ಬಂಗಾರದ ಮೇಲೆ ಹೆಚ್ಚಿನ ಸಾಲ: ಆರ್ ಬಿ ಐ ಯಿಂದ ಗ್ರಾಹಕರಿಗೆ ಸಿಹಿ ಸುದ್ದಿ

ನವದೆಹಲಿ (ಉಡುಪಿ ಟೈಮ್ಸ್ ವರದಿ ): ಆಪತ್ ಕಾಲದ ಬಂಧು ಎಂದೇ ಹೆಸರು ಪಡೆದಿರುವ ಚಿನ್ನದ ಮೇಲೆ ಆರ್‌ಬಿಐ ಸಿಹಿ ಸುದ್ದಿಯನ್ನ ನೀಡಿದೆ ಭಾರತೀಯ ರಿಸರ್ವ್ ಬ್ಯಾಂಕ್ ‌ ಚಿನ್ನದ ಸಾಲ ನೀಡುವ ಷರತ್ತುಗಳನ್ನು ಸಡಿಲಗೊಳಿಸಿದೆ. ಗ್ರಾಹಕರು ಈಗ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಲ್ಲಿ ಇಡುವ ತಮ್ಮ ಚಿನ್ನಕ್ಕಾಗಿ ದೊಡ್ಡ ಮೊತ್ತದ ಸಾಲವನ್ನು ಪಡೆಯಬಹುದಾಗಿದೆ.

ಪ್ರಸ್ತುತ ಅಡಮಾನ ಕ್ರಮದಲ್ಲಿ ಚಿನ್ನದ ಮೌಲ್ಯದ ಶೇ. 75ರ ವರೆಗೆ ಸಾಲ ನೀಡಲಾಗುತ್ತಿದೆ. ಆದರೆ ಇನ್ನು ಮುಂದೆ ಶೇ. 90ರಷ್ಟು ಸಾಲ ಪಡೆಯಬಹುದು. ಮುಂದಿನ ಮಾರ್ಚ್‌ 31ರ ವರೆಗೆ ಈ ಸೌಲಭ್ಯ ಲಭ್ಯವಾಗಲಿದೆ. ಅಂದ ಹಾಗೇ ನೀವು ಶೇ. 90ರಷ್ಟು ಸಾಲ ಪಡೆದರೆ ಬಡ್ಡಿದರವೂ ಹೆಚ್ಚಾಗಲಿದೆ. ಸಂಕಷ್ಟದ ಕಾರಣಕ್ಕೆ ನೆರವಾಗುವ ಉದ್ದೇಶದಿಂದ ಈ ಸೌಲಭ್ಯವನ್ನು ಒದಗಿಸುತ್ತಿದೆ.ಈ ಕುರಿತಾಗಿ ಕೆಲವು ನಿರ್ದೇಶನಗಳನ್ನು ಆರ್‌ಬಿಐ ನೀಡಿದೆ. ವಿಶೇಷವಾಗಿ ಕೊರೊನಾ ಸಂದರ್ಭದಲ್ಲಿ ಜನರಿಗೆ ನೆರವಾಗುವ ಉದ್ದೇಶ ಇದಾಗಿದೆ.

ಆರ್‌ಬಿಐ ಎಟಿವಿ (ಲೋನ್‌ ಟು ವ್ಯಾಲು)ಯ ಅನುಪಾತವನ್ನು ಹೆಚ್ಚಿಸಿದೆ. ಇದರ ಫ‌ಲವಾಗಿ ಗ್ರಾಹಕರು ಶೇ. 90ರಷ್ಟು ಸಾಲ ಪಡೆಯಬಹುದು. ಉದಾಹರಣೆಗೆ ಪ್ರಸ್ತುತ ಚಾಲ್ತಿಯಲ್ಲಿದ್ದ ಕ್ರಮದಂತೆ, ಹಣಕಾಸು ಸಂಸ್ಥೆಗಳಲ್ಲಿ ಚಿನ್ನದ ಮೌಲ್ಯದ ಶೇ. 75ರಷ್ಟು ಸಾಲವನ್ನು ನೀಡಲಾಗುತ್ತದೆ. ಅಂದರೆ ಇಲ್ಲಿ ನಿಮ್ಮ ಚಿನ್ನದ ಮೌಲ್ಯ 1 ಲಕ್ಷ ಇರಲೇಬೇಕಾಗಿದೆ. ಅಂದರೆ ನೀವು 75,000 ರೂ. ಅನ್ನು ಸಾಲದ ರೂಪದಲ್ಲಿ ಪಡೆದುಕೊಳ್ಳಬಹುದು. ಆದರೆ ಈಗ ಅದರ ಪ್ರಮಾಣವನ್ನು ಹೆಚ್ಚಿಸಲಾಗಿದೆ. ನಿಮ್ಮ ಚಿನ್ನದ ಮೌಲ್ಯ 1 ಲಕ್ಷವಾಗಿದ್ದರೆ ಅದರ ಶೇ. 90 ಅಂದರೆ 90 ಸಾವಿರವನ್ನು ಸಾಲದ ರೂಪದಲ್ಲಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ವೈಯಕ್ತಿಕ ಸಾಲಗಳಿಗೆ ಹೋಲಿಸಿದರೆ ಗೋಲ್ಡ್‌ಲೋನ್‌ನ ಬಡ್ಡಿದರಗಳು ಕಡಿಮೆ. ಚಿನ್ನದ ಬೆಲೆಯಲ್ಲಿನ ಏರಿಕೆಯು ಈ ಸಾಲಗಳ ಬೇಡಿಕೆಯನ್ನು ಹೆಚ್ಚಿಸಿದೆ. ತಮ್ಮಲ್ಲಿರುವ ಚಿನ್ನಕ್ಕೆ ಹೆಚ್ಚಿನ ಸಾಲವನ್ನು ಪಡೆಯಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!