ಉಡುಪಿ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದ ಮುಂಬೈ ವ್ಯಕ್ತಿಯ ಸಾವು: 57 ಮಂದಿಗೆ ಕ್ವಾರಂಟೈನ್!
ಉಡುಪಿ: (ಉಡುಪಿ ಟೈಮ್ಸ್ ವರದಿ) ಕ್ವಾರಂಟೈನ್ ನಲ್ಲಿದ್ದ 54 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಮೃತ ವ್ಯಕ್ತಿಯ ಪ್ರೈಮರಿ ಕಾಂಟಾಕ್ಟ್ ಗೆ ಬಂದ 57 ಜನ ಮತ್ತು ಸೆಕೆಂಡರಿ ಕಾಂಟಾಕ್ಟ್‌ಗೆ ಬಂದ 38 ಜನರ ಮೇಲೆ ಜಿಲ್ಲಾಡಳಿತ ನಿಗಾ ಇಡಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ತಿಳಿಸಿದ್ದಾರೆ.
ಮಹಾರಾಷ್ಟ್ರದಿಂದ ತನ್ನ ಹುಟ್ಟೂರಾದ ಕುಂದಾಪುರ ತಾಲೂಕಿಗೆ ಮೇ 5 ರಂದು ಆಗಮಿಸಿದ್ದ ವ್ಯಕ್ತಿ, ಎದೆನೋವಿಗಾಗಿ ಕುಂದಾಪುರ ತಾಲೂಕು ಆಸ್ಪತ್ರೆಗೆ ಮೇ 13 ರಂದು ದಾಖಲಾಗಿದ್ದರು. ಆದರೆ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಣಿಪಾಲ ಕೆಎಂಸಿಗೆ ದಾಖಲಿಸಲಾಗಿತ್ತು. ಅಲ್ಲಿ ಅವರಿಗೆ ಸರ್ಜರಿ ಮಾಡಿದ್ದೂ, ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೇ 14ರ ಬೆಳಗ್ಗೆ ನಿಧನ ಹೊಂದಿದ್ದಾರೆ. ನಂತರ ಅವರ ಗಂಟಲ ದ್ರವದ ಮಾದರಿಯನ್ನ ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್ ಸೋಂಕು ಇರುವುದು ದೃಢ ವಾಗಿದೆ.
ಕುಂದಾಪುರದ ಹಾಲ್ ಒಂದರಲ್ಲಿ ಸರಕಾರಿ ಕ್ವಾರಂಟೈನ್‌ನಲ್ಲಿ ಮೃತ ವ್ಯಕ್ತಿಯಿದ್ದಿದು ಇದೀಗ ಮೃತ ವ್ಯಕ್ತಿಯ ಜೊತೆ ಪ್ರಯಾಣ ಬೆಳೆಸಿದ 5 ಜನ, ಕುಂದಾಪುರ ಹಾಲ್ ನಲ್ಲಿ ಪ್ರೈಮರಿ ಕಾಂಟಾಕ್ಟ್ ಗೆ ಬಂದವರನ್ನು ಹಾಗು ಯಾವುದೇ ಸುರಕ್ಷತೆಯನ್ನ ವಹಿಸದೆ ಮೃತ ವ್ಯಕ್ತಿಯ ಸಂಪರ್ಕಕ್ಕೆ ಬಂದಿರುವುದರಿಂದ ಕೆಎಂಸಿಯ 3 ಸಿಬ್ಬಂದಿಗಳನ್ನು ಕ್ವಾರಂಟೈನ್ನಲ್ಲಿರಿಸಲಾಗಿದೆ ಎಂಬುದಾಗಿ ಜಿಲ್ಲಾಧಿಕಾರಿ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಇದು ಕೊರೋನಕ್ಕೆ ಮೊದಲ ಬಲಿಯಾಗಿದೆ. ಮೃತ ವ್ಯಕ್ತಿಯ ಅಂತಿಮ ಕ್ರಿಯೆಯು ಕೋವಿಡ್ ನಿಯಮಾನುಸಾರವಾಗಿ ನಡೆಯಲಾಗುವುದು ಎಂಬುದಾಗಿ ಜಿಲ್ಲಾಧಿಕಾರಿ ತಿಳಿಸಿದರು.
He died because of heart attack..not from covid-19. Common sense.