ನಾಗರ ಪಂಚಮಿಯ ತಪ್ಪು ಸಂದೇಶ ರವಾನಿಸಿದ್ದಲ್ಲಿ ಕಠಿಣ ಕ್ರಮ: ಡಿಸಿ ಖಡಕ್ ವಾರ್ನ್

ಉಡುಪಿ-(ಉಡುಪಿ ಟೈಮ್ಸ್ ವರದಿ) : ನಾಗರ ಪಂಚಮಿಯಂದು ನಾಗನ ಪೂಜೆ ಮಾಡಬಾರದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು . ಇದೊಂದು ಸುಳ್ಳು ಸುದ್ದಿಯಾಗಿದ್ದು, ಇದನ್ನು ಸಾರ್ವಜನಿಕರು ನಂಬಬಾರದು ಹಾಗು ತಪ್ಪು ಅಭಿಪ್ರಾಯದ ಮೆಸೇಜನ್ನು ಫಾರ್ವರ್ಡ್ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾದಿಕಾರಿ ಜಿ ಜಗದೀಶ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕೋವಿಡ್ ನ ಈ ಸಂದರ್ಭದಲ್ಲಿ ಯಾವುದೇ ಹಬ್ಬವನ್ನು ಸಾರ್ವಜನಿಕವಾಗಿ ಆಚರಣೆ ಮಾಡಬಾರದು, ಅವರವರ ಮನೆಯಲ್ಲಿ ನಾಗಪೂಜೆ ಮಾಡಲು ನಾಗರಪಂಚಮಿ ಆಚರಣೆ ಮಾಡಲು ಯಾರ ಅನುಮತಿಯ ಅಗತ್ಯವಿಲ್ಲ, ಸಾರ್ವಜನಿಕರು ಒಟ್ಟಿಗೆ ಸೇರಿ ಆಚರಣೆ ಮಾಡಲು ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ಪಷ್ಟ ಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!