ಉಡುಪಿ: ಸೀಲ್ ಡೌನ್ ದಂಧೆ? ಪ್ರಶ್ನೆ ಮೂಡಿಸಿದೆ ಬಿಜೆಪಿ ನಾಯಕನ ಟ್ವಿಟ್

ಉಡುಪಿ(ಉಡುಪಿ ಟೈಮ್ಸ್ ವರದಿ): ಜಿಲ್ಲೆಯಲ್ಲಿ ಕೊರೋನಾ ದಂಧೆ ಆರಂಭವಾಗಿದೆಯೇ? ಹೀಗೊಂದು ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ಇದಕ್ಕೆ ಪೂರಕವೆಂಬಂತೆ ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಶ್ರೀಶ ನಾಯಕ್ ತಮ್ಮ ಟ್ವಿಟರ್ ಖಾತೆಯಲ್ಲಿ ಮುಖ್ಯಮಂತ್ರಿಗಳಿಗೆ ,ಗೃಹ ಸಚಿವರಿಗೆ ಹಾಗು ಶಾಸಕರಿಗೆ ಟ್ಯಾಗ್ ಮಾಡಿ ಮಾಡಿದ ಟ್ವಿಟ್ ಇದೀಗ ಉಡುಪಿ ಜಿಲ್ಲೆಯಲ್ಲಿ ಅನೇಕ ಪ್ರಶ್ನೆಗಳಿಗೆ ನಾಂದಿಯಾಗಿದೆ.

ಏನಿದು ದಂಧೆ? : ಸೀಲ್ ಡೌನ್ ಆದ ಅಂಗಡಿಗಳನ್ನು ಮತ್ತೆ ಆರಂಭಿಸಲು ಹಾಗು ಪಾಸಿಟಿವ್ ಇದ್ದರೂ ಸೀಲ್ ಡೌನ್ ಮಾಡದೇ ಇರಲು ಲಕ್ಷ ಗಟ್ಟಲೆ ಲಂಚ ಕೇಳಲಾಗುತ್ತಿದೆ. ಈ ಬಗ್ಗೆ ಉಡುಪಿಯ ಬಟ್ಟೆ ಅಂಗಡಿಗಳು, ಫಿಶ್ ನೆಟ್, ಗಾರ್ಮೆಂಟ್, ಹೋಟೆಲ್ ಉದ್ಯಮ, ಆಭರಣ ಮಳಿಗೆ, ವಿವಿಧ ವಾಹನ ಮಾರಾಟ ಮಳಿಗೆಗಳು, ವಸತಿ ನಿರ್ಮಾಣ ಸಂಸ್ಥೆಗಳು, ಮಾಲ್ ಗಳಲ್ಲಿ ನೂರಾರು ಕಾರ್ಮಿಕರು ದುಡಿಯುತ್ತಿದ್ದು, ಈಗಾಗಲೇ ಸಾವಿರಾರು ಜನ ಈ ಕೊರೋನಾ ಹೊಡೆತಕ್ಕೆ ಸಿಲುಕಿ ಕೆಲಸ ಕಳೆದುಕೊಂಡಿದ್ದಾರೆ ಆದರೆ ಈಗ ಅಧಿಕಾರಿ ವರ್ಗದ ಹಣದ ದಾಹಕ್ಕೆ ಹೆದರಿ ಅಂಗಡಿ ಮಾಲೀಕರು ತಮ್ಮ ವ್ಯಾಪಾರ ಮಳಿಗೆಯನ್ನು ಸ್ಥಗಿತಗೊಳಿಸುತ್ತಿದ್ದಾರೆ. ಈ ಕುರಿತಾಗಿ ಅನೇಕ ದೂರುಗಳ ಕರೆ ಉಡುಪಿ ಟೈಮ್ಸ್ ಕಚೇರಿಗೂ ಬಂದಿತ್ತು.

ದೊಡ್ಡ ಉದ್ಯಮಿಗಳ ಬಳಿ ಹೋಗುವ ಅಧಿಕಾರಿಗಳ ತಂಡ ನಿಮ್ಮ ಸಂಸ್ಥೆಯಲ್ಲಿ ಸಿಬ್ಬಂದಿಗಳಿಗೆ ಪಾಸಿಟಿವ್ ಇದೆ, ನಾವು ಸೀಲ್ ಡೌನ್ ಮಾಡಬೇಕಾಗುತದೆ, ಪಾಸಿಟಿವ್ ಬಂದರೆ ನಿಮ್ಮ ಉದ್ಯಮಕ್ಕೆ ಪೆಟ್ಟು ಬೀಳುತ್ತದೆ. ಇಂತಿಷ್ಟು ಲಕ್ಷ ನೀಡಿದರೆ ಸೀಲ್ ಡೌನ್ ಮಾಡಲ್ಲ ಎಂದು ಲಕ್ಷಾಂತರ ರೂ. ವಸೂಲು ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಕೆಲವೊದು ಮಾಲಕರು ಹಣ ನೀಡಿದರೆ, ಕೆಲವರು ವ್ಯಾಪಾರ ವಹಿವಾಟು ಇಲ್ಲದೆ ಹಣ ನೀಡಲಾಗದೆ ಉದ್ದಿಮೆಗಳನ್ನು ಬಂದ್ ಮಾಡಿದ್ದರೆ.

ಅಧಿಕಾರಿಗಳ ನಿದ್ದೆ ಕೆಡಿಸಿದ ಶ್ರೀಶ ನಾಯಕ್ ಟ್ವಿಟ್ – ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಶ್ರೀಶ ನಾಯಕ್ ಮಾಡಿರುವ ಟ್ವಿಟ್ ಇದೀಗ ಸಿಕಾಪಟ್ಟೆ ಸದ್ದು ಮಾಡಿದೆ. ಅವರು ತಮ್ಮ ಅಧಿಕೃತ ಟ್ವಿಟ್ ಖಾತೆಯಲ್ಲಿ ಮುಖ್ಯಮಂತ್ರಿ , ಗೃಹ ಸಚಿವ ಹಾಗು ಶಾಸಕರಿಗೆ ಟ್ಯಾಗ್ ಮಾಡಿ ಉಡುಪಿ ಅಧಿಕಾರಿಗಳ ಬಗ್ಗೆ ದೂರಿದ್ದಾರೆ. “ದಿನೇ ದಿನೇ ಹೆಚ್ಚುತ್ತಿರುವ ಕೊರೋನಾ ಜನರನ್ನು ಕಂಗಾಲು ಮಾಡಿದೆ, ಆದರೆ ಈ ಸಂದರ್ಭದಲ್ಲಿ ಸೀಲ್ ಡೌನ್ ಆದ ಕಂಪನಿಗಳನ್ನೂ ತೆರೆಯಲು ಉನ್ನತ ಅಧಿಕಾರಿಗಳು ಲಕ್ಷ ಗಟ್ಟಲೆ ಲಂಚ ಕೇಳಿ ಜನರನ್ನು ಸಾಯಿಸುವ ಪ್ರಯತ್ನ ಅಧಿಕಾರಿಗಳು ಮಾಡುತ್ತಿದ್ದಾರೆ” ಎಂದು ಬರೆದಿದ್ದಾರೆ.

ಜನ ಕೋವಿಡ್ ಭಯದಿಂದ ಮನೆಯಿಂದ ಹೊರಗೆ ಬರಲು ಹೆದರುತ್ತಿರುವ ಸಂದರ್ಭದಲ್ಲಿ ಅನೇಕ ಉದ್ಯಮಗಳು ಮಕಾಡೆ ಮಲಗಿದೆ. ಆದರೆ ಉಡುಪಿಯಲ್ಲಿ ಅಧಿಕಾರಿಗಳ ಹಣದ ವ್ಯಾಮೋಹಕ್ಕೆ, ಜನರ ರಕ್ತ ಹೀರುತ್ತಿರುವುದು ಅಸಹ್ಯಕರ ಲೂಟಿ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ದಿನ ದಿನಕ್ಕೂ ಏರುತ್ತಿರುವ ಕೊರೋನಾ ಪಾಸಿಟಿವ್ ಕೇಸುಗಳು ಕೂಡ ಜನರಲ್ಲಿ ಸಂಶಯಕ್ಕೆ ಎಡೆ ಮಾಡಿಕೊಟ್ಟಿದ್ದೆ. ಇನ್ನಾದರೂ ಇದರ ಬಗ್ಗೆ ಸಂಬಂಧಪಟ್ಟವರು ಉತ್ತರಿಸುವರೇ ? ಕಾದು ನೋಡಬೇಕಾಗಿದೆ.

1 thought on “ಉಡುಪಿ: ಸೀಲ್ ಡೌನ್ ದಂಧೆ? ಪ್ರಶ್ನೆ ಮೂಡಿಸಿದೆ ಬಿಜೆಪಿ ನಾಯಕನ ಟ್ವಿಟ್

  1. If it is going on ,then really it is very very on the part of officials who are trying to make money when people are trying to survive or trying to find a solution to problem caused by this pandemic covid-19.if it is going on those people may it be officials or any body who is empowered by the government to observe all these problems and find a solution as make the people to come out of hardship posed and cause for the normalcy and make them to earn some thing for them as well as workers working for it.but main thing is all the business men who are made struggle like this are should join together and show that particular trouble shooter to the concerned for proper action against so that henceforth no should dare to do such thing.only thing all should join together and rise against.

Leave a Reply

Your email address will not be published. Required fields are marked *

error: Content is protected !!