ಆಗುಂಬೆ ಘಾಟಿಯಲ್ಲಿ ಘನ ವಾಹನ ಸಂಚಾರಕ್ಕೆ ಬ್ರೇಕ್

ಉಡುಪಿ (ಉಡುಪಿ ಟೈಮ್ಸ್ ವರದಿ) – ಮಳೆಗಾಲದ ಸಂದರ್ಭದಲ್ಲಿ ಆಗುಂಬೆಯ ಘಾಟಿಯ ಇಕ್ಕೆಲಗಳ ಮಣ್ಣು ಕುಸಿಯುವ ಅಪಾಯ ಹೆಚ್ಚಿರುವ ಕಾರಣ ಘನ ವಾಹನ ಗಳ ಸಂಚಾರವನ್ನ ನಿಷೇಧಿಸುವಂತೆ ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಆದೇಶ ಹೊರಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 169 (A ) ಉಡುಪಿ -ತೀರ್ಥಹಳ್ಳಿ ಸಂಪರ್ಕ ರಸ್ತೆಯ ಆಗುಂಬೆ ಘಾಟಿ ರಸ್ತೆ ತುಂಬಾ ಕಿರಿದಾಗಿದ್ದು ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಯ ಇಕ್ಕೆಲಗಳ ಮಣ್ಣು ಕುಸಿಯುವ ಭೀತಿಯಿದ್ದು ಸಾರ್ವಜನಿಕರ ರಕ್ಷಣೆಯನ್ನ ಗಮನದಲ್ಲಿರಿಸಿ ಜಿಲ್ಲಾಧಿಕಾರಿ 12 ಟನ್ ಗಿಂತ ಅಧಿಕ ಭಾರವಿರುವ ವಾಹನಗಳ ಸಂಚಾರವನ್ನು 15 /10 /2020 ರವರೆಗೆ ನಿರ್ಬಂಧಿಸಲಾಗಿದೆ. ಈ ವಾಹನಗಳಿಗೆ ಪರ್ಯಾಯ ಮಾರ್ಗವಾಗಿ ಬ್ರಹ್ಮಾವರ – ಬಾರಕೂರು ನ ಮೂಲಕ ಹುಲಿಕಲ್ ಘಾಟ್ ನಿಂದ ತೀರ್ಥಹಳ್ಳಿ ಸಂಪರ್ಕಿಸಬಹುದಾಗಿದೆ, ಅಥವಾ ಕಾರ್ಕಳ – ಬಜಗೋಳಿ ಮೂಲಕ ಎಸ್ ಕೆ ಬಾರ್ಡರ್ ನ ನಿಂದ ಶಿವಮೊಗ್ಗದ ಮೂಲಕ ಸಂಚರಿಸಬಹುದಾಗಿ ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಲಾಗಿದೆ

Leave a Reply

Your email address will not be published. Required fields are marked *

error: Content is protected !!