ರಾಜ್ಯ ಸಭಾ ಚುನಾವಣೆಗೆ ಬಿಜೆಪಿಯಿಂದ ಇಬ್ಬರು ಹೆಸರು ಫೈನಲ್ ?
ಬೆಂಗಳೂರು – ರಾಜ್ಯದಲ್ಲಿ ಕೊರೋನಾ ಸುನಾಮಿ ಎದ್ದಿರುವ ಬೆನ್ನಲ್ಲೇ ರಾಜ್ಯದಲ್ಲಿ ರಾಜ್ಯ ಸಭಾ ಸೀಟಿಗಾಗಿ ಗದ್ದಲ ಶುರುವಾಗಿದೆ . ಜೂನ್ 19 ಕ್ಕೆ ರಾಜ್ಯದಲ್ಲಿ ಖಾಲಿಯಾಗಿರುವ ನಾಲ್ಕು ರಾಜ್ಯಸಭೆ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಈಗಾಗಲೇ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮೂರು ರಾಜಕೀಯ ಪಕ್ಷಗಳು ಸಿದ್ದತೆಗೆ ಮುಂದಾಗಿವೆ.
ರಾಜ್ಯ ಬಿಜೆಪಿಯು ಈ ಬಗ್ಗೆ ಯೋಚಿಸಿದ್ದು 2 ರಾಜ್ಯ ಸಭಾ ಸ್ಥಾನಕ್ಕೆ ಇಬ್ಬರು ಅಚ್ಚರಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಆದರೆ ರಾಜ್ಯ ಬಿಜೆಪಿಯಲ್ಲಿ ಈ ಸೀಟಿಗಾಗಿ ಅನೇಕ ಜನ ಆಕಾಂಕ್ಷಿಗಳು ಇದ್ದರು 2 ಅಚ್ಚರಿಯ ಹೆಸರನ್ನು ಫೈನಲ್ ಮಾಡಿದೆ ಎಂಬ ಮಾಹಿತಿ ಹೊರಗೆ ಬಂದಿದೆ.
ಈಗಾಗಲೇ ಮುಖ್ಯವಾಗಿ ಪ್ರಭಾಕರ್ ಕೋರೆ, ರಮೇಶ್ ಕತ್ತಿ, ತೇಜಸ್ವಿನಿ ಅನಂತಕುಮಾರ್, ಸೇರಿದಂತೆ ಹಲವರು ಆಕಾಂಕ್ಷಿಗಳಿದ್ದರು ಕೂಡ ಅಚ್ಚರಿಯ ಎರಡು ಹೆಸರುಗಳನ್ನ ರಾಜ್ಯ ಬಿಜೆಪಿ ಫೈನಲ್ ಮಾಡಿದೆ ಎಂಬ ವಿಚಾರ ಬಲ್ಲ ಮೂಲಗಳಿಂದ ಹೊರ ಬಿದ್ದಿದೆ .
ಬಿಜೆಪಿ ಫೈನಲ್ ಮಾಡಿದ ಅಚ್ಚರಿಯ ಎರಡು ರಾಜ್ಯಸಭಾ ಅಭ್ಯರ್ಥಿಗಳ ಪೈಕಿ, ಗೋಲ್ಡ್ ಫಿಂಚ್ ಹೊಟೇಲ್ ಸಮೂಹ ಸಂಸ್ಥೆ ಮುಖ್ಯಸ್ಥ ಪ್ರಕಾಶ್ ಶೆಟ್ಟಿ ಮತ್ತು ರಾಜ್ಯ ಬಿಜೆಪಿ ಉಸ್ತುವಾರಿ ಪಿ ಮುರುಳೀಧರ ರಾವ್ ಹೆಸರು ಬಹುತೇಕ ಫೈನಲ್ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಹೀಗಾಗಿ ರಾಜ್ಯ ಬಿಜೆಪಿಯಲ್ಲಿ ಈಗಾಗಲೇ ಉಂಟಾಗಿರುವ ಭಿನ್ನಮತ ಇನ್ನಷ್ಟು ಹೆಚ್ಚಾಗಬಹುದೇ ಎಂದು ಕಾದು ನೋಡಬೇಕಿದೆ.