ರವೆ ಹಾಲುಬಾಯಿ
ಶುಭವಾಣಿ ಅಡಿಗ , ಬೆಂಗಳೂರು
ಹಾಲು ಬಾಯಿ ಸವಿಯಾದ ಸಿಹಿ ಖಾದ್ಯ, ಹಬ್ಬಗಳಲ್ಲಿ ಈ ಖಾದ್ಯವನ್ನ ಹೆಚ್ಚಾಗಿ ಮಾಡುತ್ತಾರೆ. ಆರೋಗ್ಯಕರವಾದ ಈ ಸಿಹಿ ತಿಂಡಿ ಸುಲಭವಾಗಿ ತಯಾರಿಸಬಹುದು ಅಕ್ಕಿಯಲ್ಲಿ ಹೆಚ್ಚಾಗಿ ಈ ತಿಂಡಿಯನ್ನ ಮಾಡುತ್ತಾರೆ ಆದರೆ ಇವತ್ತಿನ ಪಾಕ ಟೈಮ್ಸ್ ನಲ್ಲಿ ನಿಮಗಾಗಿ ರವಾ ಹಾಲು ಬಾಯಿ ಮಾಡುವ ವಿಧಾನ.
ರವೆ ಹಾಲು ಬಾಯಿ ಬೇಕಾಗುವ ಸಾಮಗ್ರಿ –
ಉಪ್ಪಿಟ್ಟು ರವೆ – ಕಪ್
ಕಾಯಿ ತುರಿ- 1 /2 ಕಪ್
ಬೆಲ್ಲ -1 . 1 /4 ಕಪ್
ನೀರು 4 -5 ಕಪ್
ಏಲಕ್ಕಿ – ಸ್ವಲ್ಪ
ಉಪ್ಪು -ಚಿಟಿಕೆ
ತುಪ್ಪ – 3 ಚಮಚ
ರವೆ ಹಾಲು ಬಾಯಿ ಮಾಡುವ ವಿಧಾನ – ಒಲೆಯ ಮೇಲೆ ಬಾಣಲೆಗೆ ಉಪಿಟ್ಟು ರವೆ ಹಾಕಿ ಬೆಚ್ಚಗೆ ಮಾಡಿ, ತಣಿದ ಮೇಲೆ ಕಾಯಿತುರಿ ಜೊತೆ 2 ಕಪ್ ನೀರು ಹಾಕಿ ನುಣ್ಣಗೆ ರುಬ್ಬಿ ಕೊಳ್ಳಿ. ಉಳಿದ ನೀರನ್ನು ಕಡಾಯಿಗೆ ಹಾಕಿ ಬೆಲ್ಲ ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ನಂತರ ರುಬ್ಬಿದ್ದ ಮಿಶ್ರಣ ಹಾಕಿ ಮಗುಚಿ. ಒದ್ದೆ ಕೈಯಲ್ಲಿ ಮುಟ್ಟಿ ನೋಡಿ ನಿಮ್ಮ ಕೈಗೆ ಅದು ಅಂಟದೆ ಇದ್ದರೆ ಈ ಮಿಶ್ರ ಆಗಿದೆ ಎಂದು ನೀವು ತಿಳಿಯಬಹುದು. ಕೊನೆಯದಾಗಿ ಏಲಕ್ಕಿ ಪುಡಿ ಹಾಕಿ. ಈ ಮಿಶ್ರಣವನ್ನು ತುಪ್ಪ ಸವರಿದ ಬಾಳೆ ಎಲೆಗೆ ಹಾಕಿ 1 /2 ಗಂಟೆಯ ನಂತರ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಂಡಲ್ಲಿ ಆರೋಗ್ಯಯುಕ್ತ ರುಚಿಯಾದ ಹಾಲುಬಾಯಿ ಸವಿಯಲು ಸಿದ್ದ.