ಉಡುಪಿ: ಕಾರ್ಮಿಕ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ವಿರುದ್ಧ ಜೆಡಿಎಸ್ ಪ್ರತಿಭಟನೆ
ಉಡುಪಿ (ಉಡುಪಿ ಟೈಮ್ಸ್ ವರದಿ): ಭೂ ಸುಧಾರಣಾ ಕಾಯ್ದೆ ಎಪಿಎಂಸಿ ಕಾಯ್ದೆ ಕಾರ್ಮಿಕ ಕಾಯ್ದೆ ತಿದ್ದುಪಡಿ,ಮಾಡಿ ಸುಗ್ರೀವಾಜ್ಞೆ ಹೊರಡಿಸಿದ ರಾಜ್ಯ ಸರಕಾರದ ವಿರುದ್ಧ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಉಡುಪಿ ಜಿಲ್ಲಾ ಜೆಡಿಎಸ್ ವತಿಯಿಂದ ಜಿಲ್ಲಾದ್ಯಕ್ಷರಾದ ಯೋಗೀಶ್ ವಿ ಶೆಟ್ಟಿ ಯವರು,ಪ್ರತಿಭಟನೆ ನಡೆಸಿ,ಅಪರ ಜಿಲ್ಲಾಧಿಕಾರಿ ಯವರ ಮೂಲಕ ರಾಜ್ಯ ಮುಖ್ಯಮಂತ್ರಿ ಮತ್ತು ರಾಜ್ಯ ಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಯೋಗೇಶ್ ವಿ ಶೆಟ್ಟಿ ,ಜಿಲ್ಲಾ ಅಧ್ಯಕ್ಷರು, ಉಡುಪಿ ಜಿಲ್ಲಾ ಜೆಡಿಎಸ್, ಶ್ರೀಕಾಂತ್ ಅಡಿಗ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ, ಜಯರಾಮ ಆಚಾರ್ಯ,ಜಯಕುಮಾರ್ ಪರ್ಕಳ ,ಬಿ.ಟಿ ಮಂಜುನಾಥ,ರಂಜಿತ್ ಬೈಂದೂರು,ಕಿಶೋರ್ ಕುಂದಾಪುರ,ರಾಜು ದೇವಾಡಿಗ ,ಪ್ರಕಾಶ್ ಶೆಟ್ಟಿ ಬೆಳ್ಳಂಪಳ್ಳಿ , ರವಿರಾಜ್ ಸಾಲಿಯಾನ್,ಶ್ರೀಕಾಂತ್ ಹೆಬ್ರಿ,ಎಸ್ ಪಿ ಬರ್ಬೋಜಾ,ಅಬ್ದುಲ್ ಹಮೀದ್ ಯೂಸೂಫ್,ರಮೇಶ್ ಕುಂದಾಪುರ,ಮಾರುತಿ ಮೊಗೇರ,ಶಂಶುದ್ದೀನ್ ಮಜೂರು,ವಾಲ್ಟರ್ ಬಾರ್ಕೂರು ,ರಶೀದ್ ಯು.ಎ,ಪ್ರಶಾಂತ್ ಭಂಡಾರಿ,ಪ್ರಶಾಂತ್ ಸಾಲಿಯಾನ್,ಮಹಮ್ಮದ್ ಹ್ಯಾರಿಸ್, ಸನವರ,ಸಂಪತ್,ಮತ್ತು ಪಕ್ಷದ ಕಾರ್ಯಕರ್ತರು ಹಾಜರಿದ್ದರು.