ಉಡುಪಿ: ಅಕ್ರಮ ಮರಳುಗಾರಿಕೆ ಇಬ್ಬರು ಅಧಿಕಾರಿಗಳ ವಜಾಕ್ಕೆ ಸರಕಾರಕ್ಕೆ ಮನವಿ

ಉಡುಪಿ – ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆಗೆ ತೊಡಗಿಕೊಂಡರೆ ಅಂಥವರ ಮೇಲೆ ಜಿಲ್ಲಾಡಳಿತ ನಿರ್ದಾಕ್ಷಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಜಗದೀಶ್ ಎಚ್ಚರಿಸಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿಸಿ ಸ್ವರ್ಣ ನದಿಯಲ್ಲಿ ಹೂಳೆತ್ತುವ ನೆಪದಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ಬಗ್ಗೆ ದೂರು ಬಂದಿದ್ದು, ಇದರ ಬಗ್ಗೆ ಈಗಾಗಲೇ ಪ್ರೈವೇಟ್ ಕಂಪ್ಲೇಟ್ ನ್ನು ನೀಡಿದ್ದು , 4 ವಾಹನಗಳನ್ನುವಶ ಪಡಿಸಿಕೊಳಲಾಗಿದೆ ಅಷ್ಟೇ ಅಲ್ಲದೆ ಇಬ್ಬರು ಅಧಿಕಾರಿಗಳನ್ನ ಸಸ್ಪೆಂಡ್ ಮಾಡುವಂತೆ ಸರಕಾರಕ್ಕೆ ಮನವಿಯನ್ನ ಮಾಡಲಾಗಿದೆ.

ಹಾಗಾಗಿ ಮರಳುಗಾರಿಕೆಯ ಕಾನೂನು ಸುಲಭವಾಗಿದೆ ಎಂದು ತಪ್ಪು ತಿಳುವಳಿಕೆಯಲ್ಲಿ ಅಕ್ರಮ ಮರಳುಗಾರಿಕೆಗೆ ತೊಡಗಿಕೊಂಡರೆ ಅಂಥವರ ಮೇಲೆ ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮ ಕೈಗೊಳುತ್ತದೆ ಎಂಬುದಾಗಿ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

1 thought on “ಉಡುಪಿ: ಅಕ್ರಮ ಮರಳುಗಾರಿಕೆ ಇಬ್ಬರು ಅಧಿಕಾರಿಗಳ ವಜಾಕ್ಕೆ ಸರಕಾರಕ್ಕೆ ಮನವಿ

  1. Good luck. During this difficult time of sevier spreading of Covid 19, breaking the lock down decipline, strict action should be taken against the sand stealing gang, through out Udupi District.

Leave a Reply

Your email address will not be published. Required fields are marked *

error: Content is protected !!