ಕುವೈತ್ ನಲ್ಲಿ ಬೀದರ್ ಕನ್ನಡಿಗರ ಸಂಕಷ್ಟ: ಆರತಿ ಕೃಷ್ಣ ಸ್ಪಂದನೆ

ಬೆಂಗಳೂರು(ಉಡುಪಿ ಟೈಮ್ಸ್ ವರದಿ): – ಕುವೈತ್ ನಲ್ಲಿ ಕಳೆದ ಮೂರು ತಿಂಗಳಿಂದ ಸಂಕಷ್ಟದಲ್ಲಿದ್ದ ಕರ್ನಾಟಕದ 175 ಜನ ಕಾರ್ಮಿಕರನ್ನು ತಾಯ್ನಾಡಿಗೆ ಕರೆಸಿಕೊಳ್ಳುವ ಬಗ್ಗೆ ನಿರಂತರ ಪ್ರಯತ್ನ ಪಡುತ್ತಿರುವ ಡಾ ಆರತಿ ಕೃಷ್ಣ.


ಲಾಕ್ ಡೌನ್ ಸಂದರ್ಭದಲ್ಲಿ ವಿದೇಶದಲ್ಲಿ ಸಿಲುಕಿದ ಸಾವಿರಾರು ಜನರನ್ನು ಸ್ವದೇಶಕ್ಕೆ ಸುರಕ್ಷಿತವಾಗಿ ಕರೆಸಿಕೊಂಡಿರುವ ಆರತಿಯವರು, ರಾಜ್ಯ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಯವರ ಮನವಿ ಮೇರೆಗೆ ರಾಜ್ಯದ ಬೀದರ್ ಜಿಲ್ಲೆಯ ಸುಮಾರು 175 ಜನರು ಕುವೈತ್ ನಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದ, ಇವರೆಲ್ಲರೂ ಕುವೈತ್ ನಲ್ಲಿರುವ ಮಂಜೇಶ್ವರ ಮೂಲದ ಮೋಹನ್ ದಾಸ್ ಕಾಮತ್ ರವರನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ಪಡೆದು, ಕಾರ್ಮಿಕರೊಂದಿಗೆ ಸಮಾಲೋಚನೆ ನಡೆಸಿದರು.

ಈ ಬಗ್ಗೆ ಮಾಲೀಕರು ಚಾರ್ಟರ್ ವಿಮಾನ ಮೂಲಕ ಕಾರ್ಮಿಕರನ್ನು ವಾಪಸ್ಸು ಕಳುಹಿಸುವ ಭರವಸೆ ನೀಡಿ ಮೂರು ತಿಂಗಳು ಕಳೆದರೂ ಇನ್ನೂ ಯಾವುದೇ ಬೆಳವಣಿಗೆ ಇಲ್ಲದ ಕಾರಣ ಕಾರ್ಮಿಕರು ಈಶ್ವರ್ ಖಂಡ್ರೆ ಯವರನ್ನು ಸಂಪರ್ಕಿದಿದ್ದಾರೆ, ಇದೀಗ ಡಾ. ಆರತಿ ಕೃಷ್ಣ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆಯವರು ಮಾಲೀಕರೊಂದಿಗೆ ಮಾತನಾಡಿ ಕೂಡಲೆ ಕಾರ್ಮಿಕರನ್ನು ಭಾರತಕ್ಕೆ ವಾಪಸ್ಸು ಕರೆಸುವ ವ್ಯವಸ್ಥೆ ಕಲ್ಪಿಸಲು ಹೇಳಿದ್ದು, ಇಲ್ಲವಾದಲ್ಲಿ ರಾಯಭಾರಿ ಕಛೇರಿಯೊಂದಿಗೆ ಮಾತನಾಡಿ ಕಾರ್ಮಿಕರನ್ನು ವಾಪಸ್ಸು ಕರೆಸುವ ವ್ಯವಸ್ಥೆಯಾಗಲಿದೆ ಎಂದು ಡಾ. ಆರತಿ ಕೃಷ್ಣ ರವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!