ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಈಜುವ ವಾಹನಕ್ಕೆ ಮಾತ್ರ ಪ್ರವೇಶ

ಕುಂದಾಪುರ – “ಕುಂದಾಪುರದ ಸರ್ವಿಸ್ ರಸ್ತೆಯಲ್ಲಿ ನೀರಿನಲ್ಲಿ ಚಲಿಸುವ ವಾಹನಗಳಿಗೆ ಮಾತ್ರ ಪ್ರವೇಶ ,ಈಜುಕೊಳ ಕಾಮಗಾರಿ ಪ್ರಗತಿಯಲ್ಲಿದೆ ,ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮಾತ್ರ ಪ್ರವೇಶ “ಎನ್ನುವ ಬೋರ್ಡ್ ಕುಂದಾಪುರದಲ್ಲಿ ಅಳವಡಿಕೆಯಾಗಿದೆ.

ನವಯುಗ ಅಂಡರ್ ಪಾಸ್ ಮತ್ತು ಫ್ಲೈ ಓವರ್ ಕಾಮಗಾರಿ ವಿಳಂಬ ಹಿನ್ನಲೆಯಲ್ಲಿ ದಿನನಿತ್ಯ ಕೆಸರು ನೀರಿನ ಸ್ನಾನ ಮಾಡುವ ಸಾರ್ವಜನಿಕರು ಬೇಸತ್ತು ಈ ಫಲಕವನ್ನ ಅಳವಡಿಸಿದ್ದಾರೆ ಮಳೆಗಾಲದಲ್ಲಿ ಸರ್ವಿಸ್ ರಸ್ತೆಯಲ್ಲಿ ನೀರು ತುಂಬಿ ಚಲಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದೆ. ಸರ್ವೀಸ್ ರಸ್ತೆಯಲ್ಲಿ ನೀರು ತುಂಬಿ ವಾಹನ ಸಂಚಾರ ದುಸ್ಥರವಾಗಿದ್ದು , ಸ್ಥಳೀಯರಿಂದ ನವಯುಗದ ಕಾಮಗಾರಿ ವಿಳಂಬ ವಿರೋಧಿಸಿ ಈ ರೀತಿಯ ಫಲಕವನ್ನು ಅಳವಡಿಕೆ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!