ಪಿಎಂ ಕನ್ಯಾ ಯೋಜನೆ : ಕಿಡಿಗೇಡಿಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ
ಉಡುಪಿ (ಉಡುಪಿ ಟೈಮ್ಸ್ ವರದಿ) : ‘ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ಪ್ರತಿ ತಿಂಗಳು 2000 ರೂಪಾಯಿ ನೇರವಾಗಿ ನಿಮ್ಮ ಖಾತೆಗೆ ಬರುತ್ತದೆ. ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ಯೋಜನೆ ಪಿಎಂ ಕನ್ಯಾ ಯೋಜನೆ.’ ಹೀಗೊಂದು ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಕಳೆದ ಎರಡು ತಿಂಗಳುಗಳಿಂದ ಶೇರ್ ಆಗುತ್ತಿದ್ದು, ಇದರ ಬಗ್ಗೆ ಉಡುಪಿ ಟೈಮ್ಸ್ ಗೆ ಅಂಚೆ ಇಲಾಖೆ ಸ್ಪಷ್ಟನೆ ನೀಡಿದೆ. ಇದೊಂದು ಸುಳ್ಳು ವದಂತಿಯಾಗಿದ್ದು ಇಂತಹ ಯಾವ ಯೋಜನೆ ಕೇಂದ್ರ ಸರ್ಕಾರದಿಂದ ಅಂಚೆ ಇಲಾಖೆಗೆ ಬಂದಿಲ್ಲ, ಹಾಗಾಗಿ ಇದೊಂದು ಸುಳ್ಳು ವದಂತಿ ಇದನ್ನು ನಂಬಬಾರದಾಗಿ ಅಂಚೆ ಇಲಾಖೆಯ ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ಸುಮಾರು ಎರಡು ತಿಂಗಳಿಂದ ಜನರು ಈ ಯೋಜನೆ ಬಗ್ಗೆ ಗೊಂದಲಕ್ಕಿಡಾಗಿದ್ದು ಇದೊಂದು ಒಳ್ಳೆಯ ಯೋಜನೆ ಎಂದು ನಂಬಿರುವ ಜನರು ಇತರರಿಗೆ ಶೇರ್ ಮಾಡುತ್ತಿದ್ದಾರೆ. ದಿನಪ್ರತಿ ನೂರಕ್ಕೂ ಅಧಿಕ ಫೋನ್ ಕರೆಗಳು ಸಾಮಾನ್ಯ ಸೇವಾ ಕೇಂದ್ರ (CSC) ಕ್ಕೆ ಬರುತ್ತಿದ್ದು, ಇನ್ನು ಹಲವಾರು ಮುಗ್ಧ ಜನರು ಇದನ್ನು ನಂಬಿ ಸಾಮಾನ್ಯ ಸೇವಾ ಕೇಂದ್ರ (CSC) ಕಚೇರಿಗಳಿಗೆ ತಮ್ಮ ದಾಖಲೆಗಳೊಂದಿಗೆ ಬರುತ್ತಿದ್ದಾರೆ ದಯವಿಟ್ಟು ಇದನ್ನು ಜನ ನಂಬಬಾರದಾಗಿ ಡಿಜಿಟಲ್ ಸೇವಾ ಕೇಂದ್ರದವರು (CSC) ಉಡುಪಿ ಟೈಮ್ಸ್ ನ ಮೂಲಕ ಕೇಳಿಕೊಂಡಿದ್ದಾರೆ