ಟೈಲರಿಂಗ್ ನವರಿಗೆ ಧನ ಸಹಾಯ ಮಾಡುವಂತೆ ಸಹಿ ಸಂಗ್ರಹದ ಮೂಲಕ ಆಗ್ರಹ
ಉಡುಪಿ – ಕರೋನ ಲಾಕ್ ಡೌನ್ ನ ಬೆನ್ನಲ್ಲೇ ತೀರಾ ಸಂಕಷ್ಟಕೊಳ್ಳಗಾದ ಹೆಚ್ಚಿನ ಶ್ರಮಿಕ ವರ್ಗಕ್ಕೆ ಸರ್ಕಾರ ಧನ ಸಹಾಯ ನೀಡಿ, ಟೈಲರಿಂಗ್ ವ್ರತ್ತಿಯವರನ್ನ ಕಡೆಗಣಿಸಿರುವುದು ವಿಷಾದನೀಯ. ಸಿದ್ದ ಉಡುಪಗಳ ಮಾರಾಟದ ಮದ್ಯೆ ಟೈಲರಿಂಗ್ ವೃತ್ತಿಜೀವನ ಬಹುದೊಡ್ಡ ಸವಾಲಾಗಿದ್ದು ಆದರೆ ಸರ್ಕಾರ ಇದರ ಬಗ್ಗೆ ಗಮನ ಕೊಡದೆ ಟೈಲರಿಂಗ್ ವೃತ್ತಿ ಯನ್ನ ಕಡೆಗಣಿಸಿರುವುದು ಭಾರಿ ಬೇಸರದ ಸಂಗತಿ.
ಹಾಗಾಗಿ ಈ ಸಂಬಂಧ ಕಷ್ಟದಲ್ಲಿರುವ ಟೈಲರಿಂಗ್ ಸಮಾಜಕ್ಕೆ ಧನ ಸಹಾಯ ನೀಡಲು ಸರ್ಕಾರದ ಗಮನ ಸೆಳೆಯಲು ರಾಜ್ಯದ ಬೇರೆ ಬೇರೆ ಮೂಲೆಗಳಿಂದ ಟೈಲರ್ ವೃತ್ತಿಯಲ್ಲಿರುವ ಲಕ್ಷಾಂತರ ಸಹಿ ಸಂಗ್ರಹಣೆ ಮಾಡಿ ಮುಖ್ಯಮಂತ್ರಿಗಳಿಗೆ ಹಾಗು ಕಾರ್ಮಿಕ ಸಚಿವರಿಗೆ ಅಂಚೆ ಮೂಲಕ ಮನವಿಯನ್ನ ಮಾಡಲಾಗಿದೆ. ಅಷ್ಟೇ ಅಲ್ಲದೆ ಇತ್ತೀಚೆಗಷ್ಟೇ ಆತ್ಮಹತ್ಯೆ ಮಾಡಿಕೊಂಡ ರಘುನಾಥ್ ಶೇರಿಗಾರ್ ರವರ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5 ಲಕ್ಷ ಪರಿಹಾರ ನೀಡಬೇಕೆಂದು ಕರ್ನಾಟಕ ಸ್ಟೇಟ್ ಟೈಲರಿಂಗ್ ಅಸ್ಸೋಸಿಷನ್ ಜಿಲ್ಲಾ ಸಮಿತಿ , ಉಡುಪಿ ಕ್ಷೇತ್ರ ಸಮಿತಿ ಸರಕಾರವನ್ನು ಒತ್ತಾಯಿಸಿದೆ.
Tailoring association demand is genuine. During the period of lock down, the living conditions of the people is really sad. Government should take immediate action for the sanction of relief to such people.