ಉಡುಪಿಯ ಹೆಸರಾಂತ ಬಾಲಾಜಿ ಹೋಂ ಅಪ್ಲೈಯನ್ಸಸ್ ಸ್ಥಳಾಂತರ
ಉಡುಪಿ(ಉಡುಪಿ ಟೈಮ್ಸ್ ವರದಿ): ಉಡುಪಿಯಲ್ಲಿ 1982ರಿಂದ ಗ್ರಾಹಕ ಸೇವೆಗೆ ಹಲವಾರು ಪ್ರಶಸ್ತಿ ಗಿಟ್ಟಿಸಿಕೊಂಡಿರುವ ಸಂಸ್ಥೆಗಳಾದ ರಾಘವೇಂದ್ರ ಆಚಾರ್ಯ ಎಚ್.ಪಿ. ಗ್ಯಾಸ್ ವಿತರಕರು ಮತ್ತು ಬಾಲಾಜಿ ಹೋಂ ಅಪ್ಲೈಯನ್ಸಸ್ ಸಂಸ್ಥೆಯು ಉಡುಪಿ ಸಿಟಿ ಬಸ್ ನಿಲ್ದಾಣದ ಸಮೀಪದಲ್ಲಿರುವ ಅಜಯ್ ಟವರ್ ಗೆ ಬುಧವಾರ ಇಂದು ಸ್ಥಳಾಂತರಗೊಂಡಿತು.
ಕೊರೋನಾ ಕಾರಣದಿಂದ ಮಠ, ಮಂದಿರಗಳು, ಅಂಗಡಿಗಳು ಬಾಗಿಲು ಮುಚ್ಚಿದೆ ಆದರೆ ಬಾಲಾಜಿ ಹೋಂ ಅಪ್ಲೈಯನ್ಸಸ್ ನೂತನ ಸಂಸ್ಥೆ ತೆರೆದು ಗ್ರಾಹಕರಿಗೆ ಸೇವೆ ನೀಡುತ್ತಿದೆ, ಎಂದು ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥರು ಉದ್ಘಾಟಿಸಿ ಮಾತನಾಡಿದರು.
ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಕೆ. ರಘುಪತಿ ಭಟ್, ಹರಿದ್ವಾರ ಪತಂಜಲಿ ಯೋಗ ಪೀಠದ ದಕ್ಷಿಣ ಭಾರತದ ಪ್ರಭಾರಿ ಭವರ್ ಲಾಲ್ ಆರ್ಯ, ಉದ್ಯಮಿ ಪುರುಷೋತ್ತಮ ಶೆಟ್ಟಿ, ಡಾ. ನಿತೇಶ್ ಹಾಗೂ ರಮೇಶ್ ರಾವ್ ಬೀಡು, ರತ್ನಕುಮಾರ್, ಅಜಿತ್ ಶೆಟ್ಟಿ, ಅರ್ಚಕರಾದ ಹರಿ ಉಪಾಧ್ಯಾಯ ಇತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉದ್ಘಾಟನಾ ಪ್ರಯುಕ್ತ ಪ್ರಸಿದ್ಧ ಕಂಪೆನಿಗಳ ಎಸಿ, ವಾಷಿಂಗ್ ಮೆಷಿನ್, ಮಿಕ್ಸಿ, ಕುಕ್ಕರ್, ಗ್ರೈಂಡರ್, ಗೀಸರ್, ಗ್ಯಾಸ್ ಸ್ಟವ್ ಇತ್ಯಾದಿ ಗೃಹೋಪಕರಣಗಳ ಮೇಲೆ ನ.15 ರ ತನಕ ಶೇ. 25 ರ ವರೆಗೆ ಆಕರ್ಷಕ ರಿಯಾಯಿತಿ ನೀಡಲಾಗುತ್ತದೆ. ತಜ್ಞವೈದ್ಯರಿಂದ ಉಚಿತ ತಪಾಸಣೆಗಳೊಂದಿಗೆ ಸಲಹೆ ದೊರಕಲಿದೆ. ರೂ.500 ಮೇಲ್ಪಟ್ಟು ಪತಂಜಲಿ ಉತ್ಪನ್ನಗಳು ಅಥವಾ ಔಷಧಿಗಳನ್ನು ದೂರವಾಣಿ ಮೂಲಕ ಆರ್ಟ್ ಮಾಡಿದಲ್ಲಿ ಉಚಿತ ಡೆಲಿವರಿ ಸೇವೆ ಲಭ್ಯವಿದೆ ಎಂದು ಸಂಸ್ಥೆಯ ಮಾಲಕರ ಪ್ರಕಟಣೆ ತಿಳಿಸಿದೆ.