“#ಜಸ್ಟಿಸ್ ಫಾರ್ ರಕ್ಷಾ” ಟ್ವಿಟ್ ಗೆ ದೊರೆಯಿತು ಭಾರಿ ಬೆಂಬಲ, ಶ್ರೀಘ್ರ ನ್ಯಾಯಕ್ಕೆ ಒತ್ತಾಯ
ಉಡುಪಿ(ಉಡುಪಿ ಟೈಮ್ಸ್ ವರದಿ) : ಇತ್ತೀಚೆಗಷ್ಟೇ ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾದ ಬಿಜೆಪಿ ಮುಖಂಡನ ಪತ್ನಿ ರಕ್ಷಾ ಸಾವಿನ ತನಿಖೆಯನ್ನು ಶ್ರೀಘ್ರ ಮಾಡಬೇಕೆಂದು ಒತ್ತಾಯಿಸಿ #ಜಸ್ಟಿಸ್ ಫಾರ್ ರಕ್ಷಾ(# justice for raksha ) ಎಂಬ ಟ್ವಿಟರ್ ನಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಹಲವಾರು ಜನ ಟ್ವಿಟ್ ಮಾಡುವ ಮೂಲಕ ಭಾರಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇಂದು(ಸೆ 8) ಸಂಜೆ 5 ಗಂಟೆಯಿಂದ 12 ಗಂಟೆಯವರೆಗೆ ಟ್ವಿಟ್ಟರ್ ನ ಮೂಲಕ ನಡೆಯುವ ಈ ಅಭಿಯಾನಕ್ಕೆ ಈಗಾಗಲೇ ಸಾವಿರಾರು ಟ್ವಿಟ್ ಆಗಿದ್ದು. ರಕ್ಷಾ ಸಾವು ವೈದ್ಯರ ನಿರ್ಲಕ್ಷದಿಂದ ನಡೆದಿದ್ದು ಇದಕ್ಕೆ ಸೂಕ್ತ ತನಿಖೆಯಾಗಿ ನ್ಯಾಯ ದೊರಕುವಂತೆ ಮಾಡಿ ಎಂಬುದಾಗಿ ಟ್ವಿಟ್ಟರ್ ನಲ್ಲಿ ಜನ ಸರಕಾರಕ್ಕೆ ಒತ್ತಡ ಹೇರುತ್ತಿದ್ದಾರೆ.
ಟ್ವಿಟ್ಟರ್ ನಲ್ಲಿ ಜನರ ಆಕ್ರೋಶ : “ಕೊರೊನಾ ದಂಧೆಗೆ ಬಲಿಯಾದಳೇ ಸಹೋದರಿ ರಕ್ಷಾ!? ಜಿಲ್ಲಾಡಳಿತ ಮೌನಕ್ಕೆ ಕಾರಣವೇನು? “
“ಅಪರಾಧಿ ವೈದ್ಯರ ರಕ್ಷಣೆಗೆ ನಿಂತುಬಿಟ್ಟಿತೇ ಆಡಳಿತ ವರ್ಗ? ಸರಕಾರ ಕ್ರಮ ಕೈಗೊಳ್ಳಲು ಇನ್ನೆಷ್ಟು ಹೆಣ ಬೀಳಬೇಕು?”
ತನಿಖೆ ಹೆಸರಿನಲ್ಲಿ ಸಮಯ ಕಳೆದರೆ ಜನ ರಕ್ಷಾಳನ್ನು ಮರೆತುಬಿಡುತ್ತಾರೆ ಎನ್ನುವ ಯೋಚನೆ ಇದ್ದಲ್ಲಿ ಅದನ್ನು ಈಗಲೇ ಬಿಟ್ಟುಬಿಡಿ! ಇದು ಆರಂಭ ಅಷ್ಟೇ ಮುಂದಿನ ದಿನಗಳಲ್ಲಿ ಹೋರಾಟದ ಕಿಚ್ಚು ಹೇಗಿರಲಿದೆ ಅನ್ನೋದನ್ನ ಕಾದು ನೋಡಿ!
“ಉಡುಪಿ, ಮಣಿಪಾಲದ ವೈದ್ಯರೇ ವೈದ್ಯ ವೃತ್ತಿಗೆ ಕಳಂಕ ತಂದ ಮಿಷನ್ ಆಸ್ಪತ್ರೆಯ ವೈದ್ಯ ರಾಕೇಶ್ ನನ್ನು ಇಲ್ಲಿಂದ ಒದ್ದೋಡಿಸಿ ನಿಮ್ಮ ಗೌರವ ಕಾಪಾಡಿಕೊಳ್ಳಿ.”
“ಕರಾವಳಿಯ ಜನಪ್ರತಿನಿಧಿಗಳೇ ನೀವು ಬಂದರೆ ಮ್ಮೊಂದಿಗೆ, ನೀವು ಬರದಿದ್ದಲ್ಲಿ ನಿಮ್ಮನ್ನು ಬಿಟ್ಟು ರಕ್ಷಾ ಕೊಲೆಗೆ ನ್ಯಾಯ ದೊರಕಿಸುತ್ತೇವೆ! ಇದು ಮನವಿಯಲ್ಲ! ಕೊನೆಯ ಎಚ್ಚರಿಕೆ!” ಎಂಬುದಾಗಿ ಜನ ತೀವ್ರವಾಗಿ ಜಿಲ್ಲಾಡಳಿತ ಹಾಗು ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಮುಖ್ಯ ಮಂತ್ರಿ ಯಡಿಯೂರಪ್ಪ,ಆರೋಗ್ಯ ಸಚಿವ, ಸ್ಥಳೀಯ ಶಾಸಕರಿಗೆ ಟ್ಯಾಗ್ ಮಾಡಲಾಗಿದೆ.
We will continue to protest untill we seek justiceforRaksha@narendramodi@AmitShah@BSYBJP@KotasBJP@smritiirani@mla_sudhakar@sriramulubjp@drashwathcn@mvmeet@UdayKumarBJP@BSBommai@ShobhaBJP@BYRBJP@lalajibjp@nalinkateel#JusticeForRaksha