ಉಡುಪಿ : ಮೈ ರೋಡ್ ರನ್ನರ್ ಶಾಖೆ ಕಾರ್ಯಾರಂಭ

ಉಡುಪಿ: (ಉಡುಪಿ ಟೈಮ್ಸ್ ವರದಿ ): ಭಾರತ ದೇಶದ ಯುವ ಜನಾಂಗ ಸ್ವಉದ್ಯೋಗ ದಲ್ಲಿ ತೊಡಗಿಸಿ ಕೊಂಡರೆ ನಮ್ಮ ದೇಶದ ಆರ್ಥಿಕತೆ ಕೂಡ ಚುರುಕು ಗೊಳ್ಳುತ್ತದೆ ಎಂದು ಉಡುಪಿ ಶೇಕ್ ಶಾಕ್ ಹೋಟೆಲ್ ನ ಮಾಲೀಕರಾದ ಯಜ್ಞೆಶ್ ಸಾಲ್ಯಾನ್ ಹೇಳಿದರು.
ಉಡುಪಿ ಯಲ್ಲಿ ನೂತನವಾಗಿ ಪ್ರಾರಂಭಗೊಂಡ ಮಂಗಳೂರು ಮೂಲದ ಮೈ ರೋಡ್ ರನ್ನರ್ ಎಂಬ ಅಗತ್ಯ ವಸ್ತುಗಳನ್ನು ಮನೆ ಮನೆಗೆ ತಲುಪಿಸುವ ಡೋರ್ ಡೆಲಿವೆರಿ ಆಪ್ ನ ಉಡುಪಿ/ಮಣಿಪಾಲ ಶಾಖೆ ಯ ಕಚೇರಿಯನ್ನು ಅಂಬಾಗಿಲಿನಲ್ಲಿ ಉದ್ಘಾಟಿಸಿ ಮಾತನಾಡಿದರು.


ಕಾರ್ಯಕ್ರಮದಲ್ಲಿ ಮೈ ರೋಡ್ ರನ್ನರ್ ನ ಉಡುಪಿ ಮಣಿಪಾಲದ ಫ್ರಾಂಚೈಸ್ ನ ಮಾಲಕರಾದ ಪ್ರದೀಪ್ ಆಚಾರ್ಯ ಮಾತನಾಡುತ್ತ ಉಡುಪಿ ಮಣಿಪಾಲದ ಜನರಿಗೆ ಉಪಯೋಗ ಹಾಗೂ ಸಮಯ ಉಳಿತಾಯದ ಆಲೋಚನೆಯಲ್ಲಿ ಹೋಟೆಲ್ ನ ಊಟ ತಿಂಡಿ, ತರಕಾರಿ, ದಿನಸಿ ಸಾಮಾನು, ಮೀನು, ಮಾಂಸ ಇನ್ನಿತರ ಯಾವುದೇ ಅಗತ್ಯ ವಸ್ತುಗಳನ್ನು ಮೈ ರೋಡ್ ರನ್ನರ್ ಆಪ್ ನ ಮುಖಾಂತರ ಆರ್ಡರ್ ಮಾಡಿದರೆ ಅವರ ಮನೆಗೆ ತಲುಪಿಸುವ ಕೆಲಸವನ್ನು ಮೈ ರೋಡ್ ರನ್ನರ್ ಮುಖೇನಾ ಮಾಡುತ್ತೇವೆ ಎಂದು ತಿಳಿಸಿದರು. ಕಾರ್ಯಕ್ರಮ ದಲ್ಲಿ ಮೈ ರೋಡ್ ರನ್ನರ್ ನ ಸ್ಥಾಪಕರಾದ ಪ್ರಿನ್ಸ್ ಪಿಂಟೋ, ಮಿಶೆಲ್ ಪ್ರಿನ್ಸ್ ಪಿಂಟೋ, ಅಶ್ವಿನಿ ಪ್ರದೀಪ್ ಇನ್ನಿತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!