ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿಗಳಿಗೆ ಹೆಚ್ಚಿಸಿರುವ ತೆರಿಗೆ ಕಡಿತಗೊಳಿಸಿದ ಸರ್ಕಾರ- ರಘುಪತಿ ಭಟ್ ಕೃತಜ್ಞತೆ

ಉಡುಪಿ (ಉಡುಪಿ ಟೈಮ್ಸ್ ವರದಿ): ರಾಜ್ಯದಲ್ಲಿ ಓಡಾಡುತ್ತಿರುವ ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿಗಳಲ್ಲಿ 13 ರಿಂದ 20ರ ಆಸನಗಳ ಸಾಮರ್ಥ್ಯದ ವಾಹನಗಳಿಗೆ ರೂ. 900 ತೆರಿಗೆ ವಿಧಿಸಲಾಗಿದ್ದು ಅದನ್ನು ರೂ. 700 ಕ್ಕೆ ಕಡಿತಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ರೂ. 900 ಕ್ಕೆ ಏರಿಕೆಗೊಳಿಸಿದ ತೆರಿಗೆಯನ್ನು ರೂ. 700 ಕ್ಕೆ ಇಳಿಕೆ ಮಾಡುವ ಬಗ್ಗೆ ಶಾಸಕ ಕೆ. ರಘುಪತಿ ಭಟ್ ಅವರು ಸದನದಲ್ಲಿ ಸಾರಿಗೆ ಸಚಿವರನ್ನು ಒತ್ತಾಯಿಸಿದ್ದರು. ಈ ಸಂದರ್ಭ ಸಾರಿಗೆ ಸಚಿವರಾದ ಲಕ್ಷ್ಮಣ ಸಂಗಪ್ಪ ಸವದಿ ಅವರು ತೆರಿಗೆ ಕಡಿಮೆಗೊಳಿಸುವ ಭರವಸೆಯನ್ನು ನೀಡಿದ್ದರು.

ಅದರಂತೆ ರಾಜ್ಯದಲ್ಲಿ 13 ರಿಂದ 20ರ ಆಸನಗಳ ಸಾಮರ್ಥ್ಯದ ವಾಹನಗಳಿಗೆ ವಿಧಿಸಿರುವ ತೆರಿಗೆಯನ್ನು ಬೇಡಿಕೆಯಂತೆ ರೂ. 700 ಗಳಿಗೆ ಕಡಿತಗೊಳಿಸಿ ಆದೇಶಿಸಿರುವುದರಿಂದ ರಾಜ್ಯದಲ್ಲಿ ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಚಲಾಯಿಸಿ ಜೀವನ ಸಾಗಿಸುತ್ತಿರುವವರಿಗೆ ಅನುಕೂಲವಾಗಿದೆ. ತೆರಿಗೆ ಕಡಿತಗೊಳಿಸಿ ಆದೇಶಿಸಿದ ಮುಖ್ಯಮಂತ್ರಿಯವರಾದ ಬಿ.ಎಸ್. ಯಡಿಯೂರಪ್ಪ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸಂಗಪ್ಪ ಸವದಿ ಅವರಿಗೆ ಶಾಸಕ ಕೆ ರಘುಪತಿ ಭಟ್ ಕೃತಜ್ಞತೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!