ಲಾಕ್ ಡೌನ್ ಮದುವೆ 30 ಸಾವಿರಕ್ಕೆ: ಶಂಕರಪುರ ಫ್ರೆಂಡ್ಸ್ ಕೇಟರರ್ಸ್ ನ ವಿನೂತನ ಪ್ರಯೋಗ
ಉಡುಪಿ : ಕೊರೊನ ಹಾವಳಿಯಿಂದ ವಿಶ್ವವೇ ತತ್ತರಿಸಿ ಹೋಗಿದೆ. ನಮ್ಮ ದೇಶದಲ್ಲಿಯೂ ದಿನಪ್ರತಿ ಕೊರೊನ ಸೊಂಕಿತರ ಸಂಖ್ಯೆ ಹೆಚ್ಚುತ್ತಿದೆ. ದೇಶವನ್ನು ಈ ಸಮಸ್ಯೆಯಿಂದ ಪಾರು ಮಾಡಲು ಲಾಕ್ ಡೌನ್ನಲ್ಲಿ ಇಡಲಾಗಿದ್ದು, ಇದರಿಂದ ದೇಶದ ಆರ್ಥಿಕ ವ್ಯವಸ್ಥೆಗೆ ಪೆಟ್ಟು ಬಿದ್ದಿದೆ. ಅದರಲ್ಲೂ ಏಪ್ರಿಲ್, ಮೇ ತಿಂಗಳಲ್ಲಿ ಮದುವೆ ಮತ್ತು ಶುಭ ಸಮಾರಂಭಗಳ ಸೀಸನ್ ಆಗಿದ್ದರೂ, ಕೊರೊನ ಮತ್ತು ಲಾಕ್ ಡೌನ್ ನಿಂದಾಗಿ ಎಲ್ಲವೂ ಸ್ಥಗಿತಗೊಂಡಿದೆ. ಇದರಿಂದ ಶುಭ ಸಮಾರಂಭಗಳನ್ನು ಆಯೋಜಿಸುವವರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.
ನೂರಾರು ಜನರು ಉದ್ಯೋಗವಿಲ್ಲದೆ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಸರಕಾರವು ಶುಭ ಸಮಾರಂಭಗಳಿಗೆ ಕಾನೂನುಗಳನ್ನು ರೂಪಿಸಿದ್ದರೂ, ಈಗ ಸ್ವಲ್ಪ ಮಟ್ಟಿಗೆ ಸಡಿಲಗೊಳಿಸಿದೆ. ಇದೀಗ ಮದುವೆ ಕಾರ್ಯಕ್ರಮಗಳನ್ನು ನಡೆಸಲು ಸರಕಾರವು ಅನುಮತಿ ನೀಡಿದ್ದರೂ, ಕೇವಲ 50 ಜನರು ಮಾತ್ರ ಸಮಾರಂಭಗಳಿಗೆ ತೆರಳಬಹುದು ಎಂದು ಕಾನೂನು ರೂಪಿಸಿದೆ. ಇದರಿಂದ ಸಂಕಷ್ಟಕ್ಕೆ ಒಳಗಾಗಿದ್ದ ಕೆಟರರ್ಸ್, ಡೆಕೋರೇಷನ್, ಧ್ವನಿವರ್ಧಕ, ಫೋಟೊಗ್ರಫಿ ಮತ್ತು ಇತರರು ಸ್ವಲ್ಪ ನಿರಾಳವಾಗಿದ್ದರೆ. ಮದುವೆ ಮತ್ತು ಶುಭ ಸಮಾರಂಭಗಳನ್ನು ವಿಶೇಷ ಪ್ಯಾಕೇಜ್ನೊಂದಿಗೆ ನಡೆಸಲು ಶಂಕರಪುರದ ‘ಫ್ರೆಂಡ್ಸ್ ಕೆಟರರ್ಸ್’ ಸಿದ್ಧಗೊಂಡಿದೆ.
ಅವಳಿ ಜಿಲ್ಲೆಗಳಲ್ಲಿ ಮನೆಮಾತಾಗಿರುವ ಶಂಕರಪುರದ ಫ್ರೆಂಡ್ಸ್ ಕೇಟರರ್ಸ್ ಕೊರೋನಾ ಲೊಕ್ಡೌನ್ ಸಂಕಷ್ಟ ಸಮಯದಲ್ಲಿ ಹೊಸ ಪ್ಯಾಕೇಜ್ ನ್ನು ಜನರಿಗಾಗಿ ಪರಿಚಯಿಸಿದೆ . ಕೊರೋನಾ ಎಮರ್ಜೆನ್ಸಿ ಸಂಕಷ್ಟದ ಸಂದರ್ಭದಲ್ಲಿ 50 ಜನರ ಕಾರ್ಯಕ್ರಮಕ್ಕೆ ಕೇವಲ 30,000 ರೂಪಾಯಿಗಳಿಗೆ ಸುಸ್ಸಜ್ಜಿತ ಸಭಾಭವನ, ಜನರೇಟರ್ ವ್ಯವಸ್ಥೆ, ಧ್ವನಿವರ್ಧಕ, ಡೆಕೋರೇಷನ್, ಸಸ್ಯಾಹಾರ ಹಾಗು ಮಾಂಸಾಹಾರ ಊಟದ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಫ್ರೆಂಡ್ಸ್ ಕೇಟರರ್ಸ್ ಶಂಕರಪುರದ ಪ್ರಕಟನೆ ತಿಳಿಸಿದೆ.
ಸುಮಾರು 20 ವರ್ಷಗಳ ಅನುಭವ ಇರುವ ಫ್ರೆಂಡ್ಸ್ ಕೇಟರರ್ಸ್ ಉಭಯ ಜಿಲ್ಲೆಗಳ ಜನರ ಮನ ಗೆದ್ದಿದೆ. ಗುಣಮಟ್ಟ ಹಾಗು ಪ್ರಮಾಣದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ನಿರಂತರವಾಗಿ ಶುಚಿ, ರುಚಿ, ಗುಣಮಟ್ಟ ಕಾಪಾಡಿಕೊಂಡು ಬಂದಿರುವುದೇ ಈ ಸಂಸ್ಥೆಯ ಯಶಸ್ಸಿನ ಗುಟ್ಟು. ಕೊರೋನಾ ಲಾಕ್ ಡೌನ್ ಸಂಕಷ್ಟದ ಸಮಯದಲ್ಲಿ ಎಲ್ಲ ನಿಯಮಗಳನ್ನು ಪಾಲಿಸುವ ಮೂಲಕ ಕಾರ್ಯಕ್ರಮವನ್ನುನಡೆಸಿಕೊಡಲಾಗುವುದು. ಸಾಮಾಜಿಕ ಅಂತರ, ಸ್ಯಾನಿಟೈಝೆರ್ ಬಳಕೆ, ಮಾಸ್ಕ್ ತರದೇ ಇರುವವರಿಗೆ ಮಾಸ್ಕ್ ನೀಡುವಿಕೆ, ಹೀಗೆ ಎಲ್ಲ ನಿಯಮಗಳನ್ನು ಪಾಲಿಸಲಾಗುವುದು. ಇದೊಂದು ಅತ್ತ್ಯುತ್ತಮ ಕೊಡುಗೆ ಆಗಿದ್ದು, ಗ್ರಾಹಕರು ಈ ಪ್ಯಾಕೇಜ್ ನ ಲಾಭ ಪಡೆಯಬೇಕಾಗಿ ಫ್ರೆಂಡ್ಸ್ ಕೇಟರರ್ಸ್ ನ ಮಾಲೀಕರಾದ ನವೀನ್ ಅಮೀನ್ ಉಡುಪಿ ಟೈಮ್ಸ್ ಗೆ ತಿಳಿಸಿದ್ದಾರೆ.
“ಸುಮಾರು 20 ವರ್ಷಗಳಿಂದ ಜನರ ಮೆಚ್ಚುಗೆ ಗಳಿಸಿದ ನಮ್ಮ ಸಂಸ್ಥೆ, ಎಲ್ಲ ಶ್ರೇಣಿಯ ಜನರನ್ನು ತಲುಪುವ ಮೂಲ ಉದ್ದೇಶವನ್ನು ಇಟ್ಟುಕೊಂಡಿದೆ. ಕೊರೋನಾ ಸಂಕಷ್ಟದ ಸಮಯದಲ್ಲಿ ಜನರು ಆರ್ಥಿಕವಾದ ಸಂಕಟವನ್ನು ಎದರಿಸುತ್ತಿದ್ದಾರೆ. ಹಾಗಾಗಿ 50 ಜನರ ಕಾರ್ಯಕ್ರಮಕ್ಕೆ ಕೇವಲ 30 ,000 ರೂಪಾಯಿಗಳಿಗೆ ಸುಸ್ಸಜ್ಜಿತ ಸಭಾಭವನ, ಜನರೇಟರ್ ವ್ಯವಸ್ಥೆ, ಧ್ವನಿವರ್ಧಕ, ಡೆಕೋರೇಷನ್, ಸಸ್ಯಾಹಾರ ಹಾಗು ಮಾಂಸಾಹಾರ ಊಟದ ವ್ಯವಸ್ಥೆಯನ್ನು ಮಾಡಲಾಗುವುದು. ಕೊರೋನಾ ಸಂಕಷ್ಟ ಮುಗಿಯುವವರೆಗೆ ಈ ಪ್ಯಾಕೇಜ್ ನ್ನು ನೀಡಲಿದ್ದೇವೆ. ಈ ಪ್ಯಾಕೇಜ್ ನಮ್ಮ ಗ್ರಾಹಕರಿಗೆ ಸಹಾಯವಾಗಲಿದೆ, ಈ ಕೊಡುಗೆಯನ್ನ ನಮ್ಮ ಗ್ರಾಹಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಫ್ರೆಂಡ್ಸ್ ಕೇಟರರ್ಸ್ ಮಾಲಕರಾದ ನವೀನ್ ಅಮೀನ್ ಶಂಕರಪುರ ತಿಳಿಸಿದ್ದಾರೆ.
Yaak ee thara madtiraa
madveyanne nambikondu Shamiyanadavru adugeyavru photographers decorators iveralla iruttare at least neevu package price jasthi madi avrigu kelsa kodi
What about M.C, photo, video, etc toast master, is this free?