ಶಿರ್ವ : ವಾರಿಯರ್ಸ್ ಗಳಿಗೆ ಕಥೋಲಿಕ್ ಸಭಾ, ಸ್ತ್ರೀ ಸಂಘಟನೆ ವತಿಯಿಂದ ಸನ್ಮಾನ

ಶಿರ್ವ: ಲಾಕ್ ಡೌನ್ ಸಂದರ್ಭದಲ್ಲಿ ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಶ್ರಮಿಸಿದ ಶಿರ್ವ ಪರಿಸರದ ಸ್ಥಳೀಯ ಆಶಾ ಕಾರ್ಯಕರ್ತೆಯರು, ಶಿರ್ವ  ಸಮುದಾಯ ಆರೋಗ್ಯ ಕೇಂದ್ರದ ದಾದಿಯರು ಹಾಗೂ ಪಂಚಾಯತ್ ಪೌರ ಕಾರ್ಮಿಕರನ್ನು ಗುರುತಿಸಿ, ಅವರ ಸೇವೆಗೆ ಗೌರವ ನೀಡಿ, ಶಿರ್ವ ಆರೋಗ್ಯ ಮಾತೆ ದೇವಾಲಯದ ವ್ಯಾಪ್ತಿಯ ಕಥೊಲಿಕ್ ಸಭಾ ಮತ್ತು ಸ್ತ್ರೀ ಸಂಘಟನೆಯ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
 ಕೊರೋನ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸಿದ 27 ಆಶಾಕಾರ್ಯಕರ್ತೆಯರು, ಶಿರ್ವ ಸಮುದಾಯ ಆರೋಗ್ಯ ಕೇಂದ್ರದ 7 ದಾದಿಯರು,10 ಪಂಚಾಯತ್ ಪೌರ ಕಾರ್ಮಿಕರು ಹಾಜರಿದ್ದು, ಇವರ ಅಪೂರ್ವ ಸೇವೆಯನ್ನು ಶ್ಲಾಘಿಸಿ, ಗೌರವಿಸಲಾಯಿತು.


ಆರೋಗ್ಯ ಮಾತೆ ದೇವಾಲಯದ  ಪ್ರಧಾನ ಧರ್ಮಗುರು ವಂ. ಡೆನಿಸ್ ಡೆಸಾ ಮಾತನಾಡುತ್ತಾ, ತಮ್ಮ ಕುಟುಂಬಗಳನ್ನು ಲೆಕ್ಕಿಸದೆ ಸಾರ್ವಜನಿಕರ ಸೇವೆಯನ್ನು ಮಾಡುತ್ತಿರುವ ಕೊರೋನ ವಾರಿಯರ್ಸ್ ಗಳ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.   ಸಹಾಯಕ ಧರ್ಮಗುರುಗಳಾದ ವಂ. ಅಶ್ವಿನ್ ಆರಾನ್ಹಾ, ವಂ. ರೋಹನ್ ಡಾಯಸ್, ವಿಶೇಷ ಆಹ್ವಾನಿತರಾಗಿ ಶಿರ್ವ ಆರಕ್ಷಕ ಠಾಣೆಯ ಉಪನಿರೀಕ್ಷಕರಾದ ಶ್ರೀಶೈಲ ದುಂಡಪ್ಪ, ಶಿರ್ವ ಗ್ರಾಮ ಪಂಚಾಯತ್ ಗ್ರಾಮ ಕರಣಿಕರಾದ ವಿಜಯ್, ಜಿಲ್ಲಾ ಪಂಚಾಯತ್ ಸದಸ್ಯರಾದ ವಿಲ್ಸನ್ ರೊಡ್ರಿಗಸ್, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಂತೋಷ್ ಕುಮಾರ್ ಬೈಲೂರು, ದೇವಾಲಯದ ಆರ್ಥಿಕ ಸಮಿತಿಯ ಕಾರ್ಯದರ್ಶಿ ಲೀನಾ ಮಚಾದೊ, ಕಥೊಲಿಕ್ ಸಭಾ ಶಿರ್ವ ಘಟಕದ ಅಧ್ಯಕ್ಷರಾದ ಜೆರಾಲ್ಡ್ ರೊಡ್ರಿಗಸ್, ಸ್ತ್ರೀ ಸಂಘಟನೆಯ ಅಧ್ಯಕ್ಷರಾದ ಆಗ್ನೆಸ್ ಬರ್ಬೋಜಾ ಉಪಸ್ಥಿತರಿದ್ದರು.


ಇದೇ ಸಂದರ್ಭದಲ್ಲಿ ಸಮುದಾಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಂತೋಷ್ ಕುಮಾರ್, ಬೈಲೂರು, ಶಿರ್ವ ಠಾಣಾಧಿಕಾರಿ ಶ್ರೀ ಶೈಲ ದುಂಡಪ್ಪ ಮತ್ತು ಗ್ರಾಮ ಪಂಚಾಯತ್ ಕರಣಿಕರಾದ ವಿಜಯ್ ಅವರನ್ನು ಶಾಲು ಹೊದಿಸಿ, ಫಲಪುಷ್ಪಗಳನ್ನು ನೀಡಿ ಅವರ ವಿಶೇಷ ಮುಂದಾಳತ್ವಕ್ಕೆ ಸನ್ಮಾನಿಸಲಾಯಿತು.
ಕಥೊಲಿಕ್ ಸಭಾ ಅಧ್ಯಕ್ಷ ಜೆರಾಲ್ಡ್ ರೊಡ್ರಿಗಸ್ ಸ್ವಾಗತಿಸಿ, ಮಾಜಿ ವಲಯಾಧ್ಯಕ್ಷ ಮೆಲ್ವಿನ್ ಆರಾನ್ಹಾ ವಂದಿಸಿದರು. ಗಿಲ್ಬರ್ಟ್ ಪಿಂಟೊ ಕಾರ್ಯಕ್ರಮ ನಿರೂಪಿಸಿದರು

Leave a Reply

Your email address will not be published. Required fields are marked *

error: Content is protected !!