ಜೂನ್ 1 ರಿಂದ ಭಕ್ತರಿಗೆ ಸಿಗಲಿದೆ ಧರ್ಮಸ್ಥಳ ಮಂಜುನಾಥನ ದರ್ಶನ
ಮಂಗಳೂರು, ಮೇ 27: ಕರ್ನಾಟಕದ ಧರ್ಮದೇಗುಲ ಎಂದೇ ಪ್ರಸಿದ್ಧಿಯಾಗಿರುವ ಶ್ರೀಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಾಲಯದ ಆಡಳಿತ ಮಂಡಳಿ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡುತ್ತಿದೆ! ಎಂಬ ಮಾಹಿತಿ ಹೊರ ಬಿದ್ದಿದೆ . ಕೊರೊನಾ ಹಾವಳಿಯಿಂದ ಎಲ್ಲ ಧರ್ಮಕ್ಷೇತ್ರಗಳು ಬಾಗಿಲು ಮುಚ್ಚಿದ್ದು ಸುಮಾರು ಎರಡು ತಿಂಗಳು ಎಲ್ಲಾ ದೇವಾಲಯಗಳಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಈಗ, ರಾಜ್ಯದ ಎಲ್ಲಾ ದೇವಾಲಯಗಳನ್ನು ಭಕ್ತರಿಗೆ ತೆರೆಯಲು ಸರಕಾರ ನಿರ್ಧರಿಸಿದೆ. ಮುಜರಾಯಿ ಮತ್ತು ಕಂದಾಯ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಯಡಿಯೂರಪ್ಪ, ಮಂಗಳವಾರ (ಮೇ 26) ಸಭೆ ನಡೆಸಿದ್ದರು. ಸಭೆಯ ನಂತರ ಈ ಬಗ್ಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆಯನ್ನು ನೀಡಿದ್ದರು. ದೇವರ ಹೆಸರಿನಲ್ಲಿ ಪ್ರಮಾಣ ಮಾಡಿ: ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮನವಿ ಸರಕಾರ ಏನೋ, ಭಕ್ತರಿಗೆ ದೇವಾಲಯದ ಬಾಗಿಲು ತೆರೆಯಲು ಅನುಮತಿ ನೀಡಿದೆಯಾದರೂ, ಕೇಂದ್ರ ಸರಕಾರದ ಅಂತಿಮ ಅನುಮತಿಗೆ ಕಾಯುತ್ತಿದ್ದೇವೆ ಎಂದು ಸಿಎಂ ಈಗಾಗಲೇ ಹೇಳಿದ್ದಾರೆ.
ಮುಜರಾಯಿ ಇಲಾಖೆಯ ಜೊತೆ ಮಾತುಕತೆ ನಡೆಸಿದ ಮುಖ್ಯ ಮಂತ್ರಿ ಮಂಗಳವಾರದ ಸಭೆಯ ನಂತರ ಮುಜರಾಯಿ ವ್ಯಾಪ್ತಿಯ ಮತ್ತು ಹೊರಗಿನ ದೇವಾಲಯಗಳಲ್ಲಿ ಭಕ್ತರಿಗೆ ಪ್ರವೇಶ ನಿರ್ಬಂಧವನ್ನು ತೆರವುಗೊಳಿಸಲು ಸರಕಾರ ನಿರ್ಧರಿಸಿತ್ತು. ಈ ಸಂಬಂಧ ಧರ್ಮಸ್ಥಳದ ಧರ್ಮಾಧಿಕಾರಿ ವೀರೆಂದ್ರ ಹೆಗ್ಗಡೆಯವರ ಬಳಿ ಸಮಾಲೋಚಿಸಿದ್ದೇನೆ. ಅವರು ಕೊಟ್ಟ ಸಲಹೆಯನ್ನು ಪಡೆದುಕೊಂಡಿದ್ದೇವೆ ಎಂದು ಸಿಎಂ ಹೇಳಿದ್ದರು. ಸೋಮವಾರದಿಂದ ದೇವಾಲಯದ ಬಾಗಿಲು ತೆರೆಯುವ ನಿರ್ಧಾರ ಧರ್ಮಸ್ಥಳ ದೇವಾಲಯ ಹೊರಡಿಸಿದ ಪ್ರಕಟಣೆಯ ಪ್ರಕಾರ, ಜೂನ್ ಒಂದರಿಂದ, ದೇವಾಲಯದ ಬಾಗಿಲು ಭಕ್ತರಿಗೆ ತೆರೆಯಲಿದೆ. ಸರಕಾರ ನೀಡಿರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ, ಭಕ್ತರಿಗೆ ಸೋಮವಾರದಿಂದ ದೇವಾಲಯದ ಬಾಗಿಲು ತೆರೆಯುವ ನಿರ್ಧಾರಕ್ಕೆ ಬರಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಕೊರೊನಾ ನಂತರ ದೇವಾಲಯ ಓಪನ್ ದೇವಾಲಯದ ಪ್ರಕಟಣೆ ಹೀಗಿದೆ. “ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥಸ್ವಾಮಿ ದೇವಾಲಯವು ಜೂನ್ ಒಂದರಿಂದ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು. ಸರಕಾರದ ಆದೇಶದಂತೆ, ಸ್ವಚ್ಚತೆ, ಸ್ಯಾನಿಟೈಸರ್ ಬಳಕೆ, ಥರ್ಮಲ್ ಸ್ಕ್ರೀನಿಂಗ್ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಂಡು ಸ್ವಾಮಿಯ ದರ್ಶನಕ್ಕೆ ಅವಕಾಶ ನೀಡಲಾಗುವುದು”ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. ದೇವಾಲಯದ ಆನ್ಲೈನ್ ನಲ್ಲಿ ಲಾಡ್ಜ್ ಬುಕ್ಕಿಂಗ್ ಲಭ್ಯವಿಲ್ಲ ಆದರೆ, ಧರ್ಮಸ್ಥಳದಲ್ಲಿರುವ ಲಾಡ್ಜ್ ಗಳಲ್ಲಿ ಸದ್ಯ ಉಳಿದುಕೊಳ್ಳಲು ಅವಕಾಶವಿಲ್ಲ. ಯಾಕೆಂದರೆ ದೇವಾಲಯದ ಆನ್ಲೈನ್ ನಲ್ಲಿ ಲಾಡ್ಜ್ ಬುಕ್ಕಿಂಗ್ ಲಭ್ಯವಿಲ್ಲ. ಆರಂಭದಲ್ಲಿ ಎಷ್ಟು ಭಕ್ತರಿಗೆ ದೇವರ ದರ್ಶನಕ್ಕೆ ಅನುಮತಿ ಸಿಗುವುದು ಎನ್ನುವುದರ ಬಗ್ಗೆ ಇನ್ನೂ ಸ್ಪಷ್ಟನೆ ಸಿಗಬೇಕಿದೆ ಇನ್ನು ಸಿಗಬೇಕಾಗಿದೆ.