ಆಯುರ್ವೇದ ಪದ್ಧತಿ ಬಳಕೆಯಿಂದ ಶಕ್ತಿ ಹೆಚ್ಚಳ- ಬಿ ಎಂ ಸುಕುಮಾರ್ ಶೆಟ್ಟಿ
ಉಡುಪಿ (ಉಡುಪಿ ಟೈಮ್ಸ್ ವರದಿ )- ಮನುಷ್ಯನ ಶರೀರ ದ್ರಢವಾಗಿದ್ದರೆ ರೋಗ ಬಾಧಿಸುವ ಭಯವಿರುವುದಿಲ್ಲಎಂಬುದಾಗಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಹೇಳಿದರು. ಆಲೂರಿನ ಚಿತ್ರಕೂಟ ಮತ್ತು ತೇಜಸ್ವದ ಸಂಸ್ಥೆಗಳು ಹೊರತಂದಿರುವ “ರಕ್ಷಾ ಪಂಚಕ” ಕಿಟ್ ಅನ್ನು ಮರವಂತೆ ಸಾಧನ ಸಮುದಾಯ ಭವನದಲ್ಲಿ ಭಾನುವಾರ ಲೋಕಾರ್ಪಣೆಗೊಳಿಸಿ ಮಾತನಾಡುತ್ತ ಅವರು ಆಯುರ್ವೇದ ಪದ್ದತಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಮತ್ತು ಔಷಧಗಳು ರೂಢಿಯಲ್ಲಿವೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಡಾ. ರೂಪಶ್ರೀ ಮರವಂತೆ ಮಾತನಾಡಿ ರಕ್ಷಾ ಪಂಚಕ ಒಳಗೊಂಡಿರುವ ಸ್ವಸ್ಥ ರಸಾಯನ ರಕ್ಷಕ್ ಹರ್ಬಲ್ ಟೀ ,ಸ್ವರ ಸುಧಾ, ನಾಸಾ ಮೃತ ,ಮತ್ತು ರಕ್ಷೋಘ್ನಧೂಪ ಪರಿಚಯಸಿ ಬಳಕೆಯ ವಿಧಾನ ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾರತೀಯ ವೈದ್ಯ ಪದ್ದತಿಯ ಕೇಂದ್ರೀಯ ಪರಿಷತ್ ಸದಸ್ಯ ಡಾ.ತನ್ಮಯ ಗೋಸ್ವಾಮಿ, ಭಾರತೀಯ ಆಯುಷ್ ಒಕ್ಕೂಟ ಕುಂದಾಪುರ ಘಟಕ ಅಧ್ಯಕ್ಷ ಡಾ.ರವೀಂದ್ರ, ಗ್ರಾಪಂ ಅಧ್ಯಕ್ಷೆ ಅನಿತಾ ಆರ್.ಕೆ. ಶುಭ ಹಾರೈಸಿದರು. ಹಿರಿಯ ಆಯುರ್ವೇದ ವೈದ್ಯ ಡಾ.ಎ.ಆರ್.ಆಚಾರ್ಯ, ನಿವೃತ್ತ ಉಪನ್ಯಾಸಕ ಎಸ್ ಜನಾರ್ಧನ ಉಪಸ್ಥಿತರಿದ್ದರು ಕೇದಾರ್ ಮರವಂತೆ ಪ್ರಾರ್ಥಿಸಿದರು ,ಡಾ ಅನುಲೇಖಾ ಬಾಯಾರಿ ಸ್ವಾಗತಿಸಿದರು, ಡಾ ರಾಜೇಶ್ ಬಾಯಾರಿ ವಂದಿಸಿದರು . ಸಿರಿ ಮರವಂತೆ ಕಾರ್ಯಕ್ರಮ ನಿರೂಪಿಸಿದರು…
ಆಲೂರಿನ ಚಿತ್ರಕೂಟ ಮತ್ತು ತೇಜಸ್ರೇದ ಸಂಸ್ಥೆ ಗಳು ಹೊರತಂದಿರುವ ರಕ್ಷ ಪಂಚಕ’ ಕಿಟ್ ಅನ್ನು ಶಾಸಕ ಜನಾರ್ದನ ಉಪಸ್ಥಿತರಿದ್ದರು. ಕೇದಾರ್ ಮರವಂತೆ ಬಿ.ಎಂ.ಸುಕುಮಾರ ಶೆಟ್ಟಿ ಲೋಕಾರ್ಪಣೆ ಮಾಡಿದರು. ಭಾರತೀಯ ವೈದ್ಯಪದ್ದತಿಯ ಕೇಂದ್ರೀಯ ಪರಿಷತ್ ಪ್ರಾರ್ಥಿಸಿದರು. ಡಾ.ಅನುಲೇಖಾ ಬಾಯಿರಿ ಸ್ವಾಗತಿಸಿದರು .
ಗ್ರಾ ಪಂ ಅಧ್ಯಕ್ಷೆ ಅನಿತಾ ಆರ್.ಕೆ, ಹಿರಿಯ ವೈದ್ಯ ಡಾ.ಎ.ಆರ್ ಆಚಾರ್ಯ ಮೊದಲಾದವರಿದ್ದರು.ಸಿರಿ ಮರವಂತೆ ಕಾರ್ಯಕ್ರಮ ನಿರೂಪಿಸಿದರು.
” ರಕ್ಷಾ ಕವಚ್ ಅನ್ನುವುದು ಆಹಾರ ಅದು ಔಷದಿಯಲ್ಲ, ಆಹಾರವನ್ನ ದಿನನಿತ್ಯ ನಾವು ಉಪಯೋಗಿಸುವಂತ್ತದ್ದು, ಹಾಗಾಗಿ ಈ ರಕ್ಷ ಕವಚವನ್ನು ದಿನನಿತ್ಯ ನೀವು ಆಹಾರದಂತೆ ಇದನ್ನು ಬಳಸಿದ್ದಲ್ಲಿ ರೋಗ ನಿರೋಧಕ ಶಕ್ತಿ ನಿಮ್ಮಲ್ಲಿ ಹೆಚ್ಚಾಗಿ ಆರೋಗ್ಯಯುತವಾಗಿ ಬದುಕಲು ಸಾಧ್ಯ. ರೋಗ ಬಂದ ನಂತರ ಚಿಕಿತ್ಸೆ ಪಡೆಯುವ ಬದಲು ರೋಗಬಾರದಂತೆ ಮುಂಜಾಗ್ರತೆ ವಹಿಸಿಕೊಳ್ಳುವುದು ಜಾಣತನ.” ಡಾ . ರಾಜೇಶ್ ಬಾಯಾರಿ