ಬ್ರಹ್ಮಾವರ: ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಯುವತಿ
ಉಡುಪಿ(ಉಡುಪಿ ಟೈಮ್ಸ್ ವರದಿ): ಪರಸ್ಪರ ಪ್ರೀತಿಸಿ ಮದುವೆಯ ಹಂತಕ್ಕೆ ತಲುಪುತ್ತಿದ್ದಂತೆ ಹುಡುಗನಿಗೆ ಬೇರೆ ಮದುವೆಯ ಸಿದ್ಧತೆ ನಡೆಯುತ್ತಿದ್ದಂತೆ ಎಂಬಿಎ ಪದವೀಧರೆ ಪ್ರಾಣ ಕಳೆದುಕೊಂಡ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದಿದೆ. ಪ್ರಾಣ ಕಳೆದುಕೊಂಡ ಯುವತಿ ಅನಿಶಾ ಎಂದು ಗುರುತಿಸಲಾಗಿದ್ದು, ಅನಿಶಾ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ . ಜಿಲ್ಲೆಯ ಬ್ರಹ್ಮಾವರ ತಾಲೂಕು ಸಾಯ್ಬರಕಟ್ಟೆ ಸಮೀಪದ ಕಾಜ್ರಳ್ಳಿ ನಿವಾಸಿ. ಅನಿಶಾ ಜಿ. ಪೂಜಾರಿ ಪ್ರೇಮ ಪಾಶಕ್ಕೆ ಸಿಲುಕಿದ ನತದೃಷ್ಠೆ.
ಮಧ್ಯಮ ವರ್ಗದ ಕುಟುಂಬದ ಅನಿಶಾ ಎಂಬಿಎ ಓದಿ ಶಿಕ್ಷಣ ಪಡೆದಿದ್ದಾರೆ. ಬೆಂಗಳೂರು ಖಾಸಗಿ ಕಂಪನಿ ಉದ್ಯೋಗದಲ್ಲಿರುವ ಅನಿಷಾ ಬುದ್ದಿವಂತೆ, ಹಾಗು ಅನೇಕ ಸಾಧನೆಗಳನ್ನು ಮಾಡಿರುವ ಹುಡುಗಿ , ಚೇತನ್ ಶೆಟ್ಟಿ ಹಾಗು ಅನಿಶಾ ಒಂದೆ ಊರಿನವರಾಗಿದ್ದು ಇಬ್ಬರ ನಡುವೆ ಪ್ರೇಮ ಅಂಕುರವಾಗಿತ್ತು. ಆದರೆ ಈಗ ಅನಿಷಾಳನ್ನು ಸಂಪೂರ್ಣ ತಿರಸ್ಕರಿಸಿದ ಯುವಕ ಚೇತನ್ ಬೇರೆ ಮದುವೆಯಾಗುವ ಸಿದ್ಧತೆ ನಡೆಸಿಕೊಂಡಿರುವ ವಿಚಾರ ಅನಿಷಾಳಿಗೆ ತಿಳಿಯುತ್ತಿದ್ದಂತೆ ಆತನ ಮನೆಯವರಿಗೆ ಡೆತ್ ನೋಟ್ ನ ಪ್ರತಿಯನ್ನ ಕಳಿಸಿ ಕೊಟ್ಟದ್ದು ಮಾತ್ರವಲ್ಲದೆ ಇದಕ್ಕಿಂತ ಮೊದಲು ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದರೂ ಆತ ಕಡೆಗಣಿಸಿದ್ದಾನೆ, ಪತ್ರದಲ್ಲಿ ತನಗೆ ಚೇತನ್ ಶೆಟ್ಟೆಯಿಂದ ಮೋಸ ಆಗಿರುವ ಬಗ್ಗೆ, ಹಾಗು ಮುಂದೆ ಇನ್ಯಾವ ಹುಡುಗಿಗೂ ಈ ತೊಂದರೆ ಆಗಬಾರದು ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ
ಚೇತನ್ ಗೆ ಮದುವೆ ನಿಶ್ಚಯವಾಗಿದ್ದು, ಮಂಟಪವನ್ನು ಬುಕ್ ಮಾಡಲು ಮುಂದಾಗಿದ್ದಾನೆ, ಎಂದು ತಿಳಿದು ನಾಲ್ಕು ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದಾಳೆ. ಚೇತನ್ ಗೆ ಸಂಬಂಧಪಟ್ಟ ಜಾಗದಲ್ಲಿ ಅನಿಶಾ ನೇಣಿಗೆ ಶರಣಾಗಿದ್ದಾಳೆ. ನಂಬಿಸಿ ಮೋಸ ಮಾಡಿರುವ ಬಗ್ಗೆ ಗೆಳತಿಗೆ ಸಂದೇಶಗಳನ್ನು ರವಾನಿಸಿದ್ದಾಳೆ. ತನ್ನ ಫೇಸ್ ಬುಕ್ ನಲ್ಲಿ ಚೇತನ್ ಒಬ್ಬ ಹುಡುಗಿ ಹುಚ್ಚ ಎಂದು ಬರೆದು ಫೋಟೋ ಅಪ್ಲೋಡ್ ಮಾಡಿದ್ದಾಳೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನಿಶಾ ಪೂಜಾರಿ ಸಾವಿನ ನಂತರ ಚೇತನ್ ತಲೆಮರೆಸಿಕೊಂಡಿದ್ದಾನೆ.
ಪೊಲೀಸರು ಆರಂಭದಲ್ಲಿ ಅಸಹಜ ಸಾವು ಪ್ರಕರಣ ದಾಖಲು ಮಾಡಿದ್ದು, ಬಿಲ್ಲವ ಸಂಘಟನೆ ಮಧ್ಯಪ್ರವೇಶದ ನಂತರ ಎಫ್‍ಐಆರ್ ದಾಖಲು ಮಾಡಿದ್ದಾರೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.