯಲಕ್ಷ್ಮಿ, ಜಯೇಂದ್ರ, ಹರೀಶ್‌ಎಂ. ಸಭೆಯಲ್ಲಿ ಉಪಸ್ಥಿತರಿದ್ದು, ಶಾಖಾ ವ್ಯವಸ್ಥಾಪಕರಾದ ಮಂಜೇಶ್ ಕುಮಾರ್‌ರವರು ಕಾರ್ಯಕ್ರಮ ನಿರೂಪಿಸಿ, ಸಂಘದ ಪ್ರಧಾನ ವ್ಯವಸ್ಥಾಪಕರಾದ ಶೇಖರ್ ಸುವರ್ಣರವರು ವಂದಿಸಿದರು.

ಉಡುಪಿ: ಕೊರೋನಾ ವೈರಸ್ ತಡೆಗಟ್ಟುವವಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಬಹು ಹೆಚ್ಚು ಈ ಕಾರ್ಯಗಳಿಗೆ ಸರ್ವತ್ರ ಮೆಚ್ಚುಗೆ ವ್ಯಕ್ತವಾಗಿದೆ.ಕೊರೋನಾ ವಾರಿಯರ್ಸ್ ಆಗಿ ದುಡಿದ ಸುಮಾರು 14 ಮಂದಿ ಆಶಾ ಕಾರ್ಯಕರ್ತರಿಗೆ ಕೊರಂಗ್ರಪಾಡಿ ವ್ಯವಸಾಯಿಕ ಸಹಕಾರಿ ಸಂಘದ ವತಿಯಿಂದ ನಗದು ಸಹಿತ ಶಾಲು ಹೊದಿಸಿ ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *

error: Content is protected !!