ಡಿ.16: ಉಳ್ಳಾಲ ಬೈಲು ಶ್ರೀವೈದ್ಯನಾಥ “ಧರ್ಮನೇಮ”ದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ
ಉಳ್ಳಾಲ (ಉಡುಪಿ ಟೈಮ್ಸ್ ವರದಿ) :ಇಲ್ಲಿನ ಬರಿಕೆ ಗುತ್ತು ಧರ್ಮ ನೇಮ ಸಮಿತಿ ಉಳ್ಳಾಲ ಬೈಲು ಶ್ರೀ ವೈದ್ಯನಾಥ, ಜುಮಾದಿ ಬಂಟ ದೈವಗಳ “ಧರ್ಮನೇಮ”ದ ಆಮಂತ್ರಣ ಪತ್ರಿಕೆಯು ಡಿಸೆಂಬರ್ 16 ರಂದು ಬೆಳಿಗ್ಗೆ 11.00 ಘಂಟೆಗೆ ಶ್ರೀ ಸೋಮನಾಥ ದೇವಸ್ಥಾನ ಚಾವಡಿ ಸೋಮೇಶ್ವರ ದಲ್ಲಿ ಬಿಡುಗಡೆ ಗೊಳ್ಳಲಿದೆ.
ಪತ್ರಿಕಾ ಬಿಡುಗಡೆ ಸಮಾರಂಭದಲ್ಲಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಸೋಮನಾಥ ದೇವಸ್ಥಾನದ ಅಧ್ಯಕ್ಷರಾದ ಬಿ. ರವೀಂದ್ರನಾಥ ರೈ, ಶ್ರೀ ಚಿರುಂಭ ಭಗವತಿ ಕ್ಷೇತ್ರ ಉಳ್ಳಾಲದ ಆಡಳಿತ ಮೊಕ್ತೇಸರರಾದ ಗಂಗಾಧರ ಉಳ್ಳಾಲ್,ಶ್ರೀ ಕ್ಷೇತ್ರ ಕೊಂಡಾಣದ ಕೆಳಗಿನ ಕೋಟೆಕಾರು ಗುತ್ತು 1ನೇ ಗುರಿಕಾರಾರಾದ ಮುತ್ತಣ್ಣ ಶೆಟ್ಟಿ ,ಶ್ರೀ ವೈದ್ಯನಾಥ ಸೇವಾ ಸಮಿತಿ ಉಳ್ಳಾಲ ಬೈಲು ಅಧ್ಯಕ್ಷರಾದ ಪ್ರವೀಣ್ ಕುಮಾರ್ ಉಪಸ್ಥಿತರಿರುವರು , ಕಾರ್ಯಕ್ರಮದ ನಿರೂಪಣೆ ಹಾಗೂ ಶುಭಾಶಂಸನೆಯನ್ನು ಕದ್ರಿ ನವನೀತ ಶೆಟ್ಟಿ ನಿರೂಪಿಸಲಿದ್ದಾರೆ ಎಂದು ಉಳ್ಳಾಲ ಬರಿಕೆ ಗುತ್ತು ಧರ್ಮನೇಮ ಸಮಿತಿಯ ಅಧ್ಯಕ್ಷರಾದ ಸುನಿಲ್ ಕುಮಾರ್ ಶೆಟ್ಟಿ ಉಡುಪಿ ಟೈಮ್ಸ್ ಗೆ ತಿಳಿಸಿದ್ದಾರೆ.