ಲಯನ್ಸ್ ಕ್ಲಬ್ ಬಂಟಕಲ್ಲು: SLRM ಘಟಕಕ್ಕೆ ಲಯನ್ಸ್ ಜಿಲ್ಲಾ ಗವರ್ನರ್ ಭೇಟಿ

ಉಡುಪಿ (ಉಡುಪಿ ಟೈಮ್ಸ್ ವರದಿ): ಜಿಲ್ಲಾ ಲಯನ್ಸ್ ನ ಸ್ವಚ್ಚನಾಡು – ನಮ್ಮ ನಾಡು ಕಾರ್ಯಕ್ರಮದಡಿ ಲಯನ್ಸ್ ಕ್ಲಬ್ ಬಂಟಕಲ್ಲು – ಬಿ.ಸಿ ರೋಡು ಇವರ ಆಶ್ರಯದಲ್ಲಿ ಶಿರ್ವ ಗ್ರಾಮ ಪಂಚಾಯತ್ ನ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ, ಸ್ವಚ್ಚತಾ ವಾರಿಯರ್ಸ್ ರವರಿಗೆ ಗೌರವ ಸಲ್ಲಿಸುವ ವಿನೂತನ ಕಾರ್ಯಕ್ರಮವು ಲಯನ್ಸ್ ಜಿಲ್ಲಾ ಗವರ್ನರ್ ಲ.ಎನ್.ಎಮ್ ಹೆಗಡೆ ಯವರ ಉಪಸ್ಥಿತಿಯಲ್ಲಿಇತ್ತೀಚಿಗೆ ನಡೆಯಿತು.

ಘಟಕದಲ್ಲಿ ಸ್ವಚ್ಚತ ಸಿಬ್ಬಂಧಿಯವರು ನಿರ್ವಹಿಸುವ ಕಾರ್ಯ ವಿಧಾನದ ಮಾಹಿತಿಯನ್ನು ಪಡೆದುಕೊಳ್ಳಲಾಯಿತು. ಕಸ ವಿಂಗಡಣೆ, ತ್ಯಾಜ್ಯದಿಂದ ಗೊಬ್ಬರ ತಯಾರಿ, ಪ್ಲಾಸ್ಟಿಕ್ ನಿರ್ವಹಣೆ ಮಾಡುವ ಬಗ್ಗೆ ಮಾಹಿತಿ ಪಡಕೊಳ್ಳಲಾಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ 11 ಮಂದಿ ಸ್ವಚ್ಚತಾ ವಾರಿಯರ್ಸ್ ರವರನ್ನು ಲಯನ್ಸ್ ಜಿಲ್ಲಾ ಗವರ್ನರ್ ರವರು ಶಾಲು ಹೊದಿಸಿ ಗೌರವಿಸಿ ಎಲ್ಲರಿಗೂ ಕೈ ಗವಸನ್ನು ವಿತರಿಸಿದರು.ಬಂಟಕಲ್ಲು ಲಯನ್ಸ್ ಕ್ಲಬ್ ನ ಈ ಕಾರ್ಯಕ್ರಮದ ಬಗ್ಗೆ ಶ್ಲಾಘನೆ ವ್ಯಕ್ತ ಪಡಿಸಿ ಈ ಘಟಕಕ್ಕೆ ಮುಂದಿನ ದಿನಗಳಲ್ಲಿ ಸಹಕರಿಸುವ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿ ಸ್ವಚ್ಚತಾ ಗಾರರ ಈ ಕಾರ್ಯವು ಸೈನಿಕರ ಸೇವೆಯಷ್ಟೇ ಪ್ರಾಮುಖ್ಯತೆ ಪಡೆದಿದೆ , ಇವರನ್ನು ಗೌರವಿಸುವ ಕೆಲಸ ನಿರಂತರವಾಗಿರಲಿಎಂದರು.

ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಅನಂತಪದ್ಮನಾಭ ನಾಯಕ್ ರವರು ಘಟಕದ ಕಾರ್ಯನಿರ್ವಹಣೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಲಯನ್ಸ್ ಸಂಸ್ಥೆಯ ಸಹಕಾರವನ್ನು ಕೋರಿದರು. ಗ್ರಾ.ಪಂ ಮಾಜಿ ಅಧ್ಯಕ್ಷೆ ವಾರಿಜಾ ಪೂಜಾರ್ತಿಯವರು ಶುಭಹಾರೈಸಿದರು. ಬಂಟಕಲ್ಲು ಲಯನ್ಸ್ ಕ್ಲಬ್ ಅಧ್ಯಕ್ಷ ಲ.ವಿಜಯ್ ಧೀರಾಜ್ ರವರು ಅಧ್ಯಕ್ಷತೆ ವಹಿಸಿದ್ದರು. ನಮ್ಮ ನಾಡು ಸ್ವಚ್ಟ ನಾಡು ಯೋಜನೆಯ ಲಯನ್ಸ್ ಪ್ರಾಂತೀಯ ಸಂಯೋಜಕ ಲ.ಕೆ ಆರ್ ಪಾಟ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲಾ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಬಂಟಕಲ್ಲು ಲಯನ್ಸ್ ಕ್ಲಬ್ ನ ಕೋಶಾಧಿಕಾರಿ ಲ.ದಿನೇಶ್ ಲಯನ್ಸ್ ಸದಸ್ಯರಾದ ಲ.ವೈಲೇಟ್ ಕಸ್ತಲಿನೊ, ಲ.ಅರುಣ್ ಬರ್ಬೋಜಾ, ಲ ಸದಾನಂದ ಪೂಜಾರಿ , ಪಂಚಾಯತ್ ಮಾಜಿ ಸದಸ್ಯೆ ಶಾಲೆಟ್ ದೀಪಿಕಾ ಡಿ’ಸೋಜಾ, ಘಟಕದ ಮೇಲ್ವಿಚರಕರಾದ ಕಿಶೋರ್, ರಕ್ಷಿತ್ ಉಪಸ್ಥಿತರಿದ್ದರು.
ಲಯನ್ಸ್ ಕಾರ್ಯದರ್ಶಿ ಲ.ಅರುಂಧತಿ ಜಿ ಪ್ರಭುರವರು ಧನ್ಯವಾದವಿತ್ತರು.

Leave a Reply

Your email address will not be published. Required fields are marked *

error: Content is protected !!