ಮಗಳಿಗೆ “ಕನ್ನಡ” ಎಂದು ನಾಮಕರಣ ಮಾಡಿದ ಭಾಷಾ ಪ್ರೇಮಿ
ಉಡುಪಿ (ಉಡುಪಿ ಟೈಮ್ಸ್ ವರದಿ): ಪರಭಾಷೆಗಳ ನಡುವೆ ನಲುಗುತ್ತಿರುವ ಕನ್ನಡ ವನ್ನು ಉಳಿಸಲು ಅನೇಕ ಭಾಷಾ ಪ್ರಿಯರು ಹೋರಾಟ ನಡೆಸುತ್ತಲೇ ಇದ್ದಾರೆ. ಆದರೆ ಇಲ್ಲೊಬ್ಬರು ಕನ್ನಡ ಪ್ರೇಮಿ ಯುವ ಉದ್ಯಮಿ ತನ್ನ ಮಗಳಿಗೆ ಕನ್ನಡ ಎಂಬ ಹೆಸರಿಡುವುದರ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಕುಂದಾಪುರ ತಾಲೂಕಿನ ನೆಂಪು ಪರಿಸರದ ಪ್ರತಾಪ್ ಮತ್ತು ಪ್ರತಿಮಾ ದಂಪತಿಗಳ ಹೆಣ್ಣು ಮಗುವಿಗೆ ಕನ್ನಡ ಎಂದು ನಾಮಕರಣ ಮಾಡುವ ಮೂಲಕ ಕನ್ನಡಾಭಿಮಾನ ಮೆರೆದಿದ್ದಾರೆ. ಇಂಟಿರಿಯರ್ ಡಿಸೈನಿಂಗ್ ಕಾಂಟ್ರಾಕ್ಟರ್ ಆಗಿರುವ ಪ್ರತಾಪ್ ಬೆಂಗಳೂರು ನಲ್ಲಿರುವ ಬನ್ನೇರುಘಟ್ಟ ದಲ್ಲಿ ವಾಸವಾಗಿದ್ದು, ವೃತ್ತಿಯ ಹಿನ್ನಲೆಯಲ್ಲಿ ತಮಿಳುನಾಡಿಗೆ ತೆರಳಿದ್ದ ಪ್ರತಾಪ್ ಶೆಟ್ಟಿ ಅವರಿಗೆ ಅಲ್ಲಿನ ತಮಿಳು ವೆಲ್ವಿ, ತಮಿಳರಸನ್ ಮತ್ತು ತಮಿಳ್ ದೊರೈ ಹೆಸರುಗಳು ಆಕರ್ಷಿಸಿತ್ತು. ಇದೆ ಸ್ಫೂರ್ತಿ ಪಡೆದು ಪ್ರತಾಪ್ ಪತ್ನಿಯ ಒಪ್ಪಿಗೆಯ ಮೇರೆಗೆ ಕನ್ನಡ ಶೆಟ್ಟಿ ಎಂದು ಮಗಳಿಗೆ ನಾಮಕರಣ ಮಾಡಿದ್ದಾರೆ.