ಪಡುಬಿದ್ರಿ: ಮೊಬೈಲ್ ಟವರ್ ನ ಬ್ಯಾಟರಿ ಕಳವು
ಪಡುಬಿದ್ರಿ(ಉಡುಪಿ ಟೈಮ್ಸ್ ವರದಿ ): ಟವರ್ ಕಾರ್ಯಚರಣೆಗೆ ಅನುಕೂಲವಾಗುವಂತೆ ಶೆಡ್ನಲ್ಲಿದ್ದ ಬ್ಯಾಟರಿಗಳನ್ನುಕಳವುಗೈದ ಪ್ರಕರಣ ನಂದಿಕೂರು ಗ್ರಾಮದ ಕಾರ್ಕಳ ಪಡುಬಿದ್ರೆ ರಸ್ತೆಯ ದುರ್ಗಾಪರಮೇಶ್ವರಿ ದೇವಸ್ಥಾನದ ದ್ವಾರದ ಬಳಿ ನಡೆದಿದೆ.
ದಿನೇಶ್ (40) ನೀಡಿದ ದೂರಿನ ಅನ್ವಯ ದಿನೇಶ್ ರವರು ಬೆಂಗಳೂರಿನ ಪಿಟಿಪಿಎಲ್ ಕಂಪೆನಿಯಲ್ಲಿ ಟೆಕ್ನೀಶಿಯನ್ ಆಗಿ ಕೆಲಸ ಮಾಡಿಕೊಂಡಿದ್ದು ಕಂಪೆನಿಯು ಬಿಎಸ್ಎನ್ಎಲ್ ಕಂಪೆನಿಯ ನೆಟ್ವರ್ಕ್ ಕಾರ್ಯನಿರ್ವಹಣೆಯ ಗುತ್ತಿಗೆ ವಹಿಸಿಕೊಂಡಿರುತ್ತದೆ. ಕಾಪು ತಾಲೂಕು ನಂದಿಕೂರು ಗ್ರಾಮದ ಕಾರ್ಕಳ- ಪಡುಬಿದ್ರಿ ರಸ್ತೆಯ ನಂದಿಕೂರು ದುರ್ಗಾಪರಮೇಶ್ವರಿ ದೇವಸ್ಥಾನದ ದ್ವಾರದ ಬಳಿ ಇರುವ ಟವರ್ನ ಕೆಳಗಡೆ ತಗಡು ಶೀಟಿನ ಮಾಡು ಅಳವಡಿಸಿದ ತೆರೆದ ಶೆಡ್ನಲ್ಲಿ ಟವರ್ ಕಾರ್ಯಚರಣೆಗೆ ಅನುಕೂಲವಾಗುವಂತೆ ಶೆಡ್ನಲ್ಲಿ 6 ವರ್ಷ ಹಳೆಯದಾದ ಒಟ್ಟು 24 ಬ್ಯಾಟರಿಗಳನ್ನು ಇರಿಸಲಾಗಿದ್ದು ಯಾರೋ ಶೆಡ್ನ ಬೀಗ ಮುರಿದಿದ್ದು, ಶೆಡ್ನ ಒಳಗಡೆ ಇರಿಸಿದ್ದ ಬ್ಯಾಟರಿಗಳು ಕದ್ದಿರುವುದು ಬೆಳಕಿಗೆ ಬಂದಿದೆ. ಇದೀಗ ಪ್ರಕರಣ ಪಡುಬಿದ್ರೆ ಠಾಣೆಯಲ್ಲಿ ದಾಖಲಾಗಿದೆ